Nivedita Gowda : ಬಿಕ್ಷುಕಿಯಾದ ನಿವೇದಿತಾ..! ಹೆಂಡತಿಯ ಅವತಾರ ನೋಡಿ ಚಂದನ್ ನೀಡಿದ ರಿಯಾಕ್ಷನ್ ಹೀಗಿತ್ತು

By Infoflick Correspondent

Updated:Saturday, May 14, 2022, 09:59[IST]

Nivedita Gowda : ಬಿಕ್ಷುಕಿಯಾದ ನಿವೇದಿತಾ..! ಹೆಂಡತಿಯ ಅವತಾರ ನೋಡಿ ಚಂದನ್ ನೀಡಿದ ರಿಯಾಕ್ಷನ್ ಹೀಗಿತ್ತು

ಬಿಗ್ ಬಾಸ್ ಮೂಲಕ ಇಡೀ ಕನ್ನಡ ಜನತೆಗೆ ಪರಿಚಯ ಆಗಿರುವ ನಿವೇದಿತಾ ಗೌಡ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಕಾಣುತ್ತಾರೆ. ಮಿಸ್ಟರ್ಸ್ ಇಂಡಿಯಾ ಕಾಂಪಿಟೇಷನ್ನಲ್ಲಿ ನಿವೇದಿತ ಗೌಡ ಅವರು ಈಗ ಭಾಗವಹಿಸುತ್ತಿದ್ದು ಈಗಾಗಲೇ ಅದಕ್ಕಾಗಿ ಬೇಕಾದ ಎಲ್ಲಾ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಿವೇದಿತ ಗೌಡ ಅವರು ಬಿಡುವಿನ ವೇಳೆ ಯುಟ್ಯೂಬ್ ಚಾನೆಲ್ ಒಳಗೆ ವಿಡಿಯೋಗಳನ್ನು ಹರಿಬಿಡುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತು. ಕೆಲವು ವೈಯಕ್ತಿಕ ವಿಚಾರಗಳನ್ನು, ಅಡುಗೆ ವಿಡಿಯೋಗಳನ್ನು, ಮೇಕಪ್ ವಿಡಿಯೋಗಳನ್ನು, ಟಾಸ್ಕ್ ವಿಡಿಯೋಗಳನ್ನು ಹಾಗೆ ತುಂಬಾ ಫನ್ನಿ ಆಗಿರುವ ವಿಡಿಯೋಗಳನ್ನ ಅಭಿಮಾನಿಗಳ ಬಳಿ ಹಂಚಿಕೊಳ್ಳುತ್ತಾರೆ ನಿವೇದಿತಾ..

ಚಂದನ್ ಜೊತೆಯಲ್ಲಿ ರೀಲ್ಸ್ ಮಾಡುವ ನಿವೇದಿತಾ ಗೌಡ ಅವರು ಇತ್ತೀಚಿಗೆ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭರ್ಜರಿ ಪ್ರದರ್ಶನ ಮಾಡುತ್ತಿದ್ದು, ಜಾಣತನದ ಅಭಿನಯಗಾರ್ತಿ ಎಂದು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ. ಹೌದು ನಿವೇದಿತಾ ಗೌಡ ಅವರು ಇದೀಗ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಒಂದು ಬಿಕ್ಷುಕಿ ಪಾತ್ರ ಮಾಡಿದ್ದು, ಅದರ ವೀಡಿಯೋ ತುಣುಕು ಎಲ್ಲೆಡೆ ವೈರಲ್ ಆಗುತ್ತಿದೆ. ನಿವೇದಿತಾ ಅವರನ್ನು ಭಿಕ್ಷುಕಿ ಪಾತ್ರದಲ್ಲಿ ನೋಡಿ ಎಲ್ಲರೂ ಸಹ ಬೆರಗಾಗಿದ್ದಾರೆ. ಹಾಗೆ ಚಂದನ್ ಸಹ ಬೆರಗಾಗಿದ್ದಾರೆ. ಹೌದು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಸ್ರಾಸ್ಟಂಗ ನಮಸ್ಕಾರ ಎಂದ ಚಂದನ್ ಶೆಟ್ಟಿ  ಮಾತಿಗೆ ನಿವೇದಿತಾ ರಿಯಾಕ್ಷನ್ ನೋಡಲೇಬೇಕು.  .  

ಅದರ ಅಸಲಿ ವಿಡಿಯೋ ಈ ಲೇಖನದ ಕೊನೆಯಲ್ಲಿದೆ ಒಮ್ಮೆ ನೋಡಿ. ಹಾಗೆ ಚಂದನ್ ಶೆಟ್ಟಿ ಮಾತನ್ನು ಕೇಳಿದ ನಿವೇದಿತಾ ಬಳಿಕ ಮಾಡಿದ್ದೇನು ಎಂದು ಈ ವಿಡಿಯೋದಲ್ಲಿ ನೋಡಿ. ವಿಡಿಯೋ ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು..

(video credit : colours kannada ).