ಮೆಟ್ಟಿಲಿನಿಂದ ಬಿದ್ದು ನಿವೇದಿತಾ ಗೌಡ ಹಲ್ಲು ಮುರಿತಾ..? ನಿವೇದಿತಾ ಅಮ್ಮನ ರಿಯಾಕ್ಷನ್ ಇಲ್ಲಿದೆ..!

By Infoflick Correspondent

Updated:Tuesday, April 5, 2022, 23:00[IST]

ಮೆಟ್ಟಿಲಿನಿಂದ ಬಿದ್ದು ನಿವೇದಿತಾ ಗೌಡ ಹಲ್ಲು ಮುರಿತಾ..? ನಿವೇದಿತಾ ಅಮ್ಮನ ರಿಯಾಕ್ಷನ್ ಇಲ್ಲಿದೆ..!

ನಿವೇದಿತಾ ಗೌಡ ಇತ್ತೀಚೆಗಷ್ಟೇ ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿರುವ ವಿಷಯ ಎಲ್ಲರಿಗೂ ಗೊತ್ತು. ಆಗಾಗ ಅವರ ವಯಕ್ತಿಕ ಮತ್ತು ಕೆಲವೊಂದಿಷ್ಟು ಫನ್ನಿ ವಿಡಿಯೋ ಶೇರ್ ಮಾಡಿಕೊಳ್ಳುತ್ತಾ ನಿವೇದಿತಾ ಗೌಡ ಅವರು ಸಕ್ಕತ್ ಆಕ್ಟಿವ್ ಇದ್ದಾರೆ. ಚಂದನ್ ಜೊತೆ ಆಗಾಗ ಕೆಲವೊಂದಿಷ್ಟು ರೀಲ್ಸ್ ಗಳನ್ನು ಮಾಡುತ್ತಾ ಸಕತ್ತಾಗಿ ಅವರ ಅಭಿಮಾನಿ ಬಳಗವನ್ನ ಖುಷಿ ಪಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಹೌದು ಚಂದನ್ ಶೆಟ್ಟಿ ಕೂಡ ಅವರ ಪತ್ನಿ ನಿವೇದಿತಾ ಗೌಡ ಅವರ ಕಾಟಕ್ಕೆ ಸಾಕಷ್ಟು ಬಾರಿ ಬೇಸತ್ತವರಂತೆ ಕಂಡರೂ ಅದನ್ನ ಎಲ್ಲಿಯೂ ತೋರಿಸಿಕೊಂಡಿಲ್ಲ. ಏನು ಮಾಡುವುದು ನಿವೇದಿತಾ ಅವರ ಪತ್ನಿ ತಾನೆ, ಎಲ್ಲವನ್ನೂ ಕೂಡ ಚಂದನ್ ಶೆಟ್ಟಿ ನೋಡ್ಕೊಂಡು ಹೋಗಲೇಬೇಕು..

ಹಾಗಾಗಿ ಪತ್ನಿ ನಿವೇದಿತ ಗೌಡ ಅವರು ಏನೇ ಮಾಡಿದರೂ ವಿಡಿಯೋದಲ್ಲಿ ನಗುತ್ತಲೇ ಚಂದನ್ ಶೆಟ್ಟಿ ಇರುತ್ತಾರೆ. ಹೌದು ಚಂದನ್ ಶೆಟ್ಟಿಗೂ ನಿವೇದಿತಾರ ವಿಡಿಯೋಗಳು ಎಂದರೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ, ಹಾಗೆ ಇಷ್ಟ ಕೂಡ. ಇತ್ತೀಚಿಗೆ ನಿವೇದಿತಾ ಗೌಡ ಅವರು ವೈಷ್ಣವಿ ಗೌಡ ಅವರ ಜೊತೆ ಸಾಕಷ್ಟು ಚಟುವಟಿಕೆಯ ಗೇಮ್ಸ್ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಹಾಗೆ ವಿಡೀಯೋ ನೋಡಿ ಅಭಿಮಾನಿಗಳು ಸಕ್ಕತ್ ಖುಷಿಯಾಗಿದ್ದು ಉಂಟು. ಮತ್ತೊಮ್ಮೆ ಡಬ್ಸ್ಮ್ಯಾಶ್ ಫೇಮಸ್ ನಿವೇದಿತಾ ಗೌಡ ಅವರು ಅವರ ಮನೆಯವರಿಗೆ ಫ್ರಾಂಕ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಅವರ ಭಾವನೆಗಳ ಜೊತೆ ಆಟವಾಡಿದ್ದಾರೆ. ಮನೆಯ ಮೆಟ್ಟಿಲಿನಿಂದ ಬಿದ್ದು ಹಲ್ಲು ಮುರಿದುಕೊಂಡಿದ್ದೇನೆ ಎಂದು ಅವರ ಪತಿ ಚಂದನ್ ಶೆಟ್ಟಿಗೆ ಮೊದಲು ಫೋನ್ ಮಾಡಿದ್ದಾರೆ.  

ಬಳಿಕ ಅವರ ತಾಯಿಗೂ ಹಾಗೆ ಅವರ ಅತ್ತೆಗೂ ಎಲ್ಲರಿಗೂ ಕೂಡ ಒಂದು ಕಡೆಯಿಂದ ಫೋನ್ ಕಾಲ್ ಮಾಡಿಕೊಂಡು ಬಂದಿದ್ದಾರೆ ನಿವೇದಿತಾ. ಚಂದನ್ ಶೆಟ್ಟಿ ಮೇಲಿದ್ದವರು ಕೆಳಗೆಬಂದು ಏನಾಯಿತು ಎಂದು ನೋಡಿ ಇದು ಪ್ರಾಂಕ ಎಂದು ನಗೆ ಬೀರಿದ್ದಾರೆ. ಆದರೆ ನಿವೇದಿತಾ ಗೌಡ ಅವರ ತಾಯಿ ವಿಡಿಯೋ ಕಾಲ್ ಮಾಡಿ ಮಾಡಿದ್ದಾದರೂ ಏನು ಗೊತ್ತಾ..? ಈ ಲೇಖನದಲ್ಲಿರುವ ವಿಡಿಯೋವನ್ನು ನೋಡಿ.. ನಿವೇದಿತಾ ಗೌಡ ನಡೆದ ಘಟನೆ ವಿವರಿಸಿದ ಬಳಿಕ ಅವರ ತಾಯಿ ಮಾಡಿದ್ದೇನು..? ಜೊತೆಗೆ ಮಗಳ ವಿಷಯ ತಿಳಿದು ನೋವಲ್ಲಿ ಮಾತನಾಡಿದ್ದಾರೆ ಎಂದು ನೀವೇ ವಿಡಿಯೋದಲ್ಲಿ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...