ಸ್ಪರ್ಧಿಗಳ ಆಯ್ಕೆ ವಿಚಾರದಲಿ ಕೌತುಕ ವಿಚಾರ ಬಿಚ್ಚಿಟ್ಟ ಪರಮೇಶ್ವರ್ ಗುಂಡ್ಕಲ್..! ಅದೇನ್ ಗೊತ್ತಾ..?

Updated: Sunday, February 21, 2021, 14:14 [IST]

ಹೌದು ಸ್ನೇಹಿತರೆ ಈಗಾಗಲೇ ಬಿಗ್ ಬಾಸ್ ಕೆಲಸಗಳು ಆರಂಭವಾಗಿದ್ದು, ಇದೇ ಫೆಬ್ರವರಿ 28ಕ್ಕೆ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಬಿಗ್ಬಾಸ್ ಪ್ರಾರಂಭವಾಗಲಿದೆ. ಇದರ ನಡುವೆ ಕಲರ್ಸ್ ಕನ್ನಡದ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು, ಫೇಸ್ಬುಕ್ ಮೂಲಕ ಸ್ಪರ್ಧಿಗಳ ಆಯ್ಕೆ ವಿಚಾರವಾಗಿ ಕೆಲವೊಂದಿಷ್ಟು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ, ಅಷ್ಟಕ್ಕೂ ಪರಮೇಶ್ವರ್ ಅವರು ಹೇಳಿದ್ದೇನು ಗೊತ್ತಾ ಮುಂದೆ ಓದಿ...

"ಗೆಲ್ಲಬೇಕು ಅಂದುಕೊಂಡಿರುವ ಕೋಚ್ ಯಾವಾಗಲೂ ತಂಡದ ಬಗ್ಗೆ ಯೋಚನೆ ಮಾಡುತ್ತಾನೆ. ತನಗೆ ಇಷ್ಟ ಅಂತ ಯಾರನ್ನಾದರೂ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಇರುವ ಕೋಚ್‌ಗೆ ಇಲ್ಲ. ಐದು ಜನ ಬ್ಯಾಟ್ಸ್‌ಮನ್‌ಗಳು, ಒಬ್ಬ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌, ಮೂರು ಜನ ವೇಗದ ಬೌಲರುಗಳು. ಇಬ್ಬರು ಸ್ಪಿನ್ನರುಗಳು. ಒಟ್ಟೂ ಹನ್ನೊಂದು ಜನ. ಈ ಕಾಂಬಿನೇಷನ್ ಸನ್ನಿವೇಶಕ್ಕೆ ತಕ್ಕಂತೆ, ಆಡೋ ಜಾಗಕ್ಕೆ ತಕ್ಕಂತೆ, ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ಬದಲಾಗಬಹುದು. ಆಡುವ ಹನ್ನೊಂದರಲ್ಲಿ ಇಲ್ಲದ ಹನ್ನೆರಡನೆಯವನಿಗೆ ತಂಡದಲ್ಲಿ ಇರಲು ನನಗೆ ಹೆಚ್ಚು ಅರ್ಹತೆ ಇತ್ತು ಅಂತ ಅನಿಸುವುದು ಸಹಜ. ಅದು ಜೀವನ..'    

Advertisement

'ಮನೇಲಿ ಕೂತು ಆರಾಮಾಗಿ ಮ್ಯಾಚ್ ನೋಡುವ ನಮಗೆ ಕೋಚ್ ಮಾಡಿದ್ದೆಲ್ಲಾ ತಪ್ಪು ಅನಿಸುವುದೂ ಇದೆ. ಟಾಸ್ ಗೆದ್ದರೆ ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಅನ್ನುವ ತೀರ್ಮಾನ ತೆಗೆದುಕೊಳ್ಳುವ ಅರ್ಹತೆ ಸೋಫಾದಲ್ಲಿ ಕುಳಿತು ನೋಡುವ ನಮಗಿಂತ (ಅಂಥವರಲ್ಲಿ ನನ್ನಂಥ ಎಷ್ಟೋ ಜನ ಹೆಚ್ಚೆಂದರೆ ಟೆನಿಸ್ ಬಾಲಿನಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡಿ ಅನುಭವ ಇದ್ದವರು) ಬಹುಶಃ ಫೀಲ್ಡಿನಲ್ಲಿ ಇಳಿದು ಆಡುವ ಕ್ಯಾಪ್ಟನ್ನಿಗೆ ಅಥವಾ ಅವನನ್ನು ರೂಪಿಸುವ ಕೋಚ್ ಗೆ ಹೆಚ್ಚಿರುತ್ತದೆ..'    

Advertisement

'ಆಯ್ಕೆಯನ್ನು ಕೆಟ್ಟ ಶಬ್ದ ಬಳಸಿ ನಿಂದಿಸುವವರು ಆಟವನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ ಅಂದುಕೊಳ್ಳೋಣ. ಕೆಟ್ಟ ಶಬ್ದ ಬಳಸುವುದು ಅವರ ವ್ಯಕ್ತಿತ್ವ. ಸುತ್ತಲೂ ನಿಂದಕರು ಇರಬೇಕು ಅನ್ನುವುದು ಎಲ್ಲರೂ ರೂಢಿಸಿಕೊಳ್ಳಲೇಬೇಕಾದ ಸಂಸ್ಕಾರ. ಪಂದ್ಯಕ್ಕೆ ಮೊದಲಿನ ತಳಮಳ ಆಡುವವರಿಗೆ ಹೆಚ್ಚೋ ನೋಡುವವರಿಗೆ ಹೆಚ್ಚೋ? ಹಿಂಜರಿಕೆ ಅನ್ನೋದು ಸಂಕೋಚದಿಂದ ಬರುತ್ತಾ, ಆತ್ಮವಿಶ್ವಾಸದ ಕೊರತೆಯಿಂದ ಬರುತ್ತಾ ಅಥವಾ ಆಟ ಎಷ್ಟು ದೊಡ್ಡದು ಎಂಬ ಗೌರವದಿಂದ ಬರುತ್ತಾ? ಗೊತ್ತಿಲ್ಲ. Preparing, with nervousness, few days to go..'ಎಂದು ಚಾನೆಲ್ ಹೆಡ್ ಪರಮೇಶ್ವರ್‌ ಗುಂಡ್ಕಲ್‌ ಅವರು ಈ ರೀತಿ ಬರೆದುಕೊಂಡಿದ್ದಾರೆ.    

Advertisement

ಈ ಫೇಸ್‌ಬುಕ್‌ ಪೋಸ್ಟ್‌ಗೆ ನೆಟ್ಟಿಗರು ಸಹ ಪ್ರತಿಕ್ರಿಯೆ ನೀಡಿದ್ದು, ಕೆಲ ಬಗೆಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಈಗಾಗಲೇ 'ಬ್ರಹ್ಮಗಂಟು' ಖ್ಯಾತಿಯ ಕಿರುತೆರೆಯ ನಟಿ ಗೀತಾ ಭಾರತಿ ಭಟ್‌, ಹಾಗೂ 'ಸಿಲ್ಲಿ ಲಲ್ಲಿ' ರವಿಶಂಕರ್‌, 'ಸರಿಗಮಪ' ಹನುಮಂತಣ್ಣ, ಅತ್ತ 'ಎಕ್ಸ್‌ಕ್ಯೂಸ್‌ ಮೀ' ಸುನೀಲ್‌ ರಾವ್‌ ಹೀಗೆ ಇನ್ನೂ ಕೆಲವು ಸ್ಪರ್ಧೆ ಮಾಡಲಿರುವ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿವೆ. ಅಂತಿಮವಾಗಿ ಇವರಲ್ಲಿ ಯಾರೆಲ್ಲ ಈ ಸಾರಿಯ ಬಿಗ್‌ ಮನೆ ಸೇರಿಕೊಳ್ಳುತ್ತಾರೆ ಎಂಬ ಕೌತುಕಕ್ಕೆ ಇದೆ ಫೆಬ್ರುವರಿ 28ಕ್ಕೆ ತೆರೆ ಬೀಳಲಿದೆ...