ಅಪ್ಪು ಬಗ್ಗೆ ಮನಬಿಚ್ಚಿ ಮಾತನಾಡಿದ ಶಿವಣ್ಣನ ಪುತ್ರಿ..! ಅಸಲಿಗೆ ಹೇಳಿದ್ದೇನು ನೋಡಿ

By Infoflick Correspondent

Updated:Tuesday, May 17, 2022, 08:15[IST]

ಅಪ್ಪು ಬಗ್ಗೆ ಮನಬಿಚ್ಚಿ ಮಾತನಾಡಿದ ಶಿವಣ್ಣನ ಪುತ್ರಿ..! ಅಸಲಿಗೆ ಹೇಳಿದ್ದೇನು ನೋಡಿ

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಇತ್ತೀಚಿಗೆ ಅವರ ಮಗಳಾದ ನಿವೇದಿತಾ ಅವರ ಹೊಸ ವೆಬ್ ಸೇರೀಸ್ ಬಗ್ಗೆ ಮಾತನಾಡಿ, ಕನ್ನಡದಲ್ಲಿ ಹೊಸ ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ ಎಲ್ಲಾ ಹೊಸಬರಿಗೆ ಒಳ್ಳೆಯದು ಆಗಲಿ ಎಂದು ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಇದೀಗ ನಿವೇದಿತಾ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹನಿಮೂನ್ ವೆಬ್ ಸೀರಿಸ್ ಬಗ್ಗೆ ನಿವೇದಿತಾ ಅವರೇ ಮನಬಿಚ್ಚಿ ಮಾತನಾಡಿದ್ದಾರೆ. ಅದೇ ವೇಳೆ ಅಪ್ಪು ಅವರ ಬಗ್ಗೆ ಪ್ರಶ್ನೆ ಮಾಡಿದಾಗ, ನಿಜ ನಮ್ಮ ಚಿಕ್ಕಪ್ಪನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವೆಬ್ ಸೇರೀಸ್ ಆರಂಭ ಮಾಡುತ್ತಿದ್ದೇವೆ ಎಂದಾಗ ಚಿಕ್ಕಪ್ಪ ತುಂಬಾ ಖುಷಿಪಟ್ಟಿದ್ದರು. 

ಆದರೆ ಹನಿಮೂನ್ ವೆಬ್ ಸೇರೀಸ್ ಮುಂಚೆ ಬಂದಿದ್ದ ಆ ಒಂದು ಚಿತ್ರದ ಟ್ರೈಲರ್ ನ ಮಾತ್ರ ವೀಕ್ಷಣೆ ಮಾಡಿದ್ದರು. ಆಗ ಸಕತ್ತಾಗಿದೆ ಎಂದಿದ್ದರು. ಆದರೆ ಹನಿಮೂನ್ ಟ್ರೈಲರ್ ನೋಡಿರಲಿಲ್ಲ ಅಂದಿದ್ದಾರೆ ನಿವೇದಿತಾ. ಹೌದು ಹನಿಮೂನ್ ವೆಬ್ ಸೇರೀಸ್ ಚಿತ್ರದಲ್ಲಿ ಕಾಮಿಡಿ ನಟ ನಾಗಭೂಷಣ ನಾಯಕನಟನಾಗಿ ಅಭಿನಯ ಮಾಡುತ್ತಿದ್ದು, ಅತ್ತ ಸಲಗದ ನಟಿ ಸಂಜನಾ ಆನಂದ್ ಅವರು ಮುಖ್ಯ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ. ಮದುವೆಯಾದ ಬಳಿಕ ಕೇರಳ ಕಡೆ ಮುಖ ಮಾಡುವ ಈ ಜೋಡಿ ಹನಿಮೂನಿಗೆಂದು ತೆರಳುತ್ತದೆ. ಆನಂತರ ಏನೆಲ್ಲಾ ಆಗುತ್ತದೆ ಎಂಬುದಾಗಿ ಈ ವೆಬ್ ಸೀರಿಸ್ ನಲ್ಲಿ ಎಲ್ಲಾ ತೋರಿಸಲಾಗುತ್ತದೆ. ಒಟ್ಟು ಆರು ಎಪಿಸೋಡ್ ಇವೆ ಎನ್ನಲಾಗಿದೆ. 

ಇದೀಗ ಈ ಬಗ್ಗೆ ಮಾತನಾಡಿದ ನಿವೇದಿತಾ ಅವರು ಅಪ್ಪು ಅವರ ಬಗ್ಗೆ ಒಂದು ಕ್ಷಣ ಭಾವುಕರಾದರು. ನೀವೇದಿತ ಅವರ ಮುಂದಿನ ಪ್ಲಾನ್ ಏನು ಎಂಬುದಾಗಿ ಈಗ ಒಂದು ಸಂದರ್ಶನದಲ್ಲಿ ತಿಳಿಸಿದ್ದು, ನಟ ಪುನೀತ್ ಅವರ ಬಗ್ಗೆ ಶಿವಣ್ಣನ ಪುತ್ರಿ ಆಡಿದ ಮಾತುಗಳ ಒಮ್ಮೆ ಕೇಳಿ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...( video credit ; news first kannada )