ಗಂಡನಿಗೆ ಕುಕ್ಕಿ ಎಂದು ನಾಯಿ ಕರೆದ ಹಾಗೆ ಚಂದನ್ ಕರೆದ ನಿವಿ..! ನೆಟ್ಟಿಗರು ಮತ್ತೆ ಆಶ್ಚರ್ಯ ಆಗುದ್ದು ಇದಕ್ಕೆ..!

By Infoflick Correspondent

Updated:Monday, April 11, 2022, 17:07[IST]

ಗಂಡನಿಗೆ ಕುಕ್ಕಿ ಎಂದು ನಾಯಿ ಕರೆದ ಹಾಗೆ ಚಂದನ್ ಕರೆದ ನಿವಿ..! ನೆಟ್ಟಿಗರು ಮತ್ತೆ ಆಶ್ಚರ್ಯ ಆಗುದ್ದು ಇದಕ್ಕೆ..!

ಕಲರ್ಸ್ ಕನ್ನಡದಲ್ಲಿ ಇತ್ತೀಚಗಷ್ಟೇ ಆರಂಭವಾಗಿರುವ ವಾರಾಂತ್ಯದ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಅದ್ದೂರಿ ಚಾಲನೆ ಪಡೆದುಕೊಂಡಿದೆ. ಇದೀಗ ಮತ್ತೊಮ್ಮೆ ಕಾಮಿಡಿ ಜಲಕ್ ಕೊಡಲು ಕಲರ್ಸ್ ಕನ್ನಡ ಮತ್ತೊಂದು ಹೊಸ ಶೋ ತಂದಿದ್ದು ಗಿಚ್ಚಿ ಗಿಲಿ ಗಿಲಿ ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಜಡ್ಜಸ್ ಆಗಿ ಶ್ರುತಿ ಹಾಗೂ ಮಜಾ ಟಾಕೀಸ್ನ ಟಾಕಿಂಗ್ ಸ್ಟಾರ್ ನಟ ಸೃಜನ್ ಲೋಕೇಶ್ ಅವರು ಕಾಣಿಸಿದ್ದಾರೆ. ಹೌದು ಇದೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಖ್ಯಾತಿಯ ವಿನ್ನರ್ ಹಾಗೂ ಮಜಾಭಾರತ ಕಾಮಿಡಿ ನಟ ಮಂಜು ಪಾವಗಡ ಅವರು ನಿರೂಪಕರಾಗಿದ್ದು ಜೊತೆಗೆ ಸ್ಪೋರ್ಟ್ಸ್ ನಿರೂಪಕಿ ಆಗಿದ್ದ ರೀನಾ ಡಿಸೋಜಾ ಅವರು ಮೊಟ್ಟ ಮೊದಲ ಬಾರಿ ಈ ಕಾಮಿಡಿ ಕಾರ್ಯಕ್ರಮವೊಂದಕ್ಕೆ ನಿರೂಪಕಿಯಾಗಿ ಆಯ್ಕೆಯಾಗಿದ್ದಾರೆ.

ಹೀಗಿರುವಾಗ ಒಬ್ಬೊಬ್ಬರನ್ನೇ ವೇದಿಕೆ ಮೇಲೆ ಕರೆತಂದ ಮಂಜು ಪಾವಗಡ, ನಿರೂಪಣೆ ಹೊಸದಾದರೂ ಅವರ ಮಾತಿನಲ್ಲಿ ಏನು ಕೂಡ ಕಡಿಮೆ ಇರಲಿಲ್ಲ. ಬಿಗ್ಬಾಸ್ ಮೂಲಕವೇ ಇನ್ನೊಂದು ಹೆಸರು ಎಲ್ಲರಿಗೂ ಚಿರಪರಿಚಿತ. ಡಬ್ಸ್ಮ್ಯಾಶ್ ಬೆಡಗಿ ನಿವೆದಿತ ಗೌಡ ಕೂಡ ಈ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿದ್ದಾರೆ. ಹೌದು ವೇದಿಕೆ ಮೇಲೆ ಮಂಜು ಪಾವಗಡ ನಿಮಗೆ ವಿಶ್ ಮಾಡಲು ನಿಮ್ಮ ರಿಯಲ್ ಪಾರ್ಟ್ನರ್ ಬರುತ್ತಿದ್ದಾರೆ ಎಂದೊಡನೆ ನಿವೇದಿತಾ ಕುಕ್ಕಿ ಎಂದು ಕರೆಯುತ್ತಾರೆ. ಕುಕ್ಕಿ ಕರೆದಿದ್ದು ಓಕೆ, ಆದರೆ ಕುಕ್ಕಿ ಎಂದು ಎಳೆದು ಹೇಳಿದ ಪರಿ ನೆಟ್ಟಿಗರಿಗೆ ಮುಜುಗರ ತಂದಿದೆ.

ಗಂಡನ್ನ ನಾಯಿ ಕರೆದ ರೀತಿ ಕರೆಯುತ್ತಾಳಲ್ಲಮ್ಮ ಎಂದು ಆಕ್ರೋಶ ಹೊರಹಾಕುತ್ತಿದ್ದು, ನೆಟ್ಟಿಗರು ಇನ್ನೊಂದು ಕಡೆ ನಿವೇದಿತಾ ಅವರನ್ನ ಟ್ರೋಲ್ ಕೂಡ ಮಾಡುತ್ತಿದ್ದಾರೆ.  

ನಿವೇದಿತಾ ಗೌಡ ಅವರು ಹೆಚ್ಚು ಟ್ರೋಲ್ ಆಗುತ್ತಿರುವುದ ನೋಡಿ ನೀವು ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಆದರೂ ಆಗಬಹುದು ಎಂದು ಹೇಳುತ್ತಿದ್ದಾರೆ. ನಿವೇದಿತಾ ಪಾರ್ಟ್ನರ್ ಗೆ ಚಂದನ್ ಶೆಟ್ಟಿ, ಇವಳು ತುಂಬಾ ಕಲಿಸುತ್ತಾಳೆ, ತುಂಬಾ ಕಲಿತಿದ್ದಾಳೆ ಆದರೆ ನೀವು ಕಲಿತಿರುವುದನ್ನು ಕೊನೆಯಲ್ಲಿ ಮರೆಯಬೇಡಿ ಎನ್ನುತ್ತಾರೆ. ಆಗ ಚಂದನ್ ಕಡೆ ನೋಡಿದ ನಿವೇದಿತ ಇಬ್ಬರು ಮನೆಗೆ ಹೋಗಬೇಕು ನೆನಪಿರಲಿ ಎಂದು ಗದರುತ್ತಾರೆ. ಹೀಗೆ ಆಡುವುದು ನೋಡಿದರೆ ನಿವೇದಿತಾ ಸಣ್ಣಮಕ್ಕಳಂತೆ ಮಾತನಾಡುವ ಶೈಲಿ, ಮತ್ತು ಒಂದೊಂದು ಸಲ ಎಲ್ಲ ತಿಳಿದಿರುವವರಂತೆ ಮಾತನಾಡುವ ಪರಿ ನೋಡಿ ನೆಟ್ಟಿಗರು ಇವರು ಹೆಚ್ಚು ಡ್ರಾಮ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..