ಕನ್ನಡದ ನಟಿ ಈಗ ನಿತ್ಯಾನಂದನ ಶಿಷ್ಯೆ: ಆ ನಟಿ ಯಾರು, ಅವರಿಗೆ ಏನಾಗಿತ್ತು ಅಂತ ಕೇಳಿದ್ರೆ ಶಾಕ್ ಆಗ್ತೀರಿ..

Updated: Wednesday, June 9, 2021, 12:08 [IST]

ಬೆಂಗಳೂರು ಮೂಲದ ಇಬ್ಬರು ಸಹೋದರಿಯರ ಅಪಹರಣ  ಹಾಗೂ ಅಕ್ರಮ ಬಂಧನ ಪ್ರಕರಣ ಸಂಬಂಧ ಭಾರತದಿಂದ ತಲೆಮರೆಸಿಕೊಂಡಿರುವ ನಿತ್ಯಾನಂದ ಈಕ್ವೇಡರ್‌ ನಲ್ಲಿ ಆಶ್ರಯಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈತ ಕಳ್ಳ ಸ್ವಾಮೀಜಿ ಎಂಬುದು ಗೊತ್ತಿದ್ದರೂ ಕೂಡ ಹಲವರು ನಿತ್ಯಾನಂದನ ಭಕ್ತರಾಗಿದ್ದಾರೆ. 
ದಿನ ದಿನಕ್ಕೂ ನಿತ್ಯಾನಂದನ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ವಿಪರ್ಯಾಸವೆಂದರೆ, ನಿತ್ಯಾನಂದನ ಭಕ್ತರಲ್ಲಿ ಅತಿ ಹೆಚ್ಚು ಜನ ಮಹಿಳೆಯರೇ ಆಗಿದ್ದಾರೆ. ಕಳೆದ ವರ್ಷ ಭಕ್ತರೆಲ್ಲರು ತನ್ನ ಕೈಲಾಸ ದೇಶಕ್ಕೆ ಆಗಮಿಸಲು ವೀಸಾ ಅರ್ಜಿಯನ್ನು ಸಲ್ಲಿಸಿ ಎಂದು ಮನವಿ ಮಾಡಿದ್ದ. ತನ್ನ ಕೈಲಾಸ ದೇಶವೂ ರಾಜಕೀಯ ಮುಕ್ತವಾಗಿದೆ. ದೇಶಕ್ಕೆ ದೇಣಿಗೆ ಕೊಡಲು ಬಯಸುವವರು ನೀಡಿ ಎಂದು ಹೇಳಿದ್ದ. ಜೊತೆಗೆ ಕೈಲಾಸ ದೇಶಕ್ಕೆ ತನ್ನದೇ ಲಾಂಚನ ಮತ್ತು ಕರೆನ್ಸಿಯನ್ನೂ ಬಿಡುಗಡೆ ಮಾಡಿದ್ದ.    

ಇದೀಗ ಕನ್ನಡದ ನಟಿಯೊಬ್ಬರು ನಿತ್ಯಾನಂದನ ಆಶ್ರಮ ಸೇರಿದ್ದು, ಆತನ ಶಿಷ್ಯೆಯಾಗಿ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಆ ನಟಿ ಯಾರು ಎಂದು ಕೇಳಿದರೆ, ನಿಮಗೆಲ್ಲಾ ಶಾಕ್ ಆಗೋದು ಗ್ಯಾರೆಂಟಿ.

ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ಸೌತ್ ಇಂಡಿಯಾ ನಟಿಯಾಗಿದ್ದ ಕೌಸಲ್ಯ ಇದೀಗ ನಿತ್ಯಾನಂದನ ಶಿಷ್ಯೆಯಾಗಿದ್ದಾರೆ.  ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಕೌಸಲ್ಯ ಅವರು, ಕೆಲ ವರ್ಷಗಳಿಂದ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಪರಿಚಯಸ್ಥರೊಬ್ಬರು ನಟಿ ಕೌಸಲ್ಯ ಅವರಿಗೆ ನಿತ್ಯಾನಂದನ ಬಳಿ ಚಿಕಿತ್ಸೆ ಪಡೆಯಲು ಸೂಚಿಸಿದ್ದರು. 
ನೋವು ತಾಳಲಾರದೆ ಕೊನೆಗೆ ನಿತ್ಯಾನಂದನ ಮೊರೆ ಹೋದ ಕೌಸಲ್ಯ ಅವರಿಗೆ ಹಿಮ್ಮಡಿ ಬೇನೆ ಮಾಯವಾಯಿತು. ಇದರಿಂದ ಸ್ಫೂರ್ತಿಗೊಂಡ ಅವರು ಸನ್ಯಾಸತ್ವ ಸ್ವೀಕರಿಸಿ ನಿತ್ಯಾನಂದನ ಶಿಷ್ಯೆಯಾಗಿದ್ದಾರೆ ಎನ್ನಲಾಗಿದೆ.