ಓಂ ಪ್ರಕಾಶ್ ರಾವ್ ಪುತ್ರಿ ಯಾಕೆ ನಟಿಯಾಗಿ ಯಶಸ್ಸು ಕಾಣಲಿಲ್ಲ ಗೊತ್ತಾ..? ತಂದೆ ಮೂಲಕ ಬಯಲು

By Infoflick Correspondent

Updated:Friday, August 26, 2022, 17:05[IST]

ಓಂ ಪ್ರಕಾಶ್ ರಾವ್ ಪುತ್ರಿ ಯಾಕೆ ನಟಿಯಾಗಿ ಯಶಸ್ಸು ಕಾಣಲಿಲ್ಲ ಗೊತ್ತಾ..? ತಂದೆ ಮೂಲಕ ಬಯಲು

ನಿರ್ದೇಶಕ ಆಗಿ ಮತ್ತು ನಿರ್ಮಾಪಕ ಆಗಿಯೂ ಕೂಡ ಗಮನ ಸೆಳೆದ ಕನ್ನಡದ ಖ್ಯಾತ ನಟ ಓಂ ಪ್ರಕಾಶ್ ರಾವ್ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೌದು ಇವರ ತಂದೆ ಖ್ಯಾತ ನಟ ಎನ್ ಎಸ್ ರಾವ್. ಹೌದು ಇವರು ಅದೆಷ್ಟೋ ಸಿನಿಮಾಗಳಲ್ಲಿ ಅಭಿನಯ ಮಾಡಿ ಕನ್ನಡಿಗರ ಮನರಂಜಿಸಿದ್ದಾರೆ. ಕಾಮಿಡಿ ಪಾತ್ರಕ್ಕೆ ಹೇಳಿ ಮಾಡಿಸಿದಂತ ಎನ್ ಎಸ್ ರಾವ್ ಅವರಂತೆಯೇ ಮಗ ಓಂ ಪ್ರಕಾಶ್ ರಾವ್ ಅವರು ಕೂಡ ಕೆಲವು ಕಾಮಿಡಿ ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹುಚ್ಚ, ಏಕೆ 47, ಕಲಾಸಿಪಾಳ್ಯ, ಹೀಗೆ ಇನ್ನೂ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ದೊಡ್ಡ ದೊಡ್ಡ ಸ್ಟಾರ್ ನಟರನ್ನಾಗಿ ಕೆಲ ನಾಯಕರ ಸಿನಿ ಜರ್ನಿಗೆ ದಾರಿಯಾದವರು. ಹೌದು ನಟಿ ರೇಖಾದಾಸ್ ನಿಮಗೆ ಗೊತ್ತಿದ್ದಾರೆ ಅಂದುಕೊಂಡಿದ್ದೇನೆ. ಇವರು ಪಶ್ಚಿಮ ಬಂಗಾಳದವರು.  

ಬೆಂಗಳೂರಿಗೆ ಬಂದು ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರೇಖಾ ದಾಸ್ ಅವರು ನಟನೆ ಆರಂಭಿಸಿ ಒಟ್ಟು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಗೆ 400ಕ್ಕೂ ಹೆಚ್ಚು ನಾಟಕಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನ ಪ್ರೀತಿ ಮಾಡಿ ಮದುವೆಯಾದ ಓಂ ಪ್ರಕಾಶ್ ರರಾವ್ ನಂತರದ ದಿನದಲ್ಲಿ ಸಿನಿಮಾದಲ್ಲಿ ಯಶಸ್ಸು ಕಾಣದ ಕಾರಣಕ್ಕೆ ಇವರನ್ನು ಬಿಟ್ಟರು. ಇದೀಗ ರೇಖಾ ದಾಸ್ ಅವರಿಗೆ ಶ್ರಾವ್ಯ ಎನ್ನುವ ಮಗಳಿದ್ದಾಳೆ. ಹಾಗೆ ಅವರು ನಟಿಯಾಗಿ ಕೂಡ ಕಾಣಿಸಿದ್ದಾರೆ. ಪ್ರಕಾಶ್ ರಾವ್ ಅವರು ರೇಖಾ ದಾಸ್ ಅವರನ್ನು ಬಿಟ್ಟ ಮೇಲೆ 2002 ರಲ್ಲಿ ಮತ್ತೊಂದು ಮದುವೆಯಾದರು. ಅವರಿಗೂ ವಿಚ್ಛೇದನವ ನೀಡಿ, 2009ರಲ್ಲಿ ಮೂರನೇ ಮದುವೆಯಾದರು ಎಂದು ಹೇಳಲಾಗುತ್ತಿದೆ.

ಆದರೆ ಇವರ ಮಗಳು ಶ್ರಾವ್ಯ ಮಾತ್ರ ಅವರ ತಾಯಿ ರೇಖಾ ದಾಸ್ ಅವರ ಬಳಿಯೇ ಇದ್ದಾರೆ. ಒಮ್ಮೆ ಸಂದರ್ಶನದಲ್ಲಿ ಯಾಕೆ ನಿಮ್ಮ ಮಗಳು ಶ್ರಾವ್ಯ ಸಿನಿಮಾದಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ ಎಂದು ಓಂ ಪ್ರಕಾಶ್ ರಾವ್ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಅವರು ನಾನು ಸಾಮಾನ್ಯವಾಗಿ ಗ್ಲಾಮರಸ್ ಪಾತ್ರಕ್ಕೆ ಹೆಚ್ಚು ಆದ್ಯತೆ ಕೊಡುವುದಿಲ್ಲ. ಅದು ನನ್ನ ಮಗಳನ್ನು ಹಾಗೆ ಗ್ಲಾಮರಸ್ ಪಾತ್ರಗಳಲ್ಲಿ ನೋಡಲು ಇಷ್ಟವಿಲ್ಲ. ಹಾಗೇನೇ ಆ ರೀತಿ ಪಾತ್ರಕ್ಕೆ ಸಿನಿಮಾದಲ್ಲಿ ನಟನೆ ಮಾಡಿಸಲಿಲ್ಲ. ನನಗೆ ಗ್ಲಾಮರಸ್ ಪಾತ್ರಗಳು ಇಷ್ಟ ಆಗುವುದಿಲ್ಲ ಹಾಗಾಗಿ ಆಕೆ ಎಲ್ಲಿಯೂ ಕೂಡ ಗ್ಲಾಮರಸಾಗಿ ಮುಂದುವರಿಯದೆ ಇದ್ದ ಕಾರಣಕ್ಕಾಗಿ ಆಕೆಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿ ಯಶಸ್ಸು ಸಿಗಲಿಲ್ಲ ಎಂದಿದ್ದಾರೆ. ರೋಜ್ ಹಾಗೂ ಹುಚ್ಚ ಎರಡರಲ್ಲಿ ಅಭಿನಯ ಮಾಡಿ ಹೆಚ್ಚಾಗಿ ಯಶಸ್ವಿ ಆದರೂ ಶ್ರಾವ್ಯ ಕನ್ನಡ ಚಿತ್ರರಂಗದಲ್ಲಿ ಆಕೆ ಇನ್ನೂ ಬೆಳೆದಿಲ್ಲ, ಕೇವಲ ಕಾರಣ ಗ್ಲಾಮರಸ್ ಪಾತ್ರಕ್ಕೆ ಬಣ್ಣ ಹಚ್ಚದೆ ಇರುವುದು ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿಕೊಂಡಿದ್ದಾರೆ. ಹೌದು ಶ್ರಾವ್ಯ ಇದೀಗ ನಾಗಭೂಷಣ ಅವರ ನಿರ್ದೇಶನದ ಪಬ್ಜಿ ಎನ್ನುವ ಸಿನಿಮಾದಲ್ಲಿ ನಟಿಯಾಗಿ ಕಾಣಿಸಲಿದ್ದು ಈ ಮೂಲಕ ಅವರು ಮತ್ತೆ ಯಶಸ್ವಿ ದಾರಿ ಹಿಡಿಯಲಿ ಎಂದು ಶುಭ ಕೋರಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...