ನಿಮ್ಮ ಮನೆಯಲ್ಲಿ ಈಗಾಗಲೇ 15-20 ವರ್ಷದ ಹಳೆ ಕಾರುಗಳಿದ್ಯಾ..? ಅವನ್ನೆಲ್ಲಾ ಗುಜರಿಗೆ ಹಾಕಿ ಹೊಸ ಕಾರು ಖರೀದಿಸುವ ಯೋಚನೆಯಲ್ಲಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ..

Updated: Monday, March 8, 2021, 12:48 [IST]

ಹಳೆಯ ವಾಹನಗಳು ಗಂಭೀರ ಪ್ರಮಾಣದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಾಣಿಜ್ಯ ಉದ್ದೇಶದ ವಾಹನಗಳಿಗೆ ಗರಿಷ್ಠ 15 ವರ್ಷಗಳ ವಯೋಮಿತಿ ನಿಗದಿ ಮಾಡಿದೆ. ಈ ಮೂಲಕ ಸ್ಕ್ರ್ಯಾಪಿಂಗ್ ನೀತಿ ಜಾರಿಯಾಗಿದೆ. 

  


ಈ ಬಗ್ಗೆ ಮಾತನಾಡಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನೀತಿನ್ ಗಡ್ಕರಿ,  ಸ್ಕ್ರ್ಯಾಪಿಂಗ್ ನೀತಿ ಜಾರಿಯಾಗಿದ್ದು, ಹಳೆ ಕಾರುಗಳನ್ನು ಗುಜರಿಗೆ ಹಾಕಿ, ಹೊಸ ವಾಹನ ಕೊಳ್ಳುವವರಿಗೆ ವಾಹನ ಉತ್ಪಾದಕ ಕಂಪನಿಗಳು ಶೇ.5 ರಷ್ಟು ರಿಯಾಯಿತಿ ನೀಡಲಿದೆ ಎಂದು ತಿಳಿಸಿದ್ದಾರೆ. ಮೊದಲು ಸರ್ಕಾರಿ ವಾಹನಗಳಿಗೆ ನೀತಿ ಜಾರಿಗೆ ಬರಲಿದ್ದು, ನಂತರದ ದಿನಗಳಲ್ಲಿ ಜನಸಾಮಾನ್ಯರಿಗೆ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.


ಸರ್ಕಾರದ ಹೊಸ ನೀತಿಯ ಅನ್ವಯ 2005ಕ್ಕೂ ಮೊದಲು ನೋಂದಣಿಯಾಗಿ ರಸ್ತೆಗೆ ಇಳಿದಿರುವ ಎಲ್ಲಾ ವಾಹನಗಳು ರಸ್ತೆಯಿಂದ ಹೊರಗೆ ಹೋಗುವುದು ಅನಿವಾರ್ಯ. ಅಂದರೆ ಅಂದಾಜು 7 ಲಕ್ಷದಷ್ಟು ಬಸ್, ಲಾರಿ, ಟ್ಯಾಕ್ಸಿ ಸೇರಿದಂತೆ ವಿವಿಧ ವಾಣಿಜ್ಯ ಉದ್ದೇಶದ ವಾಹನಗಳ ನೋಂದಣಿ ರದ್ದಾಗಲಿದೆ. ಇದೇ ವೇಳೆ ಹಳೆಯ ವಾಹನವನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿ ಮಾಡಲು ಬಯಸುವವರಿಗೆ, ಹೊಸ ವಾಹನದ ಖರೀದಿ ವೇಳೆ ಶೇ.5ರಷ್ಟುರಿಯಾಯಿತಿ ನೀಡಲೂ ಸರ್ಕಾರ ನಿರ್ಧರಿಸಿದೆ.  

ಒಂದು ವೇಳೆ ಸ್ಕ್ರ್ಯಾರ್ಪಿಂಗ್ ನೀತಿ ಅಡಿ ಗುಜರಿಗೆ ಹಾಕಲು ಒಪ್ಪದಿರುವ ವಾಹನ ಮಾಲೀಕರು ಅನಧಿಕೃತವಾಗಿ ಬಳಕೆ ಮಾಡಿದ್ದಲ್ಲಿ ಸೀಜ್ ಮಾಡಲಿದ್ದು, ಸೀಜ್ ಮಾಡಿದ ನಂತರ ಹೊಸ ವಾಹನ ಖರೀದಿಗೆ ನೀಡಲಾಗುವ ಜಿಎಸ್ಟಿ ವಿನಾಯ್ತಿಗಳನ್ನು ಕಡಿತಗೊಳಿಸಲಾಗುತ್ತದೆ.
ಪರಿಸರದ ಮೇಲೆ ಪರಿಣಾಮ ಬೀರುವ ಹಳೆಯ ವಾಹನಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ. ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಮತ್ತೆ ವಾಹನ ವಲಯ ಸುಧಾರಿಸಬಹುದು ಎನ್ನಲಾಗುತ್ತಿದೆ. ಹೊಸ ನೀತಿಯಿಂದ ಶೇ. 65ರಷ್ಟು ಮಾಲಿನ್ಯ ಪ್ರಮಾಣವು ತಗ್ಗಿಸಬಹುದು ಎನ್ನಲಾಗಿದ್ದು, ಇದಕ್ಕಾಗಿ ಬೇಕಾಗಿರುವ ಅಗತ್ಯ ನಿಯಮಗಳನ್ನು ಸಿದ್ದಪಡಿಸಿರುವ ಕೇಂದ್ರ ಸರ್ಕಾರ ಸಿಎಂವಿಆರ್(ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್)ಗೆ ತಿದ್ದುಪಡಿ ತರಲಾಗಿದೆ.