ಮತ್ತೆ ಮತ್ತೆ ಡ್ಯಾನ್ಸ್ ಮಾಡಿ ಪತಿಗೆ ಕಾಟ ಕೊಡುತ್ತಿರುವ ನಿವೇದಿತಾ ಗೌಡ

By Infoflick Correspondent

Updated:Wednesday, April 20, 2022, 09:36[IST]

ಮತ್ತೆ ಮತ್ತೆ ಡ್ಯಾನ್ಸ್ ಮಾಡಿ ಪತಿಗೆ ಕಾಟ ಕೊಡುತ್ತಿರುವ ನಿವೇದಿತಾ ಗೌಡ

ರೀಲ್ಸ್ ಗಳಿಂದಲೇ ಹೆಸರು ಮಾಡಿರುವ ನಿವೇದಿತಾ ಗೌಡ ಅವರು ತಮ್ಮ ಮಗುವಿನ ಕಂಠದಿಂದಲೇ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿ ಕಾಮಿಡಿ ಮಾಡುತ್ತಾ, ಡ್ಯಾನ್ಸ್, ರೀಲ್ಸ್ ಮಾಡುತ್ತಾ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಇದೀಗ ಅವರದೇ ಒಂದು ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ಇದರಲ್ಲಿ ಕೆಲ ಪ್ರಾಡಕ್ಟ್ ಗಳ ಬಗ್ಗೆ ವಿವರಿಸುವುದರ ಜೊತೆಗೆ, ತಮ್ಮ ಬಗ್ಗೆ, ಚಂದನ್ ಶೆಟ್ಟಿ ಬಗ್ಗೆ, ಹಾಗೆ ಇತರೆ ವಿಚಾರಗಳ ಬಗ್ಗೆಯೂ ಮಾಹಿತಿ ನೀಡುತ್ತಿರುತ್ತಾರೆ. 

ಇತ್ತೀಚೆಗಷ್ಟೇ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ  ಹ್ಯಾಂಡ್ ಬ್ಯಾಗ್ ಕಲೆಕ್ಷನ್, ಶೂ, ಸ್ಯಾಂಡಲ್ಸ್ ಸೆಲೆಕ್ಷನ್, ಚಂದನ್ ಶೆಟ್ಟಿ ಸ್ಟುಡಿಯೋ, ಬಗ್ಗೆ ವೀಡಿಯೋ ಮಾಡಿದ್ದರು. ನಂತರ ನಿವೇದಿತಾ ಗೌಡ ಅವರು ತಮ್ಮ ವೀಡಿಯೋಗಳಿಗೆ ಬಂದಿರುವ ಕಮೆಂಟ್ ಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದರು. 14 ನಿಮಿಷದ ಈ ವೀಡಿಯೋದಲ್ಲಿ ನಿವೇದಿತಾ ಗೌಡ ಮುದ್ದು ಮುದ್ದಾಗೇ ಮಾತನಾಡಿದ್ದರು. ಇದೀಗ ಹೋಮ್ ಟೂರ್ ಮಾಡಿ, ತಮ್ಮ ಮನೆಯಲ್ಲಿ ಏನಿದೆ. ಏನಿಲ್ಲ. ಅವರಿಗೆ ಇಷ್ಟವಾದ ಜಾಗ ಯಾವುದು, ಇಷ್ಟಪಡುವ ಫರ್ನೀಚರ್, ಅವರ ಕಲೆಕ್ಷನ್ಸ್ ಗಳ ಬಗ್ಗೆ ತೋರಿಸಿದ್ದರು.    

ಹೀಗೆ ಏನಾದರೂ ಒಂದನ್ನು ಮಾಡುತ್ತಿರುವ ನಿವೇದಿತಾ ಗೌಡ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸದಾ ಡ್ಯಾನ್ಸ್ ಮಾಡಿ ರೀಲ್ಸ್ ಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಪತಿ ಕೆಲಸ ಮಾಡುವಾಗ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಾ ಚಂದನ್ ಶೆಟ್ಟಿಗೆ ಡಿಸ್ಟರ್ಬ್ ಮಾಡಿದ್ದರು. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಷ್ಟು ಟ್ರೋಲ್ ಆಗಿದ್ದರೂ ಕೂಡ ಕೇರ್ ಮಾಡದ ನಿವೇದಿತಾ ಗೌಡ ಈಗ ಚಮ್ ಚಮ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆಯೂ ಕೆಲಸ ಮಾಡುತ್ತಿರುವ ಚಂದನ್ ಶೆಟ್ಟಿಗೆ ಕಿರಿಕಿರಿ ಮಾಡಿದ್ದಾರೆ.