Nivedita Gowda : ವೇದಿಕೆ ಮೇಲೆಯೇ ಓಡಿ ಹೋಗೋಣ ಎಂದ ಬೇಬಿ ಡಾಲ್ ನಿವೇದಿತಾ..! ಜಡ್ಜಸ್ ಮಾಡಿದ್ದೇನು

By Infoflick Correspondent

Updated:Saturday, June 11, 2022, 13:19[IST]

Nivedita Gowda :  ವೇದಿಕೆ ಮೇಲೆಯೇ ಓಡಿ ಹೋಗೋಣ ಎಂದ ಬೇಬಿ ಡಾಲ್ ನಿವೇದಿತಾ..! ಜಡ್ಜಸ್ ಮಾಡಿದ್ದೇನು

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿ ಇದೀಗ ಜನ ಮನಗೆದ್ದಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ತುಂಬಾ ಪ್ರಾಮುಖ್ಯತೆ ಪಡೆದಿದೆ. ವಾರಂತ್ಯಕ್ಕೆ ಬಂತು ಅಂದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಾಕಷ್ಟು ಕಾರ್ಯಕ್ರಮಗಳು ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಲೇ ಇರುತ್ತವೆ. ಹೌದು ಕಲರ್ಸ್ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮನರಂಜನೆಯ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾಮಿಡಿ ಪ್ರೋಗ್ರಾಮ್ ಗಳು ಕೂಡ ನಡೆಯುತ್ತಿವೆ. ಗೆಜ್ಜೆ ಗಿಲಿಗಿಲಿ ಎಂಬ ಕಾರ್ಯಕ್ರಮಕ್ಕೆ ಆರಂಭದಲ್ಲಿ ಸೃಜನ್ ಲೋಕೇಶ್ ಹಾಗೂ ಶ್ರುತಿ ಅವರು ತೀರ್ಪುಗಾರರಾಗಿ ಬಂದಿದ್ದರು. ಆದ್ರೆ ಇದೀಗ ಅತ್ತ ರಾಜ-ರಾಣಿ ಸೀಸನ್-2 ಮತ್ತೆ ಬಂದ ಕಾರಣಕ್ಕೆ ಸೃಜನ್ ಲೋಕೇಶ್ ಅವರು ಅಲ್ಲಿಗೆ ಹೋಗಿದ್ದಾರೆ.

ಜೊತೆಗೆ ಈ ಕಾರ್ಯಕ್ರಮಕ್ಕೆ ಕಾಮಿಡಿ ನಟ ಸಾಧುಕೋಕಿಲ್ ಅವರು ಜಡ್ಜ್ ಆಗಿ ಆಗಮಿಸಿದ್ದಾರೆ ಎನ್ನಲಾಗಿದೆ. ಹೌದು ಕನ್ನಡ ಕಿರುತೆರೆಯ ಸಾಕಷ್ಟು ಕಾಮಿಡಿ ಕಲಾವಿದರು ಈ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಇದ್ದಾರೆ. ಇನ್ನು ಮಜಾ ಟಾಕೀಸ್ ಕೆಲ ಕಲಾವಿದರು ಕೂಡ ನಟನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕ ಕೂಡ ಸಹ ಇದ್ರಲ್ಲೇ ಅಭಿನಯ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಅವರು ಇಂದು ಟೀಚರ್ ಪಾತ್ರ ಮಾಡುತ್ತಿದ್ದರು. ಆಗ ಶ್ರುತಿ ಅವರು ಎ ಫಾರ್ ಆಪಲ್ ಅನ್ನುವ ಹಾಗೆ ಕನ್ನಡದಲ್ಲಿ ಹೇಳಲು ಬಯಸುತ್ತೀರಾ ಎಂದಾಗ, ಎ ಫಾರ್ ಆನೆ ಎಂದು ಮಾತನ್ನು ಆರಂಭಿಸಿದ ನಿವೇದಿತಾ ಗೌಡ, ಆ ಫಾರ್ ಆಮೆ ಐ ಫಾರ್ ಐತಲಕಡಿ, ಒ ಫಾರ್ ಓಡಿಹೋಗೋಣ ಎಂದರು. 

ಹೌದು ನಿವೇದಿತ ಮಾತಿಗೆ ಶ್ರುತಿ ಮತ್ತು ಸಾಧುಕೋಕಿಲಾ ಅವರ ಬಿದ್ದುಬಿದ್ದು ನಕ್ಕಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಈ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ನಿವೇದಿತಾ ಅವರ ಎಪಿಸೋಡ್ ಪ್ರಸಾರವಾಗಲಿದೆ. ನೀವು ಕೂಡ ಇದಕ್ಕೆ ಕಾಯುತ್ತಿದ್ದರೆ ತಪ್ಪದೆ ಕಾಮೆಂಟ್ ಮಾಡಿ. ಹಾಗೆ ಈ ಮಾಹಿತಿಯನ್ನು ಶೇರ್ ಮಾಡಿ. ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಹೇಗೆ ಅಭಿನಯ ಮಾಡುತ್ತಿದ್ದಾರೆ ಎಂಬುದಾಗಿಯೂ ಸಹ ಹೇಳಿ ಧನ್ಯವಾದ ( video credit : colours kannada ).