ಓಂ ಪ್ರಕಾಶ್ ಮತ್ತು ದರ್ಶನ ದೂರ ಆಗಲು ಈ ನಟಿ ಕಾರಣ !! ಸ್ಫೋಟಕ ಹೇಳಿಕೆ

By Infoflick Correspondent

Updated:Saturday, August 20, 2022, 21:10[IST]

ಓಂ ಪ್ರಕಾಶ್ ಮತ್ತು ದರ್ಶನ ದೂರ ಆಗಲು ಈ ನಟಿ ಕಾರಣ !!  ಸ್ಫೋಟಕ ಹೇಳಿಕೆ

ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್‌ ರಾವ್‌ ಅವರು ಸಿನಿ ಪತ್ರಕರ್ತ ಬಿ ಗಣಪತಿ ಅವರಿಗೆ ಇತ್ತೀಚೆಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿರುವ ಓಂ ಪ್ರಕಾಶ್‌ ಅವರು ಮಾತುಗಳು ಸಿಕ್ಕಾಪಟ್ಟೆ ವೈರಲ್‌ ಆಗಿವೆ. ತಮ್ಮ ವೈವಾಹಿಕ ಜೀವನ, ರೇಖಾದಾಸ್‌, ಮಗಳು ಶ್ರಾವ್ಯ ಕುರಿತು ಕೂಡ ಮಾತನಾಡಿದ್ದಾರೆ. ಇದೇ ವೇಳೆ ನಟ ದರ್ಶನ್‌ ಹಾಗೂ ಅವರ ನಡುವಿನ ಮುನಿಸಿನ ಬಗ್ಗೆಯೂ ಹೇಳಿದ್ದಾರೆ.  


ದರ್ಶನ ಅವರದ್ದು ಮಗುವಿನಂತಹ ಸ್ವಾಭಾವ. ದರ್ಶನ್‌ ಅವರನ್ನು ಕೆಲಸದಲ್ಲಿ ಹೇಗೆ ಬೇಕಾದರೂ ಬಳಸಿಕೊಲ್ಳಬಹುದು. ಬಹಳ ಫ್ಲೆಕ್ಸಿಬಲ್.‌ ಆದರೆ ಅವರ ತಾಕತ್ತನ್ನು ನಿರ್ದೇಶಕರಿಗೆ ಬಳಸಿಕೊಳ್ಳಲು ಬರುತ್ತಿಲ್ಲ. ದರ್ಶನ್‌ ಹಾಗೂ ಓಂಪ್ರಕಾಶ್‌ ಅವರು ಒಟ್ಟಿಗೆ ಸುಮಾರು 6  ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಲಾಸಿಪಾಳ್ಯ, ಅಯ್ಯಾ ಸೇರಿದಂತೆ ಒಟ್ಟು 6 ಸಿನಿಂಆಗಳಲ್ಲಿ ಕೆಲ ಮಾಡಿದ್ದಾರೆ. ಆದರೆ ಇಬ್ಬರ ನಡುವೆ ಬಿರುಕು ಮೂಡಿದ್ದು, ಅದಾಗಲೇ ದಶಕಗಲಿಂದ ದರ್ಶನ್‌ ಹಾಗೂ ಓಂ ಪ್ರಕಾಶ್‌ ಅವರು ಮಾತನಾಡುತ್ತಿಲ್ಲ.  

 

ಓಂ ಪ್ರಕಾಶ್ ಮತ್ತು ದರ್ಶನ ದೂರ ಆಗಲು ಈ ನಟಿ ಕಾರಣ !!  ಸ್ಫೋಟಕ ಹೇಳಿಕೆ

ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಓಂ ಪ್ರಕಾಶ್‌ ಅವರು ತಮ್ಮ ಹಾಗೂ ದರ್ಶನ್‌ ಅವರ ಜೊತೆಗಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಲ್ಲದೇ, ದರ್ಶನ್‌ ಹಾಗೂ ತಮ್ಮ ನಡುವೆ ಜಗಳ ಬರುವುದಕ್ಕೆ ಮಹಾತಾಯಿ ಕಾರಣ ಎಂದಿದ್ದಾರೆ. ಯಾರು ಆ ಮಹಾತಾಯಿ.? ಏನಾಯಿತು ಎಂದು ಕೇಳಿದ್ದಕ್ಕೆ ಹೆಚ್ಚು ಉತ್ತರ ಕೊಡದ ಓಂ ಪ್ರಕಾಶ್‌ ಅವರು, ನಮ್ಮಿಬ್ಬರ ನಡುವೆ ಹುಳಿ ಹಿಂಡಿದ್ದು, ನಿಖಿತಾ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ವಿಚಾರಕ್ಕೆ, ಯಾವಾಗ ಎಂದೆಲ್ಲಾ ಹೇಳಿಲ್ಲ. ಬದಲಿಗೆ ದರ್ಶನ್‌ ಮನಸು ಮಾಡಿದರೆ, ಮತ್ತೆ ನಾವಿಬ್ಬರು ಮಾತನಾಡಬಹುದು ಎಂದು ಮಾತ್ರ ಹೇಳಿದ್ದಾರೆ.