Nivedita Gowda : ನಿವೇದಿತಾ ಗೌಡ ಮೈ ಮೇಲೆ ದೇವರು ಬಂತಾ : ವಿಡಿಯೋ ನೋಡಿ ಫ್ಯಾನ್ಸ್ ಶಾಕ್

By Infoflick Correspondent

Updated:Monday, August 29, 2022, 19:59[IST]

Nivedita Gowda : ನಿವೇದಿತಾ ಗೌಡ ಮೈ ಮೇಲೆ ದೇವರು ಬಂತಾ :  ವಿಡಿಯೋ ನೋಡಿ ಫ್ಯಾನ್ಸ್ ಶಾಕ್

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಜನರು ಅವರದ್ದೇ ಆದ ನಟನೆ ಮೂಲಕ ಜನಪ್ರಿಯತೆಯನ್ನು ಹೊಂದಿದ್ದಾರೆ. ಎಲ್ಲಿ ನೋಡಿದರೂ ಅವರ ಸದಾ ಆಕ್ಟಿವ್ನೆಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಕಾಣಸಿಗುತ್ತವೆ ಎಂದು ಹೇಳಬಹುದು. ಜೊತೆಗೆ ಅವರ ತೆಗೆಸಿಕೊಳ್ಳುವ ಫೋಟೋಶೂಟ್ ಸಹ ಒಮ್ಮೊಂಮೆ ಭಾರಿ ವೈರಲ್ ಆಗುತ್ತವೆ. ಇತ್ತೀಚೆಗೆ ಕಿರುತೆರೆಯಲ್ಲಿ ಸಕ್ರಿಯ ಆಗಿ ಹೆಚ್ಚು ಗಮನ ಸೆಳೆಯುತ್ತಿರುವ ಬಿಗ್ ಬಾಸ್ ಬೆಡಗಿ ಚಂದನ್ ಶೆಟ್ಟಿ ಅವರ ಪತ್ನಿ ನಿವೇದಿತಾ ಗೌಡ ಅವರ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಗಿಚ್ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸಕ್ಕತ್ ನಟನೆ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಹೌದು ಗಿಚ್ಚಿ ಗಿಲಿ ಗಿಲಿ ಎನ್ನಮ್ಮ ಕಾಮಿಡಿ ಪ್ರೋಗ್ರಾಮ್ ನಲ್ಲಿ ಕಾಮಿಡಿ ಸ್ಕ್ರಿಪ್ಟ್ ಮೂಲಕ ಜನರ ಪ್ರೀತಿ ಗಳಿಸುತ್ತಿದ್ದಾರೆ ನಿವೇದಿತಾ ಗೌಡ.    

ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಭಿಮಾನಿಗಳ ಬಳಿ ಹಂಚಿಕೊಳ್ಳುವ ನಿವೇದಿತಾ ಗೌಡ ಅವರು ಮನೆಯ ವಿಚಾರವಾಗಿ, ಅಡುಗೆ ವಿಚಾರವಾಗಿ ಅಥವಾ ಅವರ ಮೇಕಪ್ ವಿಚಾರವಾಗಿ, ಅವರು ಬಳಸುವ ಕೆಲ ಕೆಲವು ವಸ್ತುಗಳ ವಿಚಾರವಾಗಿ ಹೆಚ್ಚು ಮಾಹಿತಿಯನ್ನು ಆಗಾಗ ನೀಡುತ್ತಲೇ ಇರುತ್ತಾರೆ. ಅದನ್ನು ನೀವು ಕೂಡ ಗಮನಿಸಿದ್ದೀರಾ ಅಂದುಕೊಂಡಿದ್ದೇನೆ. ಇದೀಗ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಒಬ್ಬ ಕಲಾವಿದನ ಜೊತೆ ಸಖತ್ ಡಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. ಹೌದು, ಬಿಟಿವಿ ನ್ಯೂಸ್ ಚಾನೆಲ್ ನಿರೂಪಕಿಯಾಗಿ ಗಮನ ಸೆಳೆದಿದ್ದ ಹಾಗೂ ನಟಿ ಅಮೂಲ್ಯ ಅವರ ಅವಳಿ ಜವಳಿ ಮಕ್ಕಳ ಸುದ್ದಿ ನೀಡಿ ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಹೇಳಿ ವೈರಲ್ ಆಗಿದ್ದ ಜೊತೆಗೆ ಅಷ್ಟೇ ಟ್ರೋಲ್ಗೆ ಒಳಗಾಗಿದ್ದ ದಿವ್ಯ ವಸಂತ ಸಹ ಈ ವಿಡಿಯೋದಲ್ಲಿ ಕಾಣಿಸಿದ್ದಾರೆ.

ಹೌದು ಮೂವರು ಕಲಾವಿದರು ಒಟ್ಟಿಗೆ ಈ ವಿಡಿಯೋದಲ್ಲಿ ಡಾನ್ಸ್ ಮಾಡಿದ್ದು, ನಿವೇದಿತಾ ಗೌಡ ತಮ್ಮ ಸಹ ಕಲಾವಿದನ ಕಾಲಿಗೆ ಅಡ್ಡ ಕಾಲು ಹಾಕಿ ಆತನನ್ನು ನೆಲಕ್ಕೆ ಕೆಡವಿ ನಂತರ ಇವರಿಬ್ಬರು ಡಾನ್ಸ್ ಮಾಡಿ ವೈರಲ್ ಆಗಿದ್ದಾರೆ. ಜೊತೆಗೆ ಇವರ ವಿಡಿಯೋ ಕೂಡ ಬಾರಿ ವೈರಲಾಗುತ್ತಿದೆ. ನಿವೇದಿತಾ ಗೌಡ, ದಿವ್ಯ ಹಾಗೆ ಇನ್ನೊರ್ವ ಕಲಾವಿದ ಕಾಣಿಸಿಕೊಂಡ ಈ ವಿಡಿಯೋ ನೋಡಿ. ಹೇಗಿದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ. ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು...