Nivedita Gowda : ಜೂ. ಚಂದನ್ ಶೆಟ್ರು ಯಾವಾಗ ಬರುತ್ತಾರಂತೆ ಗೊತ್ತಾ..? ನಿವೇದಿತಾ ಹೇಳಿದ್ದು ಕೇಳಿ

By Infoflick Correspondent

Updated:Tuesday, July 12, 2022, 17:21[IST]

Nivedita Gowda : ಜೂ. ಚಂದನ್ ಶೆಟ್ರು ಯಾವಾಗ ಬರುತ್ತಾರಂತೆ ಗೊತ್ತಾ..? ನಿವೇದಿತಾ ಹೇಳಿದ್ದು ಕೇಳಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಜೋಡಿಗಳು ಅವರದ್ದೇ ಆದ ಅಪರಾಭಿಮಾನಿ ಬಳಗ ಹೊಂದಿದ್ದಾರೆ. ಹೆಚ್ಚು ಅಭಿಮಾನಿಗಳನ್ನ ಅವರದೇ ಆದ ವಿಶಿಷ್ಟ ಕೆಲಸಗಳ ಮೂಲಕ ಹೊಂದಿ, ನಟನೆ ಮೂಲಕ ಹೆಸರು ಮಾಡಿದ್ದಾರೆ. ಹೌದು ಕನ್ನಡದಲ್ಲಿ ಈಗಾಗಲೇ ಕ್ಯೂಟ್ ಜೋಡಿ ಎಂದೇ ಕರೆಸಿಕೊಂಡಿರುವ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಪನ್ನಿ ವಿಡಿಯೋಗಳು ಕಂಡು ಬಂದಿವೆ. ಹಾಗೆ ಸಮಯ ಸಿಕ್ಕಾಗಲೆಲ್ಲ ನಿವೇದಿತಾ ಗೌಡ ಅವರು ಚಂದನ್ ಜೊತೆ ಕೆಲವೊಂದಿಷ್ಟು ಕಾಮಿಡಿ ಮೂಲಕ ರೀಲ್ಸ್ ಮಾಡುತ್ತಾ ಎಲ್ಲರ ಮನ ಗೆಲ್ಲುತ್ತಲೆ ಇರುತ್ತಾರೆ. ಜೊತೆಗೆ ಅಷ್ಟೇ ನಗುವಂತೆ ಮಾಡುತ್ತಾರೆ ನಿವಿ.    

ಹೌದು ನಿವೇದಿತ ಗೌಡ ಅವರು ಶೇರ್ ಮಾಡಿಕೊಳ್ಳುವ ಕೆಲವೊಂದಿಷ್ಟು ವಿಡಿಯೋಗಳು ಹೆಚ್ಚು ನೋಡುಗರಿಗೆ ಖುಷಿತಂದರೆ, ಇನ್ನೂ ಕೆಲವೊಂದಿಷ್ಟು ಜನರಿಗೆ ಕಿರಿ ಕಿರಿ ಮಾಡುತ್ತವೆ ಎನ್ನಬಹುದು. ನೆಟ್ಟಿಗರು ಆ ರೀತಿ ವಿಡೀಯೋ ಕಂಡು ಬಂದರೆ ಹೆಚ್ಚು ಟ್ರೊಲ್ ಮಾಡುತ್ತಾರೆ. ನಿವೇದಿತಾ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ ಕೆಲ ಪ್ರಶ್ನೆಗಳನ್ನು ಮಾಡಲಾಗಿತ್ತು. ನಿವೇದಿತಾ ಗೌಡ ಅವರು, ಅವರ ವಿಡಿಯೋಗಳಲ್ಲಿ ಅವರನ್ನೇ ಯಾಕೆ ಟ್ರೋಲ್ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ನಿವೇದಿತಾ ಹೇಗಿದ್ದರೂ ನನ್ನನ್ನು ಬೇರೆಯವರು ಟ್ರೋಲ್ ಮಾಡುತ್ತಾರೆ ಅಲ್ವಾ, ಹಾಗಾಗಿ ನನ್ನೇ ನಾನು ಟ್ರೊಲ್ ಮಾಡಿಕೊಂಡು ಬಿಡುತ್ತೇನೆ. ಆಗ ಅವರೇನು ಮಾಡ್ತಾರೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

ಜೊತೆಗೆ ಚಂದನ್ ಶೆಟ್ಟಿ ಮತ್ತು ನಿಮ್ಮ ಜೋಡಿ ಬಗ್ಗೆ ಜನರು ಬೇರೆಯದ್ದೆ ರೀತಿ ಮಾತನಾಡಿಕೊಳ್ಳುತ್ತಾರೆ, ಅಂತಹವರ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಅಂತಹ ಲೈಫ್ ಪಾರ್ಟ್ನರ್ ಪಡೆಯೋಕೆ ನಾನು ತುಂಬಾ ಪುಣ್ಯ ಮಾಡಿದ್ದೇನೆ. ಸುಮ್ಮನೆ ಕೂರಬೇಡ ನಿವಿ, ಏನಾದರೂ ಒಂದು ಮಾಡುತ್ತಿರು ಎಂದು ಹೆಚ್ಚು ಮೋಟಿವೇಟ್ ಮಾಡುವುದೇ ನಮ್ಮ ಚಂದನ್ ಶೆಟ್ಟಿ. ಆದ್ದರಿಂದಲೇ ನಾನು ಇಷ್ಟು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ..ಹಾಗೆ ಜೂನಿಯರ್ ಚಂದನ್ ಶೆಟ್ಟಿ ಆಗಮನದ ಬಗ್ಗೆ ಪ್ರಶ್ನೆ ಮಾಡಿದಾಗ ನಿವೇದಿತಾ, ಜೀವನದಲ್ಲಿ ಸಾಧನೆ ಮಾಡಬಹುದು ಇನ್ನೂ ತುಂಬಾನೇ ಇದೆ. ಈ ಸಿನಿ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಬೇಕು ನಾನು, ಹಾಗಾಗಿ ಅದೆಲ್ಲ ಆದ ಮೇಲೆಯೇ ಜೂನಿಯರ್ ಚಂದನ್ ಶೆಟ್ಟಿ ಆಗಮನ ಎಂದು ನನಗೆ ಬಿರಿದ್ದಾರೆ ನಿವೇದಿತ ಗೌಡ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....