ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ : ಏನದು ನೋಡಿ ?

By Infoflick Correspondent

Updated:Saturday, July 30, 2022, 09:46[IST]

ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ : ಏನದು  ನೋಡಿ ?

ಕನ್ನಡದಲ್ಲಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಮೂಲಕ ಕನ್ನಡಿಗರ ಮನೆಮಾತಾದ, ಮುಂಚೆ ಟಿಕ್ ಟಾಕ್ ಮಾಡುತ್ತಿದ್ದ ನಿವೇದಿತಾ ಗೌಡ ಅವರು ಇದೀಗ ಕನ್ನಡಿಗರ ಮನೆ ಮಾತಾಗಿ ಅಪಾರವಾದ ಅಭಿಮಾನಿ ಬಳಗವನ್ನು ಗಳಿಸಿಕೊಂಡಿರುವುದು ಖುಷಿಯ ವಿಚಾರ. ನಿವೇದಿತಾ ಗೌಡ ಅವರು ಇತ್ತೀಚಿಗೆ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಏನೇ ಆದರೂ ಕೂಡ ಈ ಸೋಶಿಯಲ್ ಮೀಡಿಯಾ ಮೂಲಕವೇ ಹೆಚ್ಚು ಪ್ರೇಕ್ಷಕರನ್ನ ಹಾಗೂ ಅವರ ಅಭಿಮಾನಿಗಳನ್ನ ಮತ್ತು ಹಿಂಬಾಲಕರನ್ನ ಸೆಳೆಯುವಲ್ಲಿ ನಟಿ ನೀವೇದಿತ ಗೌಡ ಅವರು ಮುಂದಿರುತ್ತಾರೆ ಎಂದು ಹೇಳಬಹುದು. ಹೌದು ನಿವೇದಿತಾ ಗೌಡ ಆರಂಭದಲ್ಲಿ ಟಿಕ್ ಟಾಕ್ ಮಾಡುತ್ತಿದ್ದರು. ನಂತರ ಬಿಗ್ಬಾಸ್ ಮನೆಗೆ ಬಂದರು. ನಂತರ ಅವರ ಗೆಳೆಯರಾದ ಚಂದನ್ ಜೊತೆ ದಾಂಪತ್ಯ ಜೀವನಕ್ಕೂ ಕೂಡ ಕಾಲಿಟ್ಟರು.. 

ಇದೀಗ ದೊಡ್ಡ ಸ್ಟಾರ್ ನಟಿಯರ ಮಟ್ಟಕ್ಕೆ ಜನಪ್ರಿಯತೆ ಪಡೆದುಕೊಂಡಿದ್ದಾರೆ ನಿವಿ. ಹಂತ ಹಂತವಾಗಿ ಕಿರುತೆಯಲ್ಲಿ ಹೆಚ್ಚು ಗುರ್ತಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ಅವರು ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರವ ಗಿಚ್ಚಿ ಗಿಲಿ ಗಿಲಿ ಷೋನಲ್ಲೂ ಸಹ ಸ್ಪರ್ಧಿಯಾಗಿ ನಟನೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲೂ ಕೂಡ ನಿವೇದಿತ ಗೌಡ ಅವರು ಭಾಗಿಯಾಗಿದ್ದರು. ಅಲ್ಲಿಯ ಜನರ ಮನಸ್ಸು ಪೀಪಲ್ ಚಾಯ್ಸ್ ವಿಭಾಗದಲ್ಲಿ ಗೆದ್ದು ಬೀಗಿ ಕಿರೀಟವನ್ನು ಪಡೆದುಕೊಂಡಿದ್ದಾರೆ. ಹೆಚ್ಚು ಜನಪ್ರಿಯತೆ ಪಡೆದಿರುವ ನಿವೇದಿತಾ ಗೌಡ ಅವರು ಯಾವ ಸ್ಟಾರ್ ನಟಿಗೂ ಕಮ್ಮಿ ಇಲ್ಲ ಎಂದು ಈ ಮೂಲಕ ಹೇಳಬಹುದು. ಅದೇ ನಿಟ್ಟಿನಲ್ಲಿ ನಿವೇದಿತಾ ಗೌಡ ಅವರಿಗೆ ಕನ್ನಡ ಮಾತ್ರ ಅಲ್ಲದೆ, ಅತ್ತ ತೆಲುಗು, ತಮಿಳು ಸಿನಿಮಾರಂಗದಿಂದಲೂ ಸಹ ಸಿನಿಮಾ ನಟನೆ ಅವಕಾಶಗಳು ಬರುತ್ತಿವೆಯಂತೆ.

ಜೊತೆಗೆ ಇದೀಗ ಗಟ್ಟಿಯಾಗಿ ಕೇಳಿ ಬಂದಿರುವ ಮಾಹಿತಿ ಪ್ರಕಾರ ತೆಲುಗು ಚಿತ್ರರಂಗದಿಂದ ನಟಿ ನಿವೇದಿತಾ ಗೌಡ ಅವರಿಗೆ ಒಂದು ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ ಎಂದು ತಿಳಿದುಬಂದಿದೆ. ಹೌದು ಸಿನಿಮಾದಲ್ಲಿ ನಟಿಸುವ ಅವಕಾಶ ನಿವೇದಿತಾ ಅವರಿಗೆ ಒದಗಿದ್ದು ಈ ವಿಷಯ ತಿಳಿದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ನಿವೇದಿತಾ ಗೌಡ ಅವರು ಎತ್ತರಕ್ಕೆ ಬೆಳೆಯಲಿ, ಅವರ ಆಸೆಯಂತೆ ಎಲ್ಲವನ್ನು ಅವರು ಅವರ ಜೀವನದಲ್ಲಿ ಗಳಿಸಲಿ ಎಂದು ಹರಸೋಣ ಧನ್ಯವಾದ..