ಹಸಿರು ಗದ್ದೆಯ ಮದ್ಯೆ ನಿವೇದಿತಾ ಗೌಡ ಜಲಕ್..! ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತೀರಾ

By Infoflick Correspondent

Updated:Thursday, August 25, 2022, 13:11[IST]

ಹಸಿರು ಗದ್ದೆಯ ಮದ್ಯೆ ನಿವೇದಿತಾ ಗೌಡ ಜಲಕ್..! ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತೀರಾ

ನಿವೇದಿತಾ ಗೌಡ ಹೌದು ಈ ಹೆಸರು ಬಹುತೇಕ ಜನರಿಗೆ ಗೊತ್ತು. ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಮಾನಿಗಳ ಜೊತೆಗೆ ಹೆಚ್ಚು ಟಚ್, ಕನೆಕ್ಷನ್ ಇಟ್ಟುಕೊಂಡಿರುವ ಈ  ನಿವೇದಿತ ಗೌಡ ಅವರು ಆಗಾಗ ಅವರ ಅಭಿಮಾನಿಗಳನ್ನು ರಂಜಿಸುವುದಕ್ಕೆ ಕೆಲವು ಫೋಟೋ ಮತ್ತು ವಿಡಿಯೋಗಳ ಮೂಲಕ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ಹೊಂದಿರುವ ನಿವೇದಿತಾ ಗೌಡ ಅವರು ಆರಂಭದಲ್ಲಿ ಸಣ್ಣ ಸಣ್ಣ ವಿಡಿಯೋಗಳನ್ನ ಮಾಡಿ ಹರಿ ಬಿಡುತ್ತಿದ್ದರು.ಇದೀಗ ಅವರು ಉಪಯೋಗಿಸುವ ಕೆಲ ವಸ್ತು ಮತ್ತು ಅವರು ಮನೆಯಲ್ಲಿ ಇರುವ ರೀತಿ ಜೊತೆಗೆ ಅಡುಗೆ ಮಾಡುವ ಕೆಲ ವಿಚಾರಗಳ ಜೊತೆಗೆ ಯಾವುದಾದರೂ ಒಂದು ಕಾನ್ಸೆಪ್ಟ್ ಮೂಲಕ ಹೇಳಿಕೊಳ್ಳುತ್ತಾ ಯೌಟ್ಯೂಬ್ ನಲ್ಲಿ ಸಾಕಷ್ಟು ಮಾಹಿತಿಯನ್ನು ಅವರ ಅಭಿಮಾನಿಗಳಿಗಾಗಿ ಮುಟ್ಟಿಸುತ್ತಾರೆ.    

ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ ಅವರು ಆರಂಭದಲ್ಲಿ ರೀಲ್ಸ್ ಮಾಡುವ ಮೂಲಕವೇ ಜನಪ್ರಿಯತೆ ಹೊಂದಿದವರು. ನಂತರದಲ್ಲಿ ಬಿಗ್ಬಾಸ್ ಮನೆಗೆ ಹೋಗಿ ಬಂದ ಬಳಿಕ ರ್ಯಾಪರ್ ಚಂದನ್ ಶೆಟ್ಟಿಯ ಜೊತೆ ಮದುವೆಯಾದರರು. ಇದೀಗ ದಾಂಪತ್ಯದ ಜೀವನವನ್ನು ನಡೆಸುತ್ತಿರುವ ನಿವೇದಿತಾ ಗೌಡ ಆಗ ಚಂದನ್ ಜೊತೆ ಆಗಾಗ ಕೆಲ ರೀಲ್ಸ್ ಮಾಡುತ್ತಾ ಯೂಟ್ಯೂಬ್ ಚಾನೆಲ್ ಮೂಲಕ ಕೆಲವೊಂದು ವಿಡಿಯೋಗಳ ಹಂಚಿಕೊಳ್ಳುತ್ತಾರೆ. ಹಾಗೆ ಅಭಿಮಾನಿಗಳನ್ನು ಸಖತ್ ಖುಷಿಯಲ್ಲಿ ಇಡುವುದಕ್ಕೆ ಪ್ರಯತ್ನಪಡುತ್ತಾರೆ ಎನ್ನಬಹುದು. ಅಭಿಮಾನಿಗಳು ಕೂಡ ನಿವೇದಿತ ಗೌಡ ಅವರ ವಿಡಿಯೋವನ್ನು ನೋಡುವುದಕ್ಕೆ ಮತ್ತು ಅವರ ಪ್ರತಿಯೊಂದು ಅಪ್ಡೇಟ್ಸ್ ಗಳನ್ನು ತಿಳಿದುಕೊಳ್ಳುವುದಕ್ಕೆ ತುಂಬಾ ಕಾತರರಾಗಿರುವಂತದ್ದು ಹೆಚ್ಚು ವಿಶೇಷ.

ಇದೀಗ ನಿವೇದಿತಾ ಗೌಡ ಹಳ್ಳಿ ಸೊಗಡಿನ ಹಾಡೊಂದಕ್ಕೆ ಸಕ್ಕತ್ ಸ್ಟೆಪ್ ಹಾಕಿದ್ದು ತುಂಬಾ ವೈರಲ್ ಆಗಿದ್ದಾರೆ ಎಂದು ಹೇಳಲಾಗಿದೆ. ಹೌದು ರಾಮಾಚಾರಿ ಸಿನಿಮಾದ ಹಾಡು ಇದಾಗಿದೆ. ನಟ ರವಿಚಂದ್ರನ್ ಮತ್ತು ಮಾಲಾಶ್ರೀ ಅವರ 1991ರ ಸಿನಿಮಾ ರಾಮಾಚಾರಿ ಸಿನಿಮಾದ ಆಕಾಶದಾಗೆ ಎನ್ನುವ ಹಾಡಿಗೆ ನಿವೇದಿತಾ ತೋಟದ ಮಧ್ಯೆ ನಿಂತು ಸಕ್ಕತ್ ಹೆಜ್ಜೆ ಹಾಕಿರುವ ಸ್ಟೆಪ್ಸ್ ಬಾರಿ ಗಮನ ಸೆಳೆಯುತ್ತಿದೆ. ಲಂಗಾ ಮತ್ತು ಹಸಿರು ದಾವಣಿಯಲ್ಲಿ ಕಾಣಿಸಿಕೊಂಡಿರುವ ನಿವಿ ಹಳ್ಳಿ ಹುಡುಗಿಯಂತೆ ಕಾಣಿಸಿದ್ದು ನೃತ್ಯ ಮಾಡಿದ ಪರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇಲ್ಲಿದೆ ನೋಡಿ ನಿವೇದಿತಾ ಅವರ ಸಖತ್ ಕ್ಯೂಟ್ ವಿಡಿಯೋ, ನೀವು ಕೂಡ ಒಮ್ಮೆ ನೋಡಿ, ಹಾಗೆ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಹಳ್ಳಿ ಹಾಡಿನ ಸೊಗಡಿನಲ್ಲಿ ನಿವೇದಿತ ಹೇಗೆ ಕಾಣಿಸಿದ್ದಾರೆ ಎಂದು ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ...