Nivedita Gowda : ಕೊನೆಗೂ ತಮ್ಮ ಮಗುವಿನ ಆಗಮನ ಯಾವಾಗ ಎಂದು ಸುದ್ದಿ ತಿಳಿಸಿದ ನಿವೇದಿತಾ..!

By Infoflick Correspondent

Updated:Saturday, July 2, 2022, 10:53[IST]

Nivedita Gowda :  ಕೊನೆಗೂ ತಮ್ಮ ಮಗುವಿನ ಆಗಮನ ಯಾವಾಗ ಎಂದು ಸುದ್ದಿ ತಿಳಿಸಿದ ನಿವೇದಿತಾ..!

ಇತ್ತೀಚಿಗಷ್ಟೇ ಮಿಸ್ ಇಂಡಿಯಾ ಕಾಂಪಿಟೇಶನ್ ಅನ್ನ ಮುಗಿಸಿಕೊಂಡು ಬಂದಿರುವ ಕನ್ನಡ ಕಿರುತೆರೆ ಜನಪ್ರಿಯ  ನಟಿ ರೀಲ್ಸ್ ಮಾಡುತ್ತಾ ಟಿಕ್ ಟಾಕ್ ಮೂಲಕವೇ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದು, ಇದೀಗ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಗಮನ ಸೆಳೆಯುತ್ತಿದ್ದಾರೆ. ಕನ್ನಡದ ಖ್ಯಾತ ರಿಯಲಿಟಿ ಷೋ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಿವೇದಿತಾ ಅವರು ಇದೀಗ ಮತ್ತೊಮ್ಮೆ ಕೆಲ ವಿಚಾರಗಳ ಮೂಲಕ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು ನಟಿ ಹಾಗೂ ನಿವೇದಿತಾ ಗೌಡ ಅವರು ಟಿಕ್ ಟಾಕ್ ಆರಂಭದಲ್ಲಿ ಮಾಡುತ್ತಿದ್ದರು. ಆದ್ರೆ ಇದೀಗ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ರೀಲ್ಸ್ ಮಾಡುತ್ತ ಚಂದನ್ ಶೆಟ್ಟಿ ಜೊತೆ ಕಾಲ ಕಳೆಯುತ್ತಿದ್ದಾರೆ.   

ಹೌದು ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಒಳ್ಳೆಯ ಸ್ನೇಹಿತರು ಆಗಿದ್ದರು.. ನಂತರದ ದಿನಗಳಲ್ಲಿ ಪ್ರತಿಷ್ಠಿತ ಮೈಸೂರು ದಸರಾ ವೇದಿಕೆ ಮೇಲೆ ರಿಂಗ್ ಬದಲಾಯಿಸಿ ಇಬ್ಬರೂ ಪ್ರೀತಿಯ ನಿವೇದನೆ ಒಪ್ಪಿಕೊಂಡು ಎಂಗೇಜ್ಮೆಂಟ್ ಮಾಡಿಕೊಂಡರು. ಅದರಲ್ಲಿ ಎಂಗೇಜ್ಮೆಂಟ್ ಆಗಿರಬಹುದು. ಬಳಿಕ ಇದೆ ವಿಷಯಕ್ಕೆ ಚಂದನ್ ಶೆಟ್ಟಿ ಪೊಲೀಸ್ ಠಾಣಾ ಮೆಟ್ಟಿಲೇರುವಂತೆ ಆಗಿ ದೊಡ್ಡ ಎಡವಟ್ಟು ಮಾಡಿಕೊಂಡಿತ್ತು ಈ ಜೋಡಿ. ಇದೀಗ ನಿವೇದಿತಾ ಗೌಡ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಅಭಿಮಾನಿಗಳು ಕೇಳಿರುವ ಕೆಲವು ಪ್ರಶ್ನೆಗಳಿಗೆ ಸಂದರ್ಶಕರ ಮೂಲಕ ತಮ್ಮ ಉತ್ತರಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ.

ನಿವೇದಿತಾ ಗೌಡ ಅವರಿಗೆ ಕನ್ನಡ ಅಷ್ಟಾಗಿ ಬರುವುದಿಲ್ಲ ಎನ್ನಲಾಗಿದ್ದು ಇದಕ್ಕೆ ಉತ್ತರಿಸಿದ ನಿವೇದಿತಾ ಅವರು, ಕೆಲವೊಂದು ಪ್ರದೇಶಗಳ ಕಡೆಗೆ ಕೆಲವೊಂದು ರೀತಿ ಕನ್ನಡ ಇರುತ್ತದೆ. ಆಯಾ ಪ್ರದೇಶಗಳಿಗೆ ತಕ್ಕ ಹಾಗೆ ಕನ್ನಡ ಮಾತನಾಡುತ್ತಾರೆ. ಇದು ನಮ್ಮ ಕಡೆ ಮಾತನಾಡುವ ಕನ್ನಡ ಎಂದರು. ಹಾಗೆ ನಿವೇದಿತಾ ತುಂಬಾ ಜಾಣ್ಮೆ ಆದರೆ ಪೆದ್ದಿತರ ಆಡುತ್ತಾರೆ ಎನ್ನುವ ಪ್ರಶ್ನೆಗೆ, ಅದೇನೋ ಹಾಗಿಲ್ಲ ನಾನು ಎಂದಿಗೂ ಪೆದ್ದಿಯಂತೆ ವರ್ತಿಸಿಲ್ಲ ನಾನು ಮಾತನಾಡುವ ಪರಿಯೇ ಹಾಗಿದೆ ಎಂದಿದ್ದಾರೆ. ಹಾಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಮುದ್ದು ಮಗನಾಗಿ ಜೂನಿಯರ್ ಚಂದನ್ ಶೆಟ್ಟಿ ಯಾವಾಗ ಎಂಟ್ರಿ ಕೊಡುತ್ತಾನೆ ಎಂಬ ಪ್ರಶ್ನೆಗೆ, ನಿವೇದಿತಾ ಅವರು ಜೀವನ ತುಂಬಾ ದೊಡ್ಡದಾಗಿದೆ, ಇನ್ನು ತುಂಬಾ ಸಮಯ ಇದೆ, ಈ ಲೈಫಲ್ಲಿ ಅಚೀವ್ಮೆಂಟ್ ಮೊದಲು ಮಾಡಬೇಕು, ಅದೆಲ್ಲ ಆದ ಬಳಿಕವೇ ಬೇಬಿ ಎಂದು ನಗೆ ಬೀರಿದ್ದಾರೆ ನಿವೇದಿತಾ ಗೌಡ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ...