Nivedita Gowda : ನೋ ಪ್ರಾಬ್ಲಮ್ ಎಂದು ಮೈ ಕುಣಿಸಿದ ನಿವೇದಿತಾ ಗೌಡ..! ಕ್ಯೂಟ್ ವಿಡಿಯೋಗೆ ನೆಟ್ಟಿಗರು ಫಿದಾ..!

By Infoflick Correspondent

Updated:Friday, May 6, 2022, 18:20[IST]

Nivedita Gowda :  ನೋ ಪ್ರಾಬ್ಲಮ್ ಎಂದು ಮೈ ಕುಣಿಸಿದ ನಿವೇದಿತಾ ಗೌಡ..! ಕ್ಯೂಟ್ ವಿಡಿಯೋಗೆ ನೆಟ್ಟಿಗರು ಫಿದಾ..!

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರು ಈಗಾಗಲೇ ತಮ್ಮನ್ನು ತಾವು ಅವರ ಅಭಿನಯದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವರು ಜನಪ್ರಿಯತೆ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಹೌದು ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೇ, ಈ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ಜನರು ನೋಡುತ್ತಿದ್ದಂತೆ ತುಂಬಾನೇ ಫೇಮಸ್ ಆಗಿಬಿಡುತ್ತಾರೆ. ಟಿಕ್ ಟಾಕ್ ಎಂಬ ಅಪ್ಲಿಕೇಶನ್ ಮೂಲಕ ಸಾಕಷ್ಟು ನವ ಕಲಾವಿದರು ಬೆಳಕಿಗೆ ಬಂದಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಹೌದು ಇದರ ಮೂಲಕವೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಬಳಿಕ ಚಂದನ್ ಶೆಟ್ಟಿಯ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿರುವ ನಿವೇದಿತಾ ಗೌಡ ಅವರು ಇತ್ತೀಚೆಗೆ ಒಂದು ಯುಟ್ಯೂಬ್ ಚಾನೆಲ್ ತೆರೆದಿದ್ದು ತುಂಬಾ ಸುದ್ದಿಯಲಿದ್ದಾರೆ.

ಈಗೀಗ ತುಂಬಾನೇ ಆಕ್ಟಿವ್ ಕೂಡ ಇದ್ದಾರೆ ನಿವೇದಿತಾ ಗೌಡ. ಅವರ ದೈನಂದಿನ ಚಟುವಟಿಕೆ ಹೇಗಿರುತ್ತೆ ಎಂದು ಒಂದು ವಿಡಿಯೋ ಮಾಡಿ ಆ ವಿಡಿಯೋನ ಅಭಿಮಾನಿಗಳ ಮುಂದಿಟ್ಟು ಖುಷಿ ವ್ಯಕ್ತಪಡಿಸಿದ್ದರು. ಹೌದು ಆಗಾಗ ಅವರ ಪತಿ ಚಂದನ್ ಶೆಟ್ಟಿಯ ಜೊತೆಯಲ್ಲಿ ರೀಲ್ಸ್ ಮಾಡುತ್ತಾ ತುಂಬಾನೇ ಕ್ಯೂಟ್ ಆಗಿ ಕಾಣಿಸುವ ನಿವೇದಿತಾ ಅವರು ಇತ್ತೀಚಿಗೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲೂ ಕೂಡ ಮಿಂಚಿದ್ದರು. ತುಂಬಾ ಕ್ಯೂಟ್ ಆಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೊಂದು ವಿಡಿಯೋದಲ್ಲಿ ನಿವೇದಿತ ಕಾಣಿಸಿಕೊಂಡಿದ್ದಾರೆ..ನೋ ಪ್ರಾಬ್ಲಮ್ ಎನ್ನುವ ಶಿವಣ್ಣ ಅವರ ಹಾಡಿಗೆ ಹೆಜ್ಜೆ ಹಾಕಿರುವ ನಿವೇದಿತಾ ಗೌಡ ಸಕ್ಕತಾಗಿ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.   

ನಿವೇದಿತಾ ಗೌಡರ ಡ್ಯಾನ್ಸ್ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು ಅವರ ಅಭಿಮಾನಿಗಳು ಸಹ ಈಗ ಖುಷಿ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ನೀವು ಕೂಡ ಬಂದು ಬಾರಿ ನಿವೇದಿತಾ ಗೌಡ ಅವರ ನೋ ಪ್ರಾಬ್ಲಮ್ ಹಾಡಿನ ಈ ಡಾನ್ಸ್ ವಿಡಿಯೋ ಒಂದು ಬಾರಿ ನೋಡಿ. ಹಾಗೆ ನಿಮಗೂ ಕೂಡ ಖಂಡಿತಾ ಇಷ್ಟ ಆಗುತ್ತೆ. ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...