Dr Rajkumar: ಅಂದು ಅಣ್ಣಾವ್ರನ್ನೇ ಮಿನಿ ಹಿಟ್ಲರ್ ಎಂದಿದ್ದ ಅಮಿತಾಬ್ ಬಚ್ಚನ್..! ಓಡಿ ಬಂದು ಕ್ಷಮಿಸಿ ಎಂದಿದ್ದೇಕೆ ಗೊತ್ತಾ..?

By Infoflick Correspondent

Updated:Saturday, April 30, 2022, 12:21[IST]

Dr Rajkumar: ಅಂದು ಅಣ್ಣಾವ್ರನ್ನೇ ಮಿನಿ ಹಿಟ್ಲರ್ ಎಂದಿದ್ದ ಅಮಿತಾಬ್ ಬಚ್ಚನ್..! ಓಡಿ ಬಂದು ಕ್ಷಮಿಸಿ ಎಂದಿದ್ದೇಕೆ ಗೊತ್ತಾ..?

ಕನ್ನಡ ಚಿತ್ರರಂಗ ಇದೀಗ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಖುಷಿಯ ವಿಚಾರ. ಆದರೆ ಇದು ಈಗ ಮೊದಲೇನಲ್ಲ. ಕನ್ನಡ ಚಿತ್ರರಂಗ ಈಗಾಗಲೇ ಸ್ಟಾರ್ ನಟರ ಮೂಲಕ ದೊಡ್ಡದಾಗಿ ಸದ್ದು ಮಾಡಿದೆ. ಮೊನ್ನೆ ನಟ ಕಿಚ್ಚ ಸುದೀಪ್ ಅವರು ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದು ಕೇವಲ ಒಂದು ನಮ್ಮ ರೀತಿಯೇ ಭಾಷೆಯೆಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಈ ಸುದ್ದಿ ಟ್ವಿಟರ್ ಮೂಲಕ ಹೊರಗಡೆ ಬರುತ್ತಿದ್ದಂತೆ, ಇಡೀ ದೇಶದಾದ್ಯಂತ ಸಂಚಲನವನ್ನು ಸೃಷ್ಟಿ ಮಾಡಿತ್ತು. ಆಕಡೆಯಿಂದ ನಟ ಅಜಯ್ ದೇವಗನ್ ನೀಡಿದ ಒಂದು ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಹೌದು ನಟ ಅಜಯ್ ದೇವಗನ್ ಕಿಚ್ಚ ಸುದೀಪ್ ಅವರ ಟ್ವಿಟಿಗೆ ಮರು ಟ್ವೀಟ್ ಮಾಡಿದ್ದು ಹೆಚ್ಚು ಪರ ವಿರೋಧಗಳನ್ನು ಎದುರಿಸಿ ತುಂಬಾನೇ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಬಹುದು.   

ಕಿಚ್ಚ ಸುದೀಪ್ ಅವರು ನೀಡಿದ ಹೇಳಿಕೆ ಎಲ್ಲರೂ ಸಹ ಒಪ್ಪುವಂತಹ ಹೇಳಿಕೆಯಾಗಿದೆ. ಹೌದು ಹೀಗೆ ಕನ್ನಡಿಗರನ್ನು ತಡವಿದ ಹಿಂದಿ ಸಿನಿಮಾ ನಾಯಕರುಗಳು ಅವಮಾನ ಎದುರಿಸುತ್ತಲೇ ಬಂದಿದ್ದಾರೆ. ಇದೇ ರೀತಿ ಈ ಹಿಂದೆ 40 ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ಈಗ ನಾವು ನೆನೆದು ಕೊಳ್ಳಲೇಬೇಕು. ಕನ್ನಡದ ರಾಜರತ್ನ ಡಾಕ್ಟರ್ ರಾಜಕುಮಾರ್ ಅವರಿಗೆ ಅಮಿತಾ ಬಚ್ಚನ್ ಅವರು ಮಿನಿ ಹಿಟ್ಲರ್ ಎಂದು ಪತ್ರಿಕೆ ಮೂಲಕ ಘೋಷಣೆ ಮಾಡಿದ್ದರು ಎನ್ನಲಾಗಿ ಕೇಳಿ ಬಂದಿತ್ತು. ಇದಾದ ಬಳಿಕ ಅಲ್ಲಿಂದ ಸೀದಾ ಬೆಂಗಳೂರಿಗೆ ಬಂದು, ಅಣ್ಣಾವ್ರು ಪ್ರಭಾವ ಅರಿತು ಅವರ ಶಕ್ತಿ ಏನೆಂದು ಬಳಿಕ ತಿಳಿದುಕೊಂಡು ಬೆಂಗಳೂರಿಗೆ ಓಡಿ ಬಂದು ಕ್ಷಮೆಯಾಚಿಸಿದ್ದರು ಎನ್ನಲಾಗಿದೆ.

ಹೌದು ಇದಕ್ಕೆ ಕಾರಣ ರಾಜಣ್ಣ ಅವರು ಅಂದು ಗೋಕಾಕ್ ಚಳುವಳಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದೆ ನಿಂತು ಎಲ್ಲವನ್ನೂ ನೋಡಿಕೊಂಡಿದ್ದರು. ಆ ವೇಳೆ ಬೇರೆ ಸಿನಿಮಾ ಇಂಡಸ್ಟ್ರಿ ಗಳಾದ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಸಿನಿಮಾರಂಗಕ್ಕೂ ದೊಡ್ಡ ಹೊಡೆತ ಈ ಗೋಕಾಕ್ ಚಳುವಳಿಯಿಂದ ಆಗಿತ್ತು ಎನ್ನಲಾಗಿದೆ. ಆ ಕಾರಣಕ್ಕೆ ಇದನ್ನ ಅರಗಿಸಿಕೊಳ್ಳಲಾಗದ ಅಮಿತಾಬಚ್ಚನ್, ಇವರಿಂದ ನನ್ನ ಸಿನಿಮಾಗೆ ತೊಂದರೆಯಾಯಿತು ಎಂದು ಈ ರೀತಿ ರಾಜಣ್ಣ ಅವರಿಗೆ ಮಿನಿ ಹಿಟ್ಲರ್ ಎಂಬ ಹೇಳಿಕೆಯ ನೀಡಿದ್ದರು ಎಂದು ತಿಳಿದುಬಂದಿದೆ. ಹೌದು ಇದಾದ ಬಳಿಕ ರಾಜಕುಮಾರ್ ಅವರ ಶಕ್ತಿ ಏನೆಂಬುದು ಅರಿತು, ಅವರ ಪ್ರಭಾವ ತಿಳಿದು ಭಕ್ತ ಪ್ರಹ್ಲಾದ ಸಿನಿಮಾ ಶೂಟಿಂಗ್ ವೇಳೆ ಅವರ ಬಳಿ ಬಂದು ಕ್ಷಮೆಯಾಚಿಸಿ ತಪ್ಪಾಯಿತು ಎಂದು ಬಚ್ಚನ್ ಎಂದಿದ್ದರಂತೆ. ಈ ಮಾಹಿತಿ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....