Nivedita Gowda ; ನೀಲಿ ಕಣ್ಣಿನ ಚೆಲುವೆಯಾದ ನಿವೇದಿತಾ ಗೌಡ..! ಬೇಬಿಯ ಈ ವಿಡಿಯೋಗೇ ಫ್ಯಾನ್ಸ್ ಫುಲ್ ಖುಷ್..!
Updated:Sunday, May 15, 2022, 15:45[IST]

ಕನ್ನಡ ಕಿರುತೆರೆಯಲ್ಲಿ ಆಗಾಗ ಸಾಕಷ್ಟು ಕಲಾವಿದರು ಅವರದೇ ಆದ ಅಭಿನಯದ ಮೂಲಕ ಕೆಲವೊಂದಿಷ್ಟು ನಟನೆ ಮೂಲಕ ಜನಪ್ರಯತೆ ಪಡೆದುಕೊಳ್ಳುವುದು ಅಷ್ಟೇ ಅಲ್ಲದೆ ಅಪಾರ ಅಭಿಮಾನಿ ಬಳಗವನ್ನ ಗಿಟ್ಟಿಸಿಕೊಳ್ಳುತ್ತಾರೆ. ಕನ್ನಡದಲ್ಲಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಹೆಚ್ಚು ಅಭಿಮಾನಿಗಳ ಗಳಿಸಿದ ನಟಿ, ಡಾನ್ಸರ್, ಡಬ್ಸ್ಮ್ಯಾಶ್ ಮಾಡುತ್ತಿದ್ದ ಡಬ್ಸ್ಮ್ಯಾಶರ್ ನಿವೇದಿತಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸುದ್ದಿ ಮಾಡುತ್ತಿದ್ದಾರೆ. ಹೌದು ನಿವೇದಿತಾ ಗೌಡ ಅವರು ಸದಾ ಆಕ್ಟಿವ್ ಇರುತ್ತಿದ್ದು ಕೆಲ ವಿಡೀಯೋ ಮೂಲಕ ಗಮನ ಸೆಳೆಯುತ್ತಾರೆ. ನಿವೇದಿತಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಆಯಿತು, ನಂತರ ಚಂದನ್ ಅವರನ್ನು ಇಷ್ಟಪಟ್ಟು ಮನೆಯವರ ಒಪ್ಪಿಗೆ ಪಡೆದು ಮದುವೆ ಕೂಡ ಆಗಿದ್ದು ಆಯ್ತು.
ಚಂದನ್ ಶೆಟ್ಟಿ ಜೊತೆಗಿರುವ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಾಗೇನೆ ಚಂದನ್ ಶೆಟ್ಟಿಯ ಜೊತೆ ರೀಲ್ಸ್ ಮಾಡುತ್ತಾ ವಿಡಿಯೋವನ್ನ ಅವರ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣವಾದ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
ಹೌದು ಇತ್ತೀಚಿಗೆ ಮಿಸ್ಟರ್ಸ್ ವರ್ಲ್ಡ್ ಕಾಂಪಿಟೇಷನ್ನಲ್ಲೂ ಸಹ ನಿವಿ ಭಾಗವಹಿಸುತ್ತಿರುವ ವಿಷಯ ಬಹಿರಂಗಪಡಿಸಿದ್ದರು. ಬಳಿಕ ಅದಕ್ಕಾಗಿ ತಯಾರಿ ಕೂಡ ನಡೆಸಿದ್ದರು. ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಈ ನಿವೇದಿತಾ ಗೌಡ ಅವರು ಇದೀಗ ಮತ್ತೊಂದು ಇಂಗ್ಲಿಷ್ ಹಾಡಿಗೆ ರೀಲ್ಸ್ ಮಾಡಿ ವೈರಲ್ ಆಗುತ್ತಿದ್ದಾರೆ. ವಿಡಿಯೋದಲ್ಲಿ ನಿವೇದಿತಾ ಗೌಡ ಅವರು ಕಣ್ಣುಗಳನ್ನು ನೀಲಿ ಬಣ್ಣಕ್ಕೆ ತಿರುಗಿಸಿಕೊಂಡು ನಟನೆ ಮಾಡಿದ್ದಾರೆ.
ನೋಡಲು ಗೊಂಬೆಯಂತೆ ಕಾಣುವ ನಿವೇದಿತಾ ಅವರ ಈ ವಿಡಿಯೋ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಾ ಫುಲ್ ಖುಷ್ ಆಗಿದ್ದು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ. ನೀವು ಕೂಡ ನಿವೇದಿತಾ ಅವರ ಈ ಹೊಸ ವಿಡಿಯೋ ಒಮ್ಮೆ ನೋಡಿ. ಹಾಗೆ ಇಷ್ಟವಾದಲ್ಲಿ ಶೇರ್ ಮಾಡಿ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಇದೀಗ ಅತಿ ಹೆಚ್ಚು ಜನಪ್ರಯತೆ ಗಳಿಸುತ್ತಿದೆ. ಧನ್ಯವಾದಗಳು...