Puneeth Rajkumar : ಜಗ್ಗೇಶ್ ಪತ್ನಿ ಪರಿಮಳಾ ಪುನೀತ್ ರಾಜ್ ಕುಮಾರ್ ಅವರನ್ನುಮೊದಲು ನೋಡಿದ್ದು ಯಾವಾಗ ಗೊತ್ತಾ?

By Infoflick Correspondent

Updated:Saturday, April 30, 2022, 13:48[IST]

Puneeth  Rajkumar : ಜಗ್ಗೇಶ್ ಪತ್ನಿ ಪರಿಮಳಾ ಪುನೀತ್ ರಾಜ್ ಕುಮಾರ್ ಅವರನ್ನುಮೊದಲು ನೋಡಿದ್ದು ಯಾವಾಗ ಗೊತ್ತಾ?

ಡಾ. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಎಷ್ಟು  ಹೇಳಿದರೂ ಕಡಿಮೆಯೇ. ಅಪ್ಪು ಅವರ ನಡೆ-ನಡಿ, ಹಾವಾ-ಭಾವಾ ಯಾವುದರ ಬಗ್ಗೆ ಮಾಡತನಾಡಬೇಕೆಂದರೂ ಪದಗಳಿಲ್ಲ. ಡಾ. ಪುನೀತ್ ರಾಜ್ ಕುಮಾರ್ ಅಂತಹವರು ಜಗತ್ತಿಗೆ ಒಬ್ಬನೇ ಎಂದರೂ ತಪ್ಪಾಗೋದಿಲ್ಲ. ಿದೆಲ್ಲಾ ಯಾಕೆ ಹೇಳುತ್ತಿದ್ದೀನಿ ಅಂತ ನಿಮಗೆ ಹೇಳಬೇಕಾಗೇನು ಇಲ್ಲ. ಯಾಕೆಂದರೆ ಈಗಾಗಲೇ, ಅಪ್ಪು ಅವರ ಬಗ್ಗೆ ಎಲ್ಲರೂ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೀರಾ. ಆದರೂ, ಅಪ್ಪು ಅವರ ಒಂದಲ್ಲ ಒಂದು ವಿಚಾರವನ್ನು ಪ್ರತಿಯೊಬ್ಬರು ತಮ್ಮ ಅನುಭವಗಳನ್ನು ಹೇಳಿಕೊಳ್ಳುವುದನ್ನು ನಿಲ್ಲಿಸಿಲ್ಲ. 

ಪುನೀತ್ ರಾಜ್ ಕುಮಾರ್ ಅವರು ಬಹಳ ಸಿಂಪಲ್ ಮನುಷ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಎಷ್ಟು ಸಿಂಪಲ್ ಎಂದರೆ, ಯಾರಾದರೂ ಅಭಿಮಾನಿ ಎದುರಾದರೆ ಅವರ ಜೊತೆಯೇ ಊಟ ಮಾಡುತ್ತಿದ್ದರು. ಅಭಿಮಾನಿಗಳನ್ನು ದೇವರನ್ನು ಕಂಡಂತೆ ಕಾಣುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ಆರು ತಿಂಗಳ ಮಗುವಾಗಿ ಇದ್ದಾಗಿನಿಂದಲೂ ಕ್ಯಾಮರಾಗಳಿಗೆ ಫೊಸ್ ಕೊಡುತ್ತಲೇ ಬಂದವರು. ಚಿಕ್ಕವರಿದ್ದಾಗ ತಮ್ಮ ಮುಗ್ದತೆಯಿಂದ ಮನೆ ಮಾತಾಗಿದ್ದ ಅಪ್ಪು, ದೊಡ್ಡವರಾದ ಮೇಲೂ ಅದೇ ಮುಗ್ದತೆ, ಅದೇ ನಗುವಿನೊಂದಿಗೆ ಜನ ಮನ ಗೆದ್ದವರು.     

ಇನ್ನು ಡಾ.ರಾಜ್ ಕುಮಾರ್ ಅವರ ಮಗಳು ಲಕ್ಷ್ಮೀ ಅವರ ಮದುವೆ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ವಯಸ್ಸು ಕೇವಲ 6 ವರ್ಷ. ಅದೇ ರಾಘವೇಂದ್ರ ರಾಜ್ ಕುಮಾರ್ ಮದುವೆಯಲ್ಲಿ ಪುನೀತ್ ರಾಜ್ ಹನ್ನೆರಡು-ಹದಿಮೂರು ವರ್ಷದ ಹುಡುಗ. ಆಗಲೇ ಅಂತೆ ಮೊದಲ ಬಾರಿಗೆ ಪುನೀತ್ ರನ್ನು ನವರಸ ನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳಾ ಅವರು ನೋಡಿದ್ದು. ಆಗ ಪರಿಮಳಾ ಅವರಿಗೆ ಕರ್ನಾಟಕದ ರಜನಿಕಾಂತ್ ಅಂತ ಪುನೀತ್ ರಾಜ್ ಕುಮಾರ್ ಅವರನ್ನ ಪರಿಚಯ ಮಾಡಿಸಿಕೊಟ್ಟರಂತೆ. ಇದಾದ ಬಳಿಕ ಪದೇ ಪದೇ ಪುನೀತ್ ಅವರನ್ನು ಭೇಟಿಯಾಗುತ್ತಿದ್ದರಂತೆ. ಅಪ್ಪು ಹೇಗೆ, ಹಾಗೂ ಅವರ ಜೊತೆಗಿನ ನೆನಪುಗಳನ್ನು ಪರಿಮಳಾ ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ. ನೀವೂ ಒಮ್ಮೆ ನೋಡಿ..