ಓಂ ಪ್ರಕಾಶ್ ರಾವ್ ನಡೆದುಕೊಂಡ ರೀತಿಗೆ ಆ ಡೈರೆಕ್ಟರ್ ಹೊಡೆಯೋಕೆ ಹೋಗಿದ್ದರಂತೆ..! ಯಾವ ಕಾರಣಕ್ಕೆ ಗೊತ್ತಾ ?

By Infoflick Correspondent

Updated:Monday, August 22, 2022, 21:13[IST]

ಓಂ ಪ್ರಕಾಶ್ ರಾವ್ ನಡೆದುಕೊಂಡ ರೀತಿಗೆ ಆ ಡೈರೆಕ್ಟರ್ ಹೊಡೆಯೋಕೆ ಹೋಗಿದ್ದರಂತೆ..! ಯಾವ ಕಾರಣಕ್ಕೆ ಗೊತ್ತಾ ?

ಡಾ. ಶಿವಣ್ಣ ಅವರ ಅಭಿನಯದ ಏಕೆ 47 ಸಿನಿಮಾ ಇಂದಿಗೂ ಕೂಡ ಯಾರು ಮರೆಯುವಂತಿಲ್ಲ. ಅಂತಹ ಸಿನಿಮಾಗೆ ನಿರ್ದೇಶನ ಮಾಡಿ ಗೆದ್ದು ಬಿಗಿದ್ದ ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಕೆಲವಂದಿಷ್ಟು ನಿಜ ಜೀವನದ ವಿಚಾರಗಳು ಇತ್ತೀಚಿಗೆ ಚರ್ಚೆ ಆಗುತ್ತಿವೆ. ಹೌದು ಇಗಾಗ್ಲೇ ಸಾಕಷ್ಟು ನಟಿಯರನ್ನು ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಹಾಗೆ ನಟಿಸುವುದಕ್ಕೆ ಅವಕಾಶ ಎಂದು ಹೇಳಿ ಅವರನ್ನು ಬಳಸಿಕೊಂಡಿದ್ದಾರೆ ಎನ್ನುವ ಮಾತುಗಳು ಈ ಮುಂಚೆಯೇ ಆರಂಭದಿಂದಲೂ ಕೇಳಿ ಬಂದಿದ್ದಾವೆ. ಟಿವಿ9 ಅಲ್ಲಿ ನಡೆಸಿದ ಸ್ಟಿಂಗ್ ಆಪರೇಷನ್ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿತ್ತು. ಓಂ ಪ್ರಕಾಶ್ ರಾವ್ ಅವರು ಕೆಟ್ಟವರು ಎನ್ನುವಂತೆ ಬಿಂಬಿತವಾದರು. ಹೆಣ್ಣು ಬಾಕ ಹಾಗೆ ಹೀಗೆ ಎಂದು ಹೆಚ್ಚು ಮಾತು ಕೇಳಿ ಬಂದವು.  

ಈ ಸಿನಿಮಾರಂಗದಲ್ಲಿ ಅವರದ್ದೇ ಆದ ಅದೆಷ್ಟೋ ನಟರನ್ನು ಅವರ ನಿರ್ದೇಶನದ ಸಿನಿಮಾ ಮೂಲಕವೇ ಇಡೀ ಕನ್ನಡ ಸಿನಿಮಾ ರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಅವರನ್ನು ಇಂದು ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಸುವಲ್ಲಿ ಶ್ರಮಪಟ್ಟವರು ಎಂದು ಹೇಳಬಹುದು. ಆದ್ರೆ ಈ ನಟಿಯರ ವಿಷಯದಲ್ಲಿ ನಟ ಓಂ ಪ್ರಕಾಶ್ ರಾವ್ ಅವರ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿಯೇ ಉಳಿದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ, ಅದೆಷ್ಟರ ಮಟ್ಟಿಗೆ ಸುಳ್ಳು ಎಂಬುದು ಯಾವುದು ಸಹ ಬಹಿರಂಗವಾಗಿಲ್ಲ. ಆದರೆ ಇತ್ತೀಚಿಗೆ ಓಂ ಪ್ರಕಾಶ್ ರಾವ್ ಅವರು ನಾನು ಕಾಸು ಕೊಟ್ಟು ಇನ್ನೊಬ್ಬ ಹೆಣ್ಣಿನ ಜೊತೆ ಮಲಗಿದ್ದೇನೆ, ನಾನು ಗಂಡಸು, ನನಗೂ ಸಹ ಆಸೆ ಇರುತ್ತದೆ ಆದರೆ ಎಂದಿಗೂ ಕೂಡ ನಟಿಯರನ್ನು ಬಳಸಿ ಸಿನಿಮಾ ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ಅವರಿಗೆ ಮೋಸ ಮಾಡಿಲ್ಲ.

ಅಂತಹವರು ಒಬ್ಬರು ಬಂದು ನೀವು ಹೀಗೆ ಮಾಡಿದ್ದೀರಿ ಎಂದು ಸಾಬೀತು ಪಡಿಸಿದರೆ, ನಾನು ನನ್ನ ಚಪ್ಪಲಿಯಲ್ಲಿ ಹೊಡೆದುಕೊಂಡು ಸುಮ್ಮನೆ ಹೋಗಿಬಿಡ್ತ್ತೇನೆ ಎಂದಿದ್ದಾರೆ. ಹೌದು ಓಂ ಪ್ರಕಾಶ್ ರಾವ್ ಅವರಿಗೆ ಆರಂಭದ ಸಿನಿ ಜರ್ನಿಯಲ್ಲಿ ಕೆಲಸ ಮಾಡುವಾಗ ನಡೆದ ತಪ್ಪಿಂದಾಗಿ ಖ್ಯಾತ ನಿರ್ದೇಶಕರೊಬ್ಬರು ಓಂ ಪ್ರಕಾಶ್ ಅವರನ್ನು ಹೊಡೆಯಲು ಸಹ ಮುಂದಾಗಿದ್ದರಂತೆ. ಅದನ್ನು ಈಗ ಓಂ ಪ್ರಕಾಶ್ ರಾವ್ ಅವರೇ ಹೇಳಿದ್ದು, ಶಂಕರ್ ಗುರು ಸಿನಿಮಾದ ನಿರ್ದೇಶಕರು ಸೋಮಶೇಖರ್, ಇನ್ನೊಬ್ಬ ನಿರ್ದೇಶಕ ವಿಜಯರೆಡ್ಡಿ ಮತ್ತು ಕೆ ಎಸ್ ಆರ್ ದಾಸ್ ಈ ಮೂರು ಜನ ನಿರ್ದೇಶಕರು ನಟ ಓಂ ಪ್ರಕಾಶ್ ರಾವ್ ಅವರ ಗುರುಗಳಂತೆ. ಸೋಮಶೇಖರ್ ಅವರು ಒಮ್ಮೆ ಓಂ ಪ್ರಕಾಶ್ ರಾವ್ ಸಿನಿಮಾ ವಿಚಾರದಲ್ಲಿ ತಪ್ಪು ಮಾಡಿದಾಗ ಬೈದು ಹೊಡೆಯಲು ಹೋಗಿದ್ದರಂತೆ.

ಮುಂದೊಂದು ದಿನ ಅವರ ಬಾಯಿಯಲ್ಲಿಯೇ ಇವನು ನನ್ನ ಶಿಷ್ಯ, ನನ್ನ ಹೆಸರನ್ನು ಉಳಿಸುತ್ತಾನೆ ಎಂದಿದ್ದು ಓಂ ಪ್ರಕಾಶ್ ರಾವ್ ಅವರಿಗೆ ಎಲ್ಲಿಲ್ಲದ ಸಂತಸ ಆಗಿತ್ತು ಎನ್ನಲಾಗಿದೆ. ಹಾಗೆ ಆ ರೀತಿ ಹುಚ್ಚುತನ ಕೆಲಸ ಮಾಡಿದ್ದೆ ಎಂದರು. ಹೌದು ಈಗ ಇಷ್ಟು ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಓಂ ಪ್ರಕಾಶ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...( VIDEO CREDIT :TV5 KANNADA  )