ಚಂದನ್ ಗೆ ಕಾಟ ಕೊಡುವುದೇ ನಿವೇದಿತಾಗೆ ಹೆಚ್ಚು ಖುಷಿ ಅಂತೆ..! ನೆಟ್ಟಿಗರು ವಿಡಿಯೋ ನೋಡಿ ಹೇಳಿದ್ದೇನು

By Infoflick Correspondent

Updated:Wednesday, March 23, 2022, 12:56[IST]

ಚಂದನ್ ಗೆ ಕಾಟ ಕೊಡುವುದೇ ನಿವೇದಿತಾಗೆ ಹೆಚ್ಚು ಖುಷಿ ಅಂತೆ..! ನೆಟ್ಟಿಗರು ವಿಡಿಯೋ ನೋಡಿ ಹೇಳಿದ್ದೇನು

ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಕಿರುತೆರೆಯ ಕಲಾವಿದರು ಈಗೀಗ ಕಾಣಿಸಿಕೊಳ್ಳುತ್ತಿದ್ದಾರೆ. ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಅವರು ಕೆಲವೊಂದು ರಿಲ್ಸ್ ಗಳನ್ನು ಮಾಡುತ್ತಾ ಅಭಿಮಾನಿಗಳಿಗಾಗಿ ವಿಡಿಯೋ ಮೂಲಕವೆ ಹೆಚ್ಚು ಶೇರ್ ಮಾಡಿಕೊಳ್ಳುತ್ತಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ತುಂಬಾನೇ ಆಕ್ಟಿವ್ ಇರುವ ನಿವೇದಿತಾ ಗೌಡ ಅವರು ಇತ್ತೀಚಿಗೆ ಒಂದು ಹೊಸ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದರು. ಈಗಾಗಲೇ ಯೂಟ್ಯೂಬ್ ಚಾನೆಲ್ ನಲ್ಲಿ ಕೆಲ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವ ನಿವೇದಿತಾ ಗೌಡ ಅವರು ಅವರ ದೈನಂದಿನ ಚಟುವಟಿಕೆಗಳನ್ನು, ಅವರ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದು ನಿವೇದಿತಾ ಗೌಡ ಅವರು ಮನೆಯಲ್ಲಿ ಹೇಗೆಲ್ಲ ಇರುತ್ತಾರೆ, ಯಾವ ವಸ್ತುಗಳನ್ನು ಉಪಯೋಗಿಸುತ್ತಾರೆ, ಏನೆಲ್ಲ ಇಷ್ಟಪಡುತ್ತಾರೆ ಯಾವ ತಿಂಡಿತಿನಿಸುಗಳನ್ನು ತಿನ್ನುತ್ತಾರೆ ಎಂಬುದಾಗಿ ಸಾಕಷ್ಟು ವೀಡಿಯೋಗಳ ಹಂಚಿಕೊಂಡಿದ್ದರು.

ಆಗಾಗ ಚಂದನ್ ಜೊತೆ ಕುಣಿದು ಕುಪ್ಪಳಿಸುವ ನಿವೇದಿತಾ ಗೌಡ ಅವರು ಈ ಬಾರಿ ಮತ್ತೊಂದು ವಿಡಿಯೋ ಮೂಲಕ ಕಾಣಿಸಿದ್ದಾರೆ. ಹೌದು ಇದರಲ್ಲಿ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಕಾಟ ಕೊಡುವುದೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.  ಚಂದನ್ ಶೆಟ್ಟಿ ಕೆಲಸ ಮಾಡುತ್ತಿರುತ್ತಾರೆ, ಆಗ ಮೂಲಕ ನಿವೆದಿತ ಗೌಡ ಚಂದನ್ ಗೆ ತೊಂದರೆ ಕೊಡುವ ದೃಶ್ಯ ಈ ವಿಡಿಯೋದಲ್ಲಿ ಕಾಣುತ್ತದೆ. ಈ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿರುವ ನಿವೇದಿತಾ ಗೌಡ ಅವರ ಚಂದನ್ ಶೆಟ್ಟಿ ಗೆ ಕಾಟ ಕೊಡುವುದೇ ನನಗೆ ತುಂಬಾ ಇಷ್ಟ ಎಂದು ಬರೆದಿದ್ದಾರೆ.  

ಇದೀಗ ಇವರ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಿವೇದಿತಾ ಗೌಡ ಚಂದನ್ ಗೆ ಕಾಟ ಕೊಟ್ಟ ಪರಿ ಹೇಗಿತ್ತು ಗೊತ್ತಾ..? ಜೊತೆಗೆ ಕೆಲವರು ಇವರ ವಿಡಿಯೋ ಇಷ್ಟಪಟ್ಟರೆ, ನೆಟ್ಟಿಗರು ಇವರ ಅತಿರೇಕದ ವರ್ತನೆಗೆ ಬೇಸರ ಪಟ್ಟು ಸದಾ ಈ ರೀತಿ ಸಣ್ಣ ಮಕ್ಕಳ ಹಾಗೆ ವರ್ತಿಸಬೇಡಿ ಎಂದು ಅವರ ಅವರನಿಸಿಕೆಯನ್ನು ಸಹ ಈ ಮೂಲಕ ವ್ಯಕ್ತಪಡಿಸಿದ್ದಾರೆ.