Nivedita Gowda : ಕನ್ನಡದಲ್ಲಿ ಅವಕಾಶ ಬರಲಿಲ್ಲ ಎಂದು ತೆಲುಗಿಗೆ ಹಾರುತ್ತಿದ್ದಾರ ನಿವಿ..? ನಿವೇದಿತಾ ಹೇಳಿದ್ದು ಕೇಳಿ

By Infoflick Correspondent

Updated:Monday, August 1, 2022, 20:46[IST]

Nivedita Gowda : ಕನ್ನಡದಲ್ಲಿ ಅವಕಾಶ ಬರಲಿಲ್ಲ ಎಂದು ತೆಲುಗಿಗೆ ಹಾರುತ್ತಿದ್ದಾರ ನಿವಿ..? ನಿವೇದಿತಾ ಹೇಳಿದ್ದು ಕೇಳಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇ ಆದ ವಿಭಿನ್ನ ನಟನೆ ಮೂಲಕ ಬೇರೆ ಬೇರೆ ವೇದಿಕೆಯಲ್ಲಿ ಮಿಂಚಿ ಸಕ್ಕತ್ ಪ್ರಖ್ಯಾತಿ ಹೊಂದಿದ್ದಾರೆ. ಅವರ ಸಾಲಿನಲ್ಲಿ ಬರುವ ಕನ್ನಡದ ಕಿರುತೆರೆಯ ನಟಿ ಹಾಗೂ ಕಿರುತೆರೆಗೂ ಬರುವ ಮುನ್ನ ಟಿಕ್ಟಾಕ್ ಲೋಕದಲ್ಲಿ ಮಿಂಚಿದ್ದ ನಿವೇದಿತಾ ಅವರು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೌದು ನಿವೇದಿತಾ ಗೌಡ ಅವರನ್ನು ಬೇಬಿ ಡಾಲ್ ಎಂದೆ ಅವರ ಅಭಿಮಾನಿಗಳು ಕರೆಯುವುದು ವಿಶೇಷವಾಗಿದೆ. ಸಣ್ಣ ಮಕ್ಕಳ ಹಾಗೆ ಮಾತನಾಡುವ ನಿವೇದಿತ ಅವರ ಮಾತನಾಡುವ ಶೈಲಿಗೆ ಅಪರವಾದಂತ ದೊಡ್ಡ ಅಭಿಮಾನಿ ಬಳಗ ಇರುವುದು ಸತ್ಯ. ನಿವೇದಿತಾ ಗೌಡ ಆರಂಭದಲ್ಲಿ ಟಿಕ್ ಟಾಕ್ ಮಾಡುತ್ತ ನಂತರದ ದಿನದಲ್ಲಿ ಬಿಗ್ ಬಾಸ್ ಮನೆಗೆ ತೆರಳಿದ್ದರು.  

ಅಲ್ಲಿ ಸಖತ್ ಆಗಿ ಮಿಂಚಿ ನಂತರದ ದಿನಗಳಲ್ಲಿ ಚಂದನ್ ಶೆಟ್ಟಿ ಜೊತೆ ದಾಂಪತ್ಯ ಜೀವನ ಆರಂಭಿಸಿದರು. ನಿವೇದಿತಾ ಇದೀಗ ಕಿರುತೆರೆಯಲ್ಲಿ ಸಖತ್ ಬ್ಯುಸಿ ಆಗಿರುವ ಕಲಾವಿದೆ. ಕಾಮಿಡಿ ಕಾರ್ಯಕ್ರಮವಾದ ಗಿಚ್ ಗಿಲಿ ಗಿಲಿಯಲ್ಲೂ ಕೂಡ ಎಲ್ಲರ ಗಮನ ಸೆಳೆಯುಯುತ್ತಿದ್ದಾರೆ. ನಿವೇದಿತಾ ಇತ್ತೀಚಿಗೆ ಮಿಸೆಸ್ ಇಂಡಿಯಾ ಕಾಂಪಿಟೇಶನ್ ನಲ್ಲೂ ಭಾಗವಹಿಸಿದ್ದು, ಜನರ ಆಯ್ಕೆ ಮೇರೆಗೆ ಪೀಪಲ್ ಚಾಯ್ಸ್ ಎಂಬ ಹಂತದಲ್ಲಿ ಗೆದ್ದು ಬಿಗಿದ್ದಾರೆ ಎನ್ನಲಾಗಿದೆ. ನಿವೇದಿತಾ ಗೌಡ ಇದೀಗ ತೆಲುಗು ಚಿತ್ರರಂಗಕ್ಕೆ ಹಾರಲಿದ್ದಾರಂತೆ. ಈ ಬಗ್ಗೆ ಮಾಧ್ಯಮ ಎದುರು ಮಾತನಾಡಿದ ಅವರು, ನನಗೆ ಕನ್ನಡದಲ್ಲಿ ಅಭಿನಯ ಮಾಡಲಿಕ್ಕೆ ತುಂಬಾ ಇಷ್ಟ, ಆದರೆ ಕನ್ನಡದಿಂದ ನನಗೆ ನಟಿಯಾಗಿ ನಟನೆ ಮಾಡುವ ಅವಕಾಶ ಇಂದಿಗೂ ಇಲ್ಲಿಯವರೆಗೆ ಬಂದಿಲ್ಲ, ಇದೀಗ ತೆಲುಗು ಚಿತ್ರರಂಗದಿಂದ ಒಂದು ಸಿನಿಮಾಗೆ ನಟಿಯಾಗಿ ಅಭಿನಯಿಸೊ ಅವಕಾಶ ಬಂದಿದೆ.

ಆದರೆ ನಾನು ಈಗಲೇ ಆ ಕುರಿತು ಏನು ಹೇಳುವುದಿಲ್ಲ, ಯಾವ ನಟ, ಆ ಸಿನಿಮಾದ ಹೆಸರು, ಅಸಲಿಗೆ ನಿರ್ದೇಶಕ ಯಾರು ಏನನ್ನು ಕೂಡ ಹೇಳಲಾಗುವುದಿಲ್ಲ. ಎಲ್ಲವೂ ಖಾಯಂ ಆದಮೇಲೆ ನಾನೇ ಮುಂದೆ ಬಂದು ಹೇಳುತ್ತೇನೆ ಎಂದಿದ್ದಾರೆ. ಏನೇ ಇರಲಿ ನಿವೇದಿತಾ ಇನ್ನಷ್ಟು ಎತ್ತರಕ್ಕೆ ಸಿನಿಮಾರಂಗದಲ್ಲಿ ಬೆಳೆಯಲಿ ಎಂದು ಹಾರೈಸೋಣ. ಅದು ನಮ್ಮ ಕನ್ನಡದಲ್ಲಿಯೇ ಆಗಲಿ ಎಂದು ಶುಭ ಕೋರೋಣ ಧನ್ಯವಾದಗಳು...