ಸದಾ ನಗುತ್ತಲಿರುವ ಪಾರು ಧಾರಾವಾಹಿಯ ಮೋಕ್ಷಿತಾ ಪೈ ನಿಜ ಜೀವನದ ಕಣ್ಣೀರಿನ ಕಥೆ ಗೊತ್ತಾ..?
Updated:Friday, May 6, 2022, 13:41[IST]

ಪಾರು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ. ಇಂದು ಪ್ರೇಕ್ಷಕರ ನೆಚ್ಚಿನ ನಟಿಯಾಗಿರುವ ಮೋಕ್ಷಿತಾ ಪೈ ನಿಜ ಜೀವನದ ಕಥೆ ಕೇಳಿದರೆ ನಿಮಗೆಲ್ಲಾ ದುಃಖವಾಗುವುದು ಗ್ಯಾರೆಂಟಿ. ಆದಿ ಹಾಗೂ ಪಾರು ಜೋಡಿ ಮತ್ತು ವಿನಯಾ ಪ್ರಸಾದ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಾರು ಧಾರಾವಾಹಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿಯ ನಾಯಕಿ ನಟಿಯಾಗಿ ಕಾಣಿಸಿಕೊಂಡಿರುವ ಪಾರು ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಪಾರು ಪಾತ್ರದ ಮೋಕ್ಷಿತಾ ಪೈ ಅವರ ನಿಜ ಜೀವನದ ಕಷ್ಟ ಯಾರಿಗೂ ಬೇಡ.
ಮೂಲತಃ ಮಂಗಳೂರಿನವರಾಗಿರುವ ಮೋಕ್ಷಿತಾ ಪೈ ತಂದೆ-ತಾಯಿ ಹಾಗೂ ಸಹೋದರ ನಾಲ್ವರು ಇದ್ದಾರೆ. ಶೇಷಾದ್ರಿ ಪುರಂ ಕಾಲೇಜಿನಲ್ಲಿ ಓದು ಮುಗಿಸಿದ ಮೋಕ್ಷಿತಾ ಪೈ ಅವರು ಮನೆಯಲ್ಲೇ ಟ್ಯೂಷನ್ ಮಾಡುತ್ತಿದ್ದರು. ಇವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಪಾರು ಧಾರಾವಾಹಿಯಲ್ಲಿ ನಟಿಸುವ ಆಫರ್ ನೀಡಲಾಯ್ತು. ಧಾರಾವಾಹಿ ಜೊತೆಗೆ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರ ರಿಲೀಸ್ ಆಗುವುದೊಂದೇ ಬಾಕಿ ಇದೆ.
ಮೋಕ್ಷಿತಾ ಪೈ ಅವರಿಗೆ ಮಕ್ಕಳು ಎಂದರೆ ತುಂಬಾ ಇಷ್ಟ. ಇನ್ನು ಇವರ ಸಹೋದರ ವಿಕಲಚೇತನರಾಗಿದ್ದು, ಸ್ವಂತ ಮಗುವಿನಂತೆ ಪಾರು ನೋಡಿಕೊಳ್ಳುತ್ತಾರೆ. ಮೋಕ್ಷಿತಾ ಪೈ ಅವರ ತಮ್ಮನಿಗೀಗ ಹದಿನೆಂಟು ವರ್ಷ ವಯಸ್ಸು. ಆದರೂ ಕೂಡ ಇವನಿ ಬುದ್ಧಿ ಎಳೆಯ ಮಗುವಿನದ್ದು. ಒಂದೆರಡು ವರ್ಷ ವಯಸ್ಸಿನ ಮಗುವಿನಂತೆಯೇ ಆಡುವ ಈತನನ್ನು ತುಂಬಾ ಪ್ರಿತಿಯಿಂದ ನೊಡಿಕೊಳ್ಳುತ್ತಾರೆ. ತಮ್ಮನನ್ನು ಮಗನಂತೆ ಅಮ್ಮನಾಗಿ ಕೇರ್ ಮಾಡುತ್ತಾರೆ. ತಮ್ಮನ ಸ್ನಾನ, ತಿಂಡಿಯಿಂದ ಹಿಡಿದು ಎಲ್ಲಾ ಆರೈಕೆಯನ್ನೂ ಮೋಕ್ಷಿತಾ ಪೈ ಅವರು ಮಾಡುತ್ತಾರೆ.