Niveditha Gowda : ಮಿಸಸ್ ಇಂಡಿಯಾ 2022 ಗೆ ಎಂಟ್ರಿ ಕೊಟ್ರಾ ನಿವೇದಿತಾ ಗೌಡ !!
Updated:Wednesday, June 15, 2022, 09:02[IST]

ಸದ್ಯ ಗಿಚ್ಚ ಗಿಲಿ ಗಿಲಿ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ನಿವೇದಿತಾ ಗೌಡ ಅವರು ಈಗ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಆಗಾಗಾ ಅಲ್ಲಿನ ತಯಾರಿಗಳ ಬಗ್ಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ನಿವೇದಿತಾ ಅವರು ಈಗ ಸೆಲೆಕ್ಟ್ ಆಗಿದ್ದಾರೆ. ಇದರ ವೀಡಿಯೋವನ್ನು ಹಂಚಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಲ್ಲಿನ ತರಬೇತಿಗಳ ಬಗ್ಗೆ ವೀಡಿಯೋಗಳನ್ನು ಮಾಡಿ ಹಾಕುತ್ತಿದ್ದ ನಿವೇದಿತಾ ಗೌಡ ಅವರು ಈಗ ತಾವು ಸೆಲೆಕ್ಟ್ ಆಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
ಇದರ ವೀಡಿಯೋಗಳಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಸ್ಪೆರ್ಧೆಗೆ ನಿಷ್ಠೆಯಿಂದ ತಯಾರಿ ನಡೆಸಿರುವ ನಿವೇದಿತಾ ಅವರು, ಜಿಮ್, ಡಯಟ್, ವರ್ಕೌಟ್ ಕೂಡ ಮಾಡಿದ್ದಾರೆ. ಇನ್ನು ಅಲ್ಲಿ ಚಾಲೆಂಜಿಂಗ್ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಮಾಡೆಲ್ ಗಳು ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಿಕೊಡಲಾಗಿದ್ದು, ನಿವೇದಿತಾ ಗೌಡ ಅವರು ಕಲಿತಿರುವ ವೀಡಿಯೋಗಳನ್ನು ಕೂಡ ಶೇರ್ ಮಾಡಿದ್ದಾರೆ.
ಈ ಮೊದಲು ಕೂಡ ಸ್ಪರ್ಧೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ನಿವೇದಿತಾ, ತಮ್ಮ ಆಸೆಗಳನ್ನು ಹೇಳಿಕೊಂಡಿದ್ದರು. ಮಿಸೆಸ್ ಇಂಡಿಯಾ ಆಗಬೇಕು ಎಂಬ ಕನಸು ಕಾಣುತ್ತಿದ್ದಾರಂತೆ. ಅದಕ್ಕಾಗಿ ಅವರು ತರಬೇತಿಯನ್ನು ಪಡೆದಿದ್ದಾರೆ. ಇನ್ನು ನಿವೇದಿತಾ ಗೌಡ ಅವರ ರೋಲ್ ಮಾಡಲ್ ಬಾಲಿವುಡ್ ನಟಿ ಐಶ್ವರ್ಯ ರೈ ಅಂತೆ. ರೀಲ್ಸ್ ಗಳಿಂದಲೇ ಹೆಸರು ಮಾಡಿರುವ ನಿವೇದಿತಾ ಗೌಡ ಅವರು ತಮ್ಮ ಮಗುವಿನ ಕಂಠದಿಂದಲೇ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿ ಕಾಮಿಡಿ ಮಾಡುತ್ತಾ, ಡ್ಯಾನ್ಸ್, ರೀಲ್ಸ್ ಮಾಡುತ್ತಾ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ.