ನಮಗೆ ಯಾರು ದುಡ್ಡು ಕೊಡೋಲ್ಲ ಎಂದ ಅದಿತಿ..! ದುಡ್ಡಿಗೆ ಅದನ್ನ ಮಾಡೆ ಮಾಡ್ತಿನಿ ಅಂದಿದ್ದೇಕೆ..?

By Infoflick Correspondent

Updated:Friday, May 13, 2022, 09:09[IST]

ನಮಗೆ ಯಾರು ದುಡ್ಡು ಕೊಡೋಲ್ಲ ಎಂದ ಅದಿತಿ..! ದುಡ್ಡಿಗೆ ಅದನ್ನ ಮಾಡೆ ಮಾಡ್ತಿನಿ ಅಂದಿದ್ದೇಕೆ..?

ಕನ್ನಡ ಚಿತ್ರರಂಗದ ಕ್ಯೂಟ್ ಬೆಡಗಿ ಅಧಿತಿ ಪ್ರಭುದೇವ್ ಕನ್ನಡದ ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗ ಅವರದೇ ಆದ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಪ್ರಭುದೇವ್ ಗಿಟ್ಟಿಸಿಕೊಂಡಿದ್ದಾರೆ. ಹೌದು ನಟಿ ಅದಿತಿ ಪ್ರಭುದೇವ್ ಅವರು ತುಂಬಾನೇ ಸ್ಟ್ರೈಟ್ ಫಾರ್ವರ್ಡ್. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ಅದಿತಿ ಪ್ರಭುದೇವ ಅವರು ಮಾಧ್ಯಮದವರು ಕೇಳುವ ಪ್ರಶ್ನೆಗೆ ತುಂಬಾ ಸ್ಮಾರ್ಟ್ ಆನ್ಸರ್ ಕೊಡುತ್ತಾರೆ. 

ಅದು ಗೊತ್ತಿರುವ ವಿಚಾರ.  ಪ್ರಭುದೇವ್ ಅವರು ಇತ್ತೀಚಿಗೆ ಮದುವೆ ಆಗುವ ಹುಡುಗನ ಬಗ್ಗೆ ಹೇಳಿದ್ದು ನಾನು ಲವ್ ಮಾಡಿ ಮದುವೆ ಆಗುವುದಕ್ಕೆ ಆಗಲಿಲ್ಲ, ಆದರೆ ಇದೀಗ ಮನೆಯವರು ನೋಡಿದ ಹುಡುಗನ ಜೊತೆ ಜೀವನ ಮಾಡಲು ನಿರ್ಧರಿಸಿದೆ. ಆದರೆ ಮದುವೆ ಇಷ್ಟರಲ್ಲಿಯೇ ಆಗುವುದಿಲ್ಲ, ಸ್ವಲ್ಪ ತದವಾಗಿಯೇ ಆಗುತ್ತದೆ ಎಂದರು.

ಅದಿತಿ ಪ್ರಭುದೇವ ಅವರಿಗೆ ಪಾತ್ರದ ಬಗ್ಗೆ ಪ್ರಶ್ನೆ ಮಾಡಿದಾಗ ಪಾತ್ರ ಚೆನ್ನಾಗಿ ಇದ್ದರೆ, ನನಗೆ ದುಡ್ಡು ಕಡಿಮೆ ಬಂದರೂ ಪರವಾಗಿಲ್ಲ, ಹಾಗೆ ಚಿತ್ರಕತೆಯಲ್ಲಿ ನಟ, ಚಿತ್ರತಂಡದಲ್ಲಿ ಎಲ್ಲಾ ಹೊಸಬರೆ ಇದ್ದರೂ ಪರವಾಗಿಲ್ಲ, ನಾನು ಅವರ ಜೊತೆ ನಟಿಸುತ್ತೇನೆ. ಆದರೆ ಕೆಲವೊಂದಿಷ್ಟು ಸಿನಿಮಾಗಳನ್ನು ನಾನು ದುಡ್ಡಿಗೆ ಮಾಡಲೇಬೇಕು. ಹಾಗೆ ದುಡ್ಡಿಗೆ ನಾನು ಕೆಲ ಸಿನಿಮಾದಲ್ಲಿ ನಟನೆ ಮಾಡುತ್ತೇನೆ. ಯಾಕೆಂದರೆ ಯಾರೂ ಕೂಡ ನಾನು ಕಷ್ಟದಲ್ಲಿ ಇದ್ದಾಗ, ದುಡಿಯದೆ ಇದ್ದಾಗ 50 ಸಾವಿರ ತೆಗೆದುಕೊಂಡು ನಿಮ್ಮ ಕುಟುಂಬ ಕಷ್ಟದಲ್ಲಿದೆ ತೆಗೆದುಕೊಳ್ಳಿ ಎನ್ನುವುದಿಲ್ಲ. ಆಸ್ಪತ್ರೆಗೆ ಹೋಗೋದು ಬಂದರೆ ದುಡ್ಡು ತೆಗೆದುಕೊಂಡು ಸಮಸ್ಯೆ ಪರಿಹಾರವ ಮಾಡಿಕೊಳ್ಳಿ ಎಂದು ಯಾರೂ ಬರುವುದಿಲ್ಲ.

ಹಾಗಾಗಿ ನಾನು ಕೆಲವು ಚಿತ್ರಗಳನ್ನು ದುಡ್ಡಿಗೆ ಮಾಡುತ್ತೇನೆ ಎಂದಿದ್ದಾರೆ. ಎಲ್ಲರಿಗೂ ಒಂದು ಸಮಯ ಅಂತ ಇರುತ್ತದೆ, ಆ ಸಮಯದಲ್ಲಿ ಒಂದು ಹಂತದವರೆಗೂ ನಾವು ಚೆನ್ನಾಗಿ ದುಡಿಯಲೇಬೇಕು. ನಮಗೆ ವಯಸ್ಸು ಆದ ಮೇಲೆ ಯಾರೂ ಕೂಡ ದುಡ್ಡು ಕೊಡುವುದಿಲ್ಲ ಎನ್ನುವ ಅರ್ಥದಲ್ಲಿ ನಟಿ ಅದಿತಿ ಪ್ರಭುದೇವ್ ಅವರ ಮಾತನಾಡಿದ್ದಾರೆ. ಹಾಗೆ ಅವರ ಭಾವಿಪತಿ ಆಗುವವರ ಬಗ್ಗೆ ಮಾತನಾಡಿದ್ದು ಅದಿತಿ ಪ್ರಭುದೇವ್ ಅವರ ಸ್ಟೇಟ್ ಫಾರ್ವರ್ಡ್ ಟಾಕಿಂಗ್ ಶೈಲಿಗೆ ನೆಟ್ಟಿಗರು ಫಿದಾ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...