30 ಕ್ಕೂ ಹೆಚ್ಚು ನಂಬರ್ ಗಳನ್ನು ಬ್ಲಾಕ್ ಮಾಡಿದ ನಿತ್ಯ ಮೇನನ್. ಯುವಕನೊಬ್ಬನ ಕರಾಳ ಮುಖ ಬಿಚ್ಚಿಟ್ಟ ನಿತ್ಯ

By Infoflick Correspondent

Updated:Friday, September 23, 2022, 21:00[IST]

30 ಕ್ಕೂ ಹೆಚ್ಚು ನಂಬರ್ ಗಳನ್ನು ಬ್ಲಾಕ್ ಮಾಡಿದ ನಿತ್ಯ ಮೇನನ್. ಯುವಕನೊಬ್ಬನ ಕರಾಳ ಮುಖ ಬಿಚ್ಚಿಟ್ಟ ನಿತ್ಯ

ದುಂಡನೆಯ ಮುಖ, ಬಟ್ಟಲ ಕಂಗಳ ಚೆಲುವೆ ನಿತ್ಯ ಮೆನನ್ ಬಹುಭಾಷಾ ನಟಿಯಾಗಿರುವ ಇವರು ಕನ್ನಡದಲ್ಲಿಯೂ ಕೂಡ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಜೋಶ್, ಮೈನಾ ಕೋಟಿಗೊಬ್ಬ 2 ಈ ಕೆಲವು ಸಿನಿಮಾಗಳಲ್ಲಿ ನಿತ್ಯಾನ ಅಭಿನಯಿಸಿದ್ದಾರೆ. ಇನ್ನು ಕೆಲವು ತಮಿಳು ಮಲಯಾಳಂ ಎಲ್ಲಾ ಭಾಷೆಗಳಲ್ಲಿ ಬಹಳ ಫೇಮಸ್ ನಟಿ.

ಬಹು ಬೇಡಿಕೆಯ ನಟಿ ಕೂಡ ಹೌದು. ಇತ್ತೀಚಿಗೆ ಸಿನಿಮಾ ಗಿಂತಲೂ ಹೆಚ್ಚಾಗಿ ನಿತ್ಯ ಮೆನನ್ ಅವರು ತಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಸುದ್ದಿಯಲ್ಲಿದ್ರು. ನಿತ್ಯ ಮೆನನ್ ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಚಿತ್ರರಂಗದ ತುಂಬೆಲ್ಲ ಹಬ್ಬಿತು. ಆದರೆ ನಿತ್ಯ ಮೆನನ್ ಸದ್ಯ ನನಗೆ ಮದುವೆಯ ವಿಚಾರವಿಲ್ಲ ಅಂತ ಹೇಳಿದ್ದಾರೆ. ಇನ್ನು ಈ ವಿಷಯದ ಜೊತೆಗೆ ತನಗೆ ತೊಂದರೆ ಕೊಡುತ್ತಿದ್ದ ಒಬ್ಬ ಹುಡುಗನ ಬಗ್ಗೆಯೂ ಕೂಡ ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ. ಅವನಿಂದ ತನಗೆ ಎಷ್ಟೇಲ್ಲಾ ಕಿರುಕುಳ ಉಂಟಾಗಿದೆ ಅಂತ ಬಹಳ ನೋವಿನಿಂದ ನಿತ್ಯ ಮೆನನ್ ಹೇಳಿದ್ದಾರೆ.

ಆ ವ್ಯಕ್ತಿ ಬೇರೆ ಯಾರು ಅಲ್ಲ. ಮಲಯಾಳಂ ಭಾಷೆಯ ಚಿತ್ರಗಳನ್ನು ವಿಮರ್ಶೆ ಮಾಡುವ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿರುವ ಸಂತೋಷ್ ವಾರ್ಕಿ. ಮೋಹನ್ ಲಾಲ್ ಅವರ ಬಹುದೊಡ್ಡ ಅಭಿಮಾನಿಯಾಗಿರುವ ಸಂತೋಷ ಅವರ ಎಲ್ಲಾ ಸಿನಿಮಾಗಳ ವಿಮರ್ಶೆಯನ್ನು ಮಾಡುತ್ತಾರೆ. ಹಿಂದೆ ನಿತ್ಯ ಮೆನನ್ ಅವರನ್ನು ಮದುವೆಯಾಗಲು ಕೇಳುವದಕ್ಕೆ ಅವರ ಮನೆಗೆ ಹೋಗಿದ್ದರು ಆದರೆ ನಿತ್ಯಾ ಮೆನನ್ ನಿರಾಕರಿಸಿದ್ದಾರೆ.

ಇನ್ನು ಸಂತೋಷ್ ವಾರ್ಕಿ ಸಾಕಷ್ಟು ಬಾರಿ ನಿತ್ಯ ಮೆನನ್ ಅವರಿಗೆ ಕರೆಯನ್ನ ಮಾಡಿದ್ದಾರೆ ಅಲ್ಲದೆ ನಿತ್ಯ ಮೆನನ್ ಹಾಗೂ ಅವರ ತಂದೆ ತಾಯಿಯ ಹೆಸರನ್ನು ಹಿಡಿದುಕೊಂಡು ಸಾಕಷ್ಟು ಅವಮಾನವನ್ನು ಮಾಡಿದ್ದಾರೆ. ನಾನು ಈಗಾಗಲೇ ಆ ವ್ಯಕ್ತಿಯ 30 ನಂಬರ್ ಅನ್ನು ಬ್ಲಾಕ್ ಮಾಡಿದ್ದೇನೆ. ಆತನಿಂದ ಕಳೆದ ಆರು ವರ್ಷಗಳಿಂದ ನನಗೆ ಸಾಕಷ್ಟು ತೊಂದರೆ ಆಗಿದೆ. ಎಲ್ಲರೂ ನನಗೆ ದೂರು ನೀಡಲು ಹೇಳಿದರು ಆದರೆ ನಾನು ಇದುವರೆಗೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ.

ಸಂತೋಷ್ ವಾರ್ಕಿ ಇಂದ ನನಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಿದ್ದಾನೆ ಅಂತ ನಿತ್ಯಾ ಮೆನನ್ ಹೇಳಿದ್ದಾರೆ. ಇನ್ನು ಇತ್ತೀಚೆಗೆ ಸಂತೋಷ ವಾರ್ಕಿ ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಮೆನನ್ ಅವರ ಬಗ್ಗೆ ಕೆಟ್ಟದಾಗಿ ಬರೆದುಕೊಂಡಿದ್ದರು ನಾನು ಇನ್ನೂ ಅವಳನ್ನ ಮದುವೆಯಾಗು ಅಂತ ಕೇಳಲ್ಲ ಅವಳಾಗಿಯೇ ನನ್ನ ಬಳಿ ಮದುವೆಯಾಗಲು ಕೇಳಿಕೊಂಡು ಬಂದರೆ ಆಗ ನಿರ್ಧಾರ ಮಾಡುತ್ತೇನೆ. ನನ್ನ ನಿಜವಾದ ಪ್ರೀತಿಯನ್ನು ತಿರಸ್ಕರಿಸಿ ಆಕೆ ದೊಡ್ಡ ತಪ್ಪು ಮಾಡಿದ್ದಾಳೆ ಅಂತ ವಾರ್ಕಿ ಬರೆದುಕೊಂಡಿದ್ದರು. ಅವಳು ಅಷ್ಟು ಒಳ್ಳೆಯ ವ್ಯಕ್ತಿಯಾಗಿದ್ದರೆ ನನಗೆ ಅವರ ಫೋನ್ ನಂಬರ್ ಕೊಡಬಹುದಿತ್ತು ಅಂತ ಕೂಡ ಹೇಳಿದ್ದಾರೆ. ಇನ್ನು ಸಂತೋಷ ವಾರ್ಕಿ ಅವರ ನಡವಳಿಕೆಯ ಬಗ್ಗೆ ಹಾಗೂ ಅವರ ಹೇಳಿಕೆಯ ಬಗ್ಗೆ ಆಕ್ರೋಶ ಹೊರಹಾಕಿರುವ ನಿತ್ಯ ಮೆನನ್, ಆತನಿಂದ ತೊಂದರೆಯಾಗುತ್ತಿರುವುದರ ಕುರಿತು ಮಾಧ್ಯಮದ ಮುಂದೆ ಈಗ ಮಾತನಾಡಿದ್ದಾರೆ. ಸದ್ಯ ನಿತ್ಯ ಮೆನನ್ ನಟನೆಯ 19 (1)(ಎ) ಸಿನಿಮಾ ತೆರೆಕಂಡು ಅಪಾರ ಮೆಚ್ಚುಗೆಯನ್ನ ಗಳಿಸಿಕೊಂಡಿದೆ. ನಿತ್ಯ ಮೆನನ್ ಮದುವೆಯ ವಿಚಾರವನ್ನ ಬಿಟ್ಟು ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.