Nivedita Gowda : ನಿವೇದಿತಾ ಮಿಸೆಸ್ ಇಂಡಿಯಾ ಕಾಂಪಿಟೇಷನ್ ಗೆ ಹೋಗ್ತಾರಂತೆ..! ಚಂದನ್ ರಿಯಾಕ್ಷನ್ ನೋಡಿ

By Infoflick Correspondent

Updated:Tuesday, May 10, 2022, 19:57[IST]

Nivedita Gowda : ನಿವೇದಿತಾ ಮಿಸೆಸ್ ಇಂಡಿಯಾ ಕಾಂಪಿಟೇಷನ್ ಗೆ ಹೋಗ್ತಾರಂತೆ..! ಚಂದನ್ ರಿಯಾಕ್ಷನ್ ನೋಡಿ

ಕನ್ನಡ ಕಿರುತೆರೆಯ ಕಲಾವಿದರು ಸಾಕಷ್ಟು ಬಾರಿ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಾ  ಚರ್ಚೆಯಲ್ಲಿ ಇರುತ್ತಾರೆ. ಹಾಗೆ ಕೆಲವು ನಿರ್ಧಾರಗಳು ಅವರ ಜೀವನದಲ್ಲಿ ಹೆಚ್ಚು ಬದಲಾವಣೆಗಳ ತರುತ್ತವೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತದನಂತರ ಮನೆಯಲ್ಲಿ ಚಂದನ್ ಶೆಟ್ಟಿ ಜೊತೆ ರೀಲ್ಸ್ ಮಾಡುತ್ತಾ ಸಮಯ ಕಳೆಯುತ್ತಿದ್ದರು. ಜೊತೆಗೆ ಯುಟ್ಯೂಬ್ ಚಾನೆಲ್ ತೆರೆದು ಕೆಲವೊಂದಿಷ್ಟು ವಿಚಾರಗಳ ಅವರ ಅಭಿಮಾನಿ ಬಳಗದ ಮುಂದೆ ಇಡುತ್ತ ಸದಾ ಆಕ್ಟಿವ್ ಇರುತ್ತಿದ್ದರು. ಹೌದು ಹೀಗೆ ಒಂದಿಲ್ಲೊಂದು ವಿಚಾರಗಳಿಗೆ ಹೆಚ್ಚು ಸುದ್ದಿಯಾಗುವ ನಿವೇದಿತಾ ಇದೀಗ ಮಿಸೆಸ್ ಇಂಡಿಯಾ ಕಾಂಪಿಟೇಶನ್ ಗೆ  ಭಾಗವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ನಿವೇದಿತಾ ಗೌಡ ಇದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದಾರಂತೆ. ನಿವೆದಿತ ಗೌಡ ಅವರು ಹೇಳುವ ಹಾಗೆ ಮಿಸೆಸ್ ಇಂಡಿಯಾ ಕಾಂಪಿಟೇಶನ್ ಗೆ ಎಲ್ಲಾ ಸಿದ್ಧತೆ ನಡೆಸಿದ್ದೇನೆ. ನಾನು ಎಲ್ಲದರಲ್ಲಿಯೂ ಕೂಡ ಭಾಗವಹಿಸುತ್ತೇನೆ. ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದೇನೆ. ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದಾಗಿ ಈಗಲೇ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು. ಹಾಗೆ ಇದಕ್ಕೆ ಚಂದನ್ ಶೆಟ್ಟಿ ಪ್ರತಿಕ್ರಿಯೆ ಹೇಗಿತ್ತು ನೀವು  ಮಿಸೆಸ್  ಇಂಡಿಯಾಗೆ ಹೋಗ್ತೀನಿ ಎಂದಾಗ ಎಂದು ಪ್ರಶ್ನೆ ಮಾಡಿದರೆ, ನಿವೇದಿತಾ ಗೌಡ, ಚಂದನ್ ತುಂಬಾನೇ ಖುಷಿಪಟ್ಟರು.

ಜೊತೆಗೆ ಅವರ ಅಪ್ಪ ಅಮ್ಮ, ನಮ್ಮ ತಂದೆ ತಾಯಿ ಎಲ್ಲರೂ ಕೂಡ ತುಂಬಾ ಖುಷಿಪಟ್ಟರು. ನೀನು ಏನೋ ಒಂದು ಮಾಡುತ್ತೀಯ ಮಾಡು ಎಂದು ಹಾರೈಸಿದರು ಚಂದನ್ ಎಂದು ನಿವೇದಿತಾ ಹೇಳಿಕೊಂಡಿದ್ದಾರೆ. ನಿವೆದಿತ ಗೌಡ ಅವರು ಮಿಸೆಸ್  ಇಂಡಿಯಾ ವರ್ಲ್ಡ್ ಕಾಂಪಿಟೇಷನ್ನಲ್ಲಿ ಗೆದ್ದು ಬರಲಿ ಎಂದು ನೀವು ಕೂಡ ಆಶಿಸಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಮಾಹಿತಿ ಶೇರ್ ಮಾಡಿ....