ಕೊನೆಗೂ ಬೆಳ್ಳಿತೆರೆಗೆ ಕಾಲಿಟ್ಟ ಗಟ್ಟಿಮೇಳ ಖ್ಯಾತಿಯ ನಿಶಾ ಮಿಲನಾ..! ಯಾವ ಸಿನಿಮಾ ಗೊತ್ತೇ..? ವಿಡಿಯೋ ನೋಡಿ

Updated: Monday, February 22, 2021, 09:09 [IST]

ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಈಗಾಗ್ಲೇ ಪ್ರಸಾರ ಆಗ್ತಿವೆ. ಅದರಲ್ಲಿ ಗಟ್ಟಿಮೇಳ ಧಾರವಾಹಿ ಕೂಡ ಒಂದು.  ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ಅವರು ಕೂಡ ಇದೀಗ ಸಿನಿಮಾ ಒಂದರಲ್ಲಿ ನಟಿಸಲು ಅವಕಾಶ ಬಂದಿದೆಯಂತೆ ಗಟ್ಟಿಮೇಳ ಧಾರವಾಹಿಯ ಮೂಲಕ ನಿಶಾ ರವಿಕೃಷ್ಣನ್ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು, ಅಭಿಮಾನಿಗಳು ಇವರನ್ನ ರೌಡಿ ಬೇಬಿ ಎಂದೆ ಕರೆಯುತ್ತಾರೆ. ಮತ್ತು ಅಷ್ಟೇ ಖ್ಯಾತರಾಗಿದ್ದಾರೆ ಈ ನಿಶಾ. ಹೌದು ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರ ಮಗ ವಿನಯ್ ರಾಜಕುಮಾರ್ ಮತ್ತು ನಟಿ ಅದಿತಿ ಪ್ರಭುದೇವ್ ಅವರು ಅಭಿನಯ ಮಾಡ್ತಿರುವ 'ಅದೊಂದಿತ್ತು ಕಾಲ' ಎಂಬ ಚಿತ್ರದಲ್ಲಿ ಗಟ್ಟಿಮೇಳ ನಿಶಾರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ   

Advertisement

ಎಂದು ತಿಳಿದುಬಂದಿದೆ. ಈ ಕ್ ಸಿನಿಮಾ ಮೂಲಕ ಮೂಲಕ ನಟಿ ನಿಶಾ ಬೆಳ್ಳಿತೆರೆಗೆ  ಪಾದಾರ್ಪಣೆ ಮಾಡಲಿದ್ದಾರೆ. ಹಾಗೆನೇ ನಿಶಾರವರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರುವ ಮತ್ತೊಬ್ಬ ಕಿರುತೆರೆ ನಟಿ ಆಗಿದ್ದಾರೆ ಎಂದು ಹೇಳಬಹುದು.ಈ ಕುರಿತು ಸಿನಿಮಾದ ಮುಹೂರ್ತ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಮಾತಾಡಿದ್ದು, "ನಾನು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದೇ, ಇದು ನನ್ನ ಮೊದಲ ಸಿನಿಮಾ. ಅದರಲ್ಲೂ ವಿನಯ್ ಸರ್ ಜೊತೆ ನಟಿಸುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಕೀರ್ತಿ ಹಾಗೂ ನಿರ್ಮಾಪಕರಿಗೆ ನನ್ನ ಧನ್ಯವಾದಗಳು" ಎಂದು ಅವರು ನಿಶಾ ಹೇಳಿದರು.    

Advertisement

ಇಷ್ಟಲ್ಲದೆ ನಿಶಾ ರವಿಕೃಷ್ಣನ್ ಪಟಪಟನೆ ಮಾತನಾಡುವ ಪಾತ್ರ ಒಂದರಲಿ, ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸಿದ್ದು, ಇದೀಗ "ಈ ಸಿನಿಮಾದಲ್ಲಿ ಬೇರೆ ಪಾತ್ರ ಸಿಕ್ಕಿರುವುದು ತುಂಬಾ ಖುಷಿಯಾಗಿದೆ, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು" ಎಂಬುದಾಗಿ ಕೂಡ ಹೇಳಿದ್ದಾರೆ...