ಕೈ ಉಪಯೋಗಿಸದೆ ಮುದ್ದೆ ತಿನ್ನುವ ಚಾಲೆಂಜ್ ಮಾಡಿದ ನಿವೇದಿತಾ..! ವಿಡಿಯೋ ನೋಡಿ ಬಿದ್ದು ಬಿದ್ದು ನಗುತ್ತಿರ
Updated:Wednesday, March 16, 2022, 08:33[IST]

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Nivedita Gowda) ಹಾಗೂ ಕಿರುತೆರೆ ನಟಿ ವೈಷ್ಣವಿ (Vaishnavi Gowda) ಇದೀಗ ಮತ್ತೊಂದು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಈ ಮುಂಚೆ ಬಿಗ್ಬಾಸ್ ಮನೆಯಿಂದ ಬಂದ ಬಳಿಕ ನಿವೇದಿತಾ ಗೌಡ ಅವರು ಸೋಷಿಯಲ್ ವಿಡಿಯೋದಲ್ಲಿ ಹೆಚ್ಚಾಗಿಯೇ ಆಕ್ಟಿವ್ ಇದ್ದಾರೆ ಎಂದು ಹೇಳಬಹುದು. ಯುಟ್ಯೂಬ್ ಚಾನೆಲ್ ತೆರೆದಿರುವ ನಿವೇದಿತಾ ಅವರು ಅವರ ವೈಯಕ್ತಿಕ ವಿಚಾರಗಳ ಕುರಿತು ಕೆಲವು ಸಕತ್ ವಿಡಿಯೋ ಮೂಲಕ ಅಭಿಮಾನಿಗಗಾಗಿ ಶೇರ್ ಮಾಡುತ್ತಾರೆ. ಅವರ ಪ್ರತಿದಿನದ ಚಟುವಟಿಕೆ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದರು. ಹೌದು ಇದೀಗ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಅವರ ಜೊತೆ ಸೇರಿ ಮನೆಯಲ್ಲಿ ಮುದ್ದೆ ತಯಾರಿಸುವ ಮೂಲಕ ನಿವೇದಿತ ಗೌಡ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ರಾಗಿಮುದ್ದೆಯನ್ನು ಮನೆಯಲ್ಲಿ ವೈಷ್ಣವಿ ಅವರ ಜೊತೆ ತಯಾರಿಸಿ ನಂತರ, ಅದನ್ನು ಎರಡು ಪ್ಲೇಟಿನಲ್ಲಿ ಇರಿಸಿ ಕೈ ಉಪಯೋಗಿಸದೇನೆ ಮುದ್ದೆ ತಿನ್ನಬೇಕು ಎಂದು ವೈಷ್ಣವಿ ಅವರಿಗೆ ನಿವೇದಿತಾ ಗೌಡ ಹೇಳುತ್ತಾರೆ. ಆಗ ವೈಷ್ಣವಿ ಕೈ ಉಪಯೋಗಿಸದೇನೆ ಹೇಗೆ ತಿನ್ನಬೇಕು ಎಂದು ಕೇಳುತ್ತಾರೆ. ಆಗ ನಿವೇದಿತಾ ಕೈ ಉಪಯೋಗಿಸದೆ ಬಾಯಿಯಲ್ಲಿಯೇ ಮುದ್ದೆಯನ್ನು ತಿನ್ನುವ ಚಾಲೆಂಜ್ ಮಾಡೋಣ. ಮೊದಲು ಯಾರು ಮುಗಿಸುತ್ತಾರೆ ನೋಡೋಣವೆಂದು ನಿವೇದಿತಾ ಹೇಳುತ್ತಾರೆ. ಆಮೇಲೆ ಇಬ್ಬರು ತಿನ್ನಲು ಶುರು ಮಾಡುತ್ತಾರೆ. ಅಸಲಿಗೆ ಇವರ ಈ ವಿಡಿಯೋ ಹೇಗಿದೆ ಗೊತ್ತಾ..? ಇವರು ಯಾವ ರೀತಿ ಮುದ್ದೆಯನ್ನು ತಿಂದು ಮುಗಿಸುತ್ತಾರೆ ಎಂದು ಈ ವಿಡಿಯೋ ನೋಡಿ.
ನಿವೇದಿತಾ ವೈಷ್ಣವಿ ಅವರ ಮುದ್ದೆ ತಿನ್ನುವ ಚಾಲೆಂಜ್ ವೀಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೇನೆ ನಿವೇದಿತಾ ಯಾವ ರೀತಿ ತಿನ್ನಬೇಕು ಎಂದು ಹೇಳಿಕೊಡುವ ಶೈಲಿ ಇದೀಗ ಟ್ರೋಲ್ ಸಹ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮೂಲಕ ತಿಳಿಸಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು..