Nivedita Gowda : ಬ್ಲಾಕ್ ಅಂಡ್ ಬ್ಲಾಕ್ ಬಟ್ಟೆಯಲ್ಲಿ ಡ್ಯಾನ್ಸ್ ಮಾಡಿದ ನಿವಿ..! ಮತ್ತೊಂದು ವಿಡೀಯೋ ವೈರಲ್

By Infoflick Correspondent

Updated:Tuesday, July 5, 2022, 10:05[IST]

Nivedita Gowda :  ಬ್ಲಾಕ್ ಅಂಡ್ ಬ್ಲಾಕ್ ಬಟ್ಟೆಯಲ್ಲಿ ಡ್ಯಾನ್ಸ್ ಮಾಡಿದ ನಿವಿ..! ಮತ್ತೊಂದು ವಿಡೀಯೋ ವೈರಲ್

ಚಂದನವನದ ಗೊಂಬೆ ನಿವೇದಿತಾ ಗೌಡ ಅವರು ಏನೇ ಮಾಡಿದರು ಅತಿ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಆಗುತ್ತಾರೆ. ನಿವೇದಿತಾ ಗೌಡ ಅವರು ಆರಂಭದ ದಿನಗಳಲ್ಲಿ ಟಿಕ್ ಟಾಕ್ ಮಾತ್ರ ಮಾಡುತ್ತಿದ್ದರು. ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ವಿಡಿಯೋಗಳ ಮಾಡಿ ನಟನೆ ಮೂಲಕ ಡ್ಯಾನ್ಸ್ ಮಾಡುತ್ತಾ ಅಪಾರ ಅಭಿಮಾನಿ ಬಳಗ ಗಳಿಸಿದರು. ಕನ್ನಡ ಕಿರುತೆರೆ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೂ ಕೂಡ ಪಾದರ್ಪಣೆ ಮಾಡಿದ್ದರು ನಿವಿ. ಹೌದು ಸೀಸನ್ 5 ರಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿ ಆಗಿದ್ದು ಅಲ್ಲಿ ಚಂದನ್ ಶೆಟ್ಟಿಯನ್ನ ಮೊದಲು ಗೆಳೆಯನನ್ನಾಗಿ ಸ್ವೀಕಾರ ಮಾಡಿದ್ರು. ನಂತರ ಇವರಿಬ್ಬರ ನಡುವೆ ಇದ್ದ ಆತ್ಮೀಯತೆಯ ಸ್ನೇಹ, ನಂತರದ ದಿನಗಳಲ್ಲಿ ಪ್ರೇಮಕ್ಕೆ ತಿರುಗಿತ್ತು.   

ಮನೆಯವರ ಒಪ್ಪಿಗೆ ಪಡೆದು ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಮದುವೆಯಾಗಿ ಹೊಸ ದಾಂಪತ್ಯ ಜೀವನ ಆರಂಭಿಸಿದವರು ನಿವಿ ಚಂದನ್ ಜೋಡಿ. ಹೌದು ಇತ್ತೀಚಿನ ದಿನಗಳಲ್ಲಿ ಚಂದನ್ ಶೆಟ್ಟಿ ಜೊತೆ ಹೆಚ್ಚು ರಿಲ್ಸ್ ಮಾಡುವ ನಿವೇದಿತಾ ಗೌಡ ಮಿಸ್ ಇಂಡಿಯಾ ಕಾಂಪಿಟೇಶನಲ್ಲೂ ಕೂಡ ಭಾಗವಹಿಸಿದ್ದರು ಎನ್ನಲಾಗಿ ಕೇಳಿ ಬಂದಿತ್ತು. ಜೊತೆಗೆ ಆಗಾಗ ಕೆಲವೊಂದಿಷ್ಟು ವಿಚಾರಗಳ ಅಭಿಮಾನಿಗಳ ಬಳಿ ಹಂಚಿಕೊಳ್ಳುವ ನಿವೇದಿತಾ ಗೌಡ ಅವರು ಹೆಚ್ಚು ವಿಡಿಯೋ ಮತ್ತು ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಈಗ ಇಂಗ್ಲಿಷ್ ಹಾಡಿಗೆ ಮೈ ಕುಣಿಸಿದ ನಿವೇದಿತಾ ಗೌಡ ಅವರು ಸಖತ್ ಡಾನ್ಸ್ ಮಾಡಿದ್ದಾರೆ.

ನಿವೇದಿತಾ ಬ್ಲಾಕ್ ಸ್ಕರ್ಟ್ ಧರಿಸಿದ್ದು ತುಂಬಾ ಸ್ಮಾರ್ಟ್ ಆಗಿ ಡಾನ್ಸ್ ಮಾಡಿದ್ದಾರೆ. ಹಾಗೆ ಇವರ ಈ ಡ್ಯಾನ್ಸ್ ನೋಡಿ ನೆಟ್ಟಿಗರು ಅದೆಂತಹ ನೃತ್ಯ ನಿಮ್ಮದು ಎಂದು ಫಿದಾ ಸಹ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ವಿಡಿಯೋ ಈಗ ಅಷ್ಟೇ ವೈರಲ್ ಆಗಿದೆ. ನೀವು ಕೂಡ ಒಮ್ಮೆ ನಿವೇದಿತಾ ಗೌಡ ಅವರ ಈ ಇಂಗ್ಲೀಷ್ ಹಾಡಿನ ವೈಕರಿ ನೃತ್ಯ ನೋಡಿ. ನಿಮಗೆ ಇಷ್ಟ ಆದಲ್ಲಿ ಶೇರ್ ಮಾಡಿ ಧನ್ಯವಾದಗಳು...