Bigg Boss 9 kannada: ಬಿಗ್ ಬಾಸ್ 9 ಯಾವಾಗ ಸುರು ಎನ್ನುವ ಬಗ್ಗೆ : ಬಿಗ್ ಅಪ್ಡೇಟ್ ನೀಡಿದ ಪರಮೇಶ್ವರ ಗುಂಡ್ಕಲ್

By Infoflick Correspondent

Updated:Tuesday, July 12, 2022, 13:31[IST]

Bigg Boss 9 kannada:  ಬಿಗ್ ಬಾಸ್ 9  ಯಾವಾಗ ಸುರು ಎನ್ನುವ ಬಗ್ಗೆ  :  ಬಿಗ್ ಅಪ್ಡೇಟ್ ನೀಡಿದ ಪರಮೇಶ್ವರ ಗುಂಡ್ಕಲ್

ಜನಪ್ರಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸದ್ಯದಲ್ಲೇ ಆರಂಭವಾಗಲಿದೆ ಎಂದು ಈಗಾಗಲೇ ಸುದ್ದಿ ಸಿಕ್ಕಿತ್ತು.ಇದೀಗ ಈ ಸುದ್ದಿ ಕನ್ ಫರ್ಮ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಬಿಗ್ ಬಾಸ್ 9 ಶುರು ಮಾಡುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ. ಸೀಸನ್​ 9 ಶುರುವಾಗುವುದಕ್ಕೂ ಮುನ್ನ ಪರಮೇಶ್ವರ್​ ಗುಂಡ್ಕಲ್​ ಬಿಗ್​ ಅಪಡೇಟ್​ ಅನ್ನ ಕೊಟ್ಟಿದ್ದಾರೆ. ಹೊಸ ಸೀಸನ್​ ಯಾವಾಗ ಆರಂಭ ಆಗಲಿದೆ ಎಂದು ನಿರೀಕ್ಷಿಸುತ್ತಿದ್ದ ಎಲ್ಲ ವೀಕ್ಷಕರಿಗೂ ಈಗೊಂದು ಅಪ್​ಡೇಟ್​ ಸಿಕ್ಕಿದೆ. 'ಕನ್ನಡ ಬಿಗ್​ ಬಾಸ್​ ಸೀಸನ್​ 9' ಕೆಲಸಗಳು ಯಾವ ಹಂತದಲ್ಲಿದೆ ಎಂಬುದಕ್ಕೆ ಕಲರ್ಸ್​ ಕನ್ನಡ ವಾಹಿನಿ ಬಿಸ್ನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​  ಉತ್ತರ ನೀಡಿದ್ದಾರೆ.   

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕಲರ್ಸ್​ ಕನ್ನಡ ವಾಹಿನಿ ಬಿಸ್ನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್, ಬಿಗ್​ ಬಾಸ್​ ಮನೆಯ ಕೆಲಸಗಳು ಯಾವ ಹಂತದಲ್ಲಿದೆ ಅನ್ನೋ ಬಗ್ಗೆ ಫೋಟೋ ಒಂದನ್ನ ಹಂಚಿಕೊಂಡಿದ್ದಾರೆ. ಇನ್ನೂ ಆ ಫೋಟೋಗೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಕ್ಯಾಪ್ಶನ್​ ನೀಡಿದ್ದಾರೆ,. ಇದಕ್ಕೆ ನೆಟ್ಟಿಗರಿಂದ ಭಾರೀ ರೆಸ್ಪಾನ್ಸ್​ ಬರುತ್ತಿದ್ದು, ಬಿಗ್​ಬಾಸ್​ ಸೀಸನ್​ 9 ಬಗೆಗುನ ಕಾತುರತೆಯನ್ನ ಕಮೆಂಟ್​ ಮಾಡಿದ್ದಾರೆ

ಈ ಬಾರಿ ಬಿಗ್‌ ಬಾಸ್‌ ಪ್ರಿಯರಿಗೆ ಸಿಹಿ ವಿಚಾರವಿದೆ. ಎರಡೆರಡು ಬಿಗ್‌ ಬಾಸ್‌ ಕನ್ನಡದಲ್ಲಿ ಬರಲಿವೆ. ಬಿಗ್‌ ಬಾಸ್‌ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದೆ.

ಈ ಬಿಗ್‌ ಬಾಸ್‌ ಮಿನಿ ಸೀಸನ್‌ ಮುಗಿದ ಬಳಿಕ ಬಿಗ್‌ಬಾಸ್ ಸೀಸನ್ 9 ಶುರುವಾಗಲಿದೆ. ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಈ ಬಾರಿ ಬಿಗ್‌ ಬಾಸ್‌ನಲ್ಲಿರಲಿದ್ದಾರೆ. ವೂಟ್ ಸೆಲೆಕ್ಟ್‌ನಲ್ಲಿ 15 ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತೆ. 90 ದಿನಗಳ ಕಾಲ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಪ್ರಸಾರವಾಗಲಿದೆ. ಪ್ರತಿ ಬಾರಿಯಂತೆ ಈ ಸಲವೂ ಕಿಚ್ಚ ಸುದೀಪ್‌ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.