ರಾಜಕುಮಾರ್ ಕುಟುಂಬಕ್ಕೆ ಮತ್ತೊಂದು ಅಘಾತ! ಇನ್ನೊಂದು ನಿಧನ ವಾರ್ತೆ

By Infoflick Correspondent

Updated:Saturday, May 14, 2022, 18:28[IST]

ರಾಜಕುಮಾರ್ ಕುಟುಂಬಕ್ಕೆ ಮತ್ತೊಂದು ಅಘಾತ! ಇನ್ನೊಂದು ನಿಧನ ವಾರ್ತೆ

ಇತ್ತಿಚಿಗಷ್ಟೇ ಪುನೀತ್‌ ರಾಜ್‌ಕುಮಾರ್‌ ಅವ್ರನ್ನ ಕಳೆದುಕೊಂಡು  ನಂತರ ಅಶ್ವಿನಿ ರಾಜಕುಮಾರ್ ಅವರ ತಂದೆಯನ್ನು ಕಳೆದುಕೊಂಡು ದುಃಖದಿಂದ ಇರುವ ದೊಡ್ಮನೆ ಕುಟುಂಬ ಮತ್ತೊಂದು ಆಘಾತಕಾರಿ ನೋವನ್ನು ತಡೆದುಕೊಳ್ಳಬೇಕಾಗಿದೆ‌.  ರಾಜ್ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. 

ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರಿಯಾದ ಎಸ್‌.ಎ.ನಾಗಮ್ಮ ಇಂದು (ಮೇ 14) ವಿಧಿವಶರಾಗಿದ್ದಾರೆ. ಶಿವಣ್ಣ ಹಾಗು ರಾಘವೇಂದ್ರ ರಾಜಕುಮಾರ್ ತಾಯಿ ಸಮಾನರಾದ ಚಿಕ್ಕಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ನಾಗಮ್ಮ ಅವರ ಸಹೋದರರಾದ ಎಸ್.ಎ.ಚೆನ್ನಗೌಡ, ಎಸ್.ಎ.ಗೋವಿಂದರಾಜ್, ಶ್ರೀನಿವಾಸ್ ಅವರು ಚಲನಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.     

81 ವರ್ಷ ವಯಸ್ಸಿನ ನಾಗಮ್ಮ, ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.‌ ಇಂದು ಬೆಳಗ್ಗೆ ನಗರದ ಬಸವೇಶ್ವರ ನಗರದಲ್ಲಿ ತಮ್ಮ ಮಗನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದು, ನಾಳೆ ಚಾಮರಾಜನಗರದ ಯಳಂದೂರು ತಾಲ್ಲೂಕ್ಕಿನ ಕೆಸ್ತೂರಿನಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಲಿದೆ. ಇಂದು ಸಂಜೆ ನೆರವೇರಲಿರುವ ಅಂತ್ಯಕ್ರಿಯೆಯಲ್ಲಿ ಡಾ.ರಾಜ್‍ಕುಟುಂಬದ ಸದಸ್ಯರು, ವಿವಿಧ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.