Nivedita Gowda : ಮಿಸೆಸ್ ಇಂಡಿಯಾ ಗೆದ್ದ ಖುಷಿಯಲ್ಲಿ ನಿವೇದಿತಾ..! ಇದು ಯಾವ ಪ್ರಶಸ್ತಿ ಗೊತ್ತಾ..? ಅದಲ್ಲವಂತೆ ನೋಡಿ

By Infoflick Correspondent

Updated:Friday, July 22, 2022, 12:14[IST]

Nivedita Gowda : ಮಿಸೆಸ್ ಇಂಡಿಯಾ ಗೆದ್ದ ಖುಷಿಯಲ್ಲಿ ನಿವೇದಿತಾ..! ಇದು ಯಾವ ಪ್ರಶಸ್ತಿ ಗೊತ್ತಾ..? ಅದಲ್ಲವಂತೆ ನೋಡಿ

ಕನ್ನಡದ ನಟಿ ಟಿಕ್ ಟಾಕ್ ಮಾಡುತ್ತಾ ಹೆಚ್ಚು ಸದ್ದು ಮಾಡಿದ್ದ ನಿವೇದಿತಾ ಗೌಡ ಅವರು ಆರಂಭ ದಿನಗಳಲ್ಲಿ ಅವರದೇ ಆದ ಅಭಿನಯದ ಮೂಲಕ ಮೊಬೈಲ್ ಮೂಲಕ ಹೆಚ್ಚು ಜನರಿಗೆ ತಲುಪಿದ್ದರು. ಅದಾದ ನಂತರ ಇವರಿಗೆ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಕಿರುತೆರೆಯಲ್ಲಿ ಖ್ಯಾತ ಬಿಗ್ ಬಾಸ್ ಮನೆಗೂ ಕೂಡ ಅವಕಾಶವನ್ನು ನೀಡಲಾಗುತ್ತದೆ. ಅಲ್ಲಿಗೂ ನಿವಿ ಎಂಟ್ರಿ ಕೊಡುತ್ತಾರೆ. ಅದಾದ ಮೇಲೆ ಆಗಿದ್ದೆಲ್ಲವನ್ನು ನೀವು ನೋಡಿದ್ದೀರಿ. ಇದೀಗ ರ್ಯಾಪರ್ ಚಂದನ್ ಅವರ ಹೆಂಡತಿಯಾಗಿರುವ ನಿವೇದಿತಾ ಗೌಡ ಅವರು ಅವರದೇ ಆದ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು ಸಾಕಷ್ಟು ವಿಚಾರಗಳನ್ನು ಅವರ ಅಭಿಮಾನಿಗಳ ಮುಂದೆ ಇಡುತ್ತಾರೆ. 

ಹಾಗೆ ಅವರ ದೈನಂದಿನ ಚಟುವಟಿಕೆ, ಬಳಸುವ ವಸ್ತುಗಳು, ಹಾಗೆ ಮೇಕಪ್ ಸಂಬಂಧದ ವಿಚಾರಗಳು, ಹಾಗೂ ಒಳ್ಳೆಯ ಆರೋಗ್ಯ ಟಿಪ್ಸ್ ಗಳನ್ನು ಸಹ ನಿವೇದಿತಾ ನೀಡುತ್ತಾ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ನಿವೇದಿತಾ ಗೌಡ ಇತ್ತೀಚಿಗೆ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಕಾರ್ಯಕ್ರಮದಲ್ಲೂ ಸಹ ಎಲ್ಲರ ಗಮನ ಸೆಳೆದು ಜನರನ್ನ ನಗಿಸಲು ಯತ್ನಿಸುತ್ತಿದ್ದಾರೆ. ವಿಶೇಷವಾಗಿ ಮಿಸೆಸ್ ಇಂಡಿಯಾ ಕಾಂಪಿಟೇಷನ್ ನಲ್ಲೂ   ಭಾಗವಹಿಸುತ್ತಿದ್ದು, ಈಗ ಅದರ ಬಗ್ಗೆ ಒಂದು ಖುಷಿ ವಿಚಾರ ಹೊರ ಬಿದ್ದಿದೆ. ಅವರ ಅಭಿಮಾನಿಗಳು ಈ ವಿಚಾರ ತಿಳಿದು ಖುಷಿಯಾಗಿರುವುದಂತೂ ಸುಳ್ಳಲ್ಲ. ಮಿಸೆಸ್ ಇಂಡಿಯಾ ಕಾಂಪಿಟೇಷನ್ ನಲ್ಲಿ ವಿನ್ನರ್ ಆಗಬೇಕು ಅಂದರೆ ಅದು ಅಷ್ಟು ಸುಲಭದ ಮಾತಲ್ಲ, ಅದಕ್ಕಾಗಿ ಹೆಚ್ಚು ಪರಿಶ್ರಮವೂ ಇರಬೇಕು. ಹಾಗೆ ಅದಕ್ಕಾಗಿ ಬೇಕಾಗುವ ಎಲ್ಲಾ ಸಿದ್ಧತೆಯನ್ನ ಕೈಗೊಳ್ಳಬೇಕು.

ಹೌದು ನಿವೇದಿತ ಗೌಡ ಇದೀಗ ಮಿಸೆಸ್ ಇಂಡಿಯಾ ಇಂಕ್ ಪೀಪಲ್ ಚಾಯ್ಸ್ ಎನ್ನುವ ಹಂತದಲ್ಲಿ ಜನರ ಮನಸ್ಸನ್ನು ಗೆದ್ದು ವಿನ್ನರ್ ಆಗಿದ್ದಾರಂತೆ. ಜನರ ಆಯ್ಕೆಯಂತೆ ಒಂದು ಭಾಗದ ವಿಜೇತೆ ಆಗಿ ನಿವೇದಿತಾ ಹೊರಹೊಮ್ಮಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೇಳಿಕೊಂಡಿರುವ ಸಂಸ್ಥೆ ಜನರ ಮನಸ್ಸನ್ನು ಗೆಲ್ಲುವಲ್ಲಿ ಪೀಪಲ್ ಚಾಯ್ಸ್ ವತಿಯಿಂದ ನಿವೇದಿತಾ ಸಾಕಷ್ಟು ಹೃದಯವನ್ನು ಗೆದ್ದಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ನಿವೇದಿತಾ ಗೌಡ ಅವರು ಕೂಡ ಈ ವಿಚಾರವನ್ನು ಒಂದು ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಫೋಟೋ. ಈ ಬಗ್ಗೆನೇ ಅಭಿಪ್ರಾಯ ತಿಳಿಸಿ, ಹಾಗೇನೇ ತಪ್ಪದೆ ಮಾಹಿತಿ ಶೇರ್ ಮಾಡಿ. ಇದು ಕೇವಲ ಒಂದು ಭಾಗದ ಗೆಲುವಾಗಿದೆ ಆದರೆ ನಿಜವಾದ ಮಿಸಸ್ ಇಂಡಿಯಾ ವಿನ್ನರ್ ನಿವೇದಿತ ಅಲ್ಲ ಎಂದು ಈ ಮೂಲಕ ತಿಳಿದು ಬಂದಿದೆ, ಧನ್ಯವದ..