Nithya Menon : ಮದುವೆ ಬಗ್ಗೆ ಮಾತನಾಡಿದ ನಿತ್ಯಾ ಮೆನನ್ ಬಿಚ್ಚಿಟ್ಟರು ಸತ್ಯ

By Infoflick Correspondent

Updated:Friday, July 22, 2022, 09:39[IST]

Nithya Menon : ಮದುವೆ ಬಗ್ಗೆ ಮಾತನಾಡಿದ ನಿತ್ಯಾ ಮೆನನ್ ಬಿಚ್ಚಿಟ್ಟರು ಸತ್ಯ

ನಿತ್ಯಾ ಮದುವೆ ಆಗಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈಗ ನಿತ್ಯಾ ಮೆನನ್ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸದ್ಯದಲ್ಲೇ ನಿತ್ಯಾ ಮೆನನ್​ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಂಚಲನ ಮೂಡಿಸಿದೆ. ಮದುವೆ ಸುದ್ದಿಯನ್ನು ನಟಿ ನಿತ್ಯಾ ಮೆನನ್ ನಿರಾಕರಿಸಿದ್ದಾರೆ. ಈ ಬಗ್ಗೆ ಬಂದಿರುವ ಸುದ್ದಿ ಸುಳ್ಳಾಗಿದ್ದು, ತನ್ನ ಮದುವೆಯ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ.

ಅವರು ಖ್ಯಾತ ಮಲಯಾಳಂ ನಟನ ಜತೆ ವಿವಾಹವಾಗುತ್ತಾರೆ ಎಂಬುದು ವರದಿಯಲ್ಲಿ ಇತ್ತು. ಈ ವಿಚಾರ ಕೇಳಿ ನಿತ್ಯಾ ಮೆನನ್​ ಫ್ಯಾನ್ಸ್ ಖುಷಿ ಪಟ್ಟಿದ್ದರು. ನಿತ್ಯಾ ಮೆನನ್ ಅವರನ್ನು ಮದುವೆ ಆಗುತ್ತಿರುವ ಆ ನಟ ಯಾರು ಎಂಬುದನ್ನು ಹಲವರು ಹುಡುಕಾಡಿದ್ದರು. ಆದರೆ ಈಗ ಈ ಸುದ್ದಿ ವದಂತಿಯಾಗಿದೆ.

ಮಲಯಾಳಂ ನಟನ ಜತೆ ಮದುವೆ ಆಗುತ್ತಿದ್ದೇನೆ ಎಂಬುದು ಸುಳ್ಳು ಸುದ್ದಿ. ಈ ಸುದ್ದಿಯಲ್ಲಿ ನಿಜವಿಲ್ಲ'. ಆ ಮ‌ೂಲಕ ಮದುವೆ ಬಗ್ಗೆ ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಡಿರುವ ಸುದ್ದಿಗಳು ಸತ್ಯಕ್ಕೆ ದೂರವಾದುದು. ಸುದ್ದಿ ಹರಡುವ ಮೊದಲು ನನ್ನಲ್ಲಿ ನಿಜಾಂಶ ತಿಳಿದುಕೊಂಡು ಬರೆದುಕೊಳ್ಳಿ ಎಂದು ನಿತ್ಯಾ ಪ್ರತಿಕ್ರಿಯಿಸಿದ್ದಾರೆ.

 
ಸದ್ಯ ನಿತ್ಯಾ ಮೆನನ್ ಅವರು '19(1)(ಎ)' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಇಂದ್ರಜಿತ್ ಸುಕುಮಾರನ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಇಂದು ವಿ. ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಇದಲ್ಲದೆ ಇನ್ನೂ ಎರಡು ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸುತ್ತಿದ್ದಾರೆ.