ಮತ್ತೊಂದು ದೊಡ್ಡ ಆಘಾತ ಪವಿತ್ರಾ ಲೋಕೇಶ್ ಗೆ :ಎಲ್ಲರೂ ಶಾಕ್ ಏನದು ನೋಡಿ ?

By Infoflick Correspondent

Updated:Tuesday, August 23, 2022, 10:29[IST]

ಮತ್ತೊಂದು ದೊಡ್ಡ ಆಘಾತ ಪವಿತ್ರಾ ಲೋಕೇಶ್ ಗೆ :ಎಲ್ಲರೂ ಶಾಕ್ ಏನದು ನೋಡಿ ?

ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರು ಕೆಲವು ತಿಂಗಳಗಳಿಂದ ಹಾಟ್ ಟಾಪಿಕ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ ಇವರಿಬ್ಬರು ಅಫೇರ್ ಇಟ್ಟುಕೊಂಡಿದ್ದಾರೆ ಎನ್ನಲಾಗಿ ಕೆಲವು ಮಾಧ್ಯಮಗಳಲ್ಲೂ ಪ್ರಸಾರವಾಯಿತು. ಅದು ಎಷ್ಟು ಸತ್ಯವೋ ಸುಳ್ಳೋ ನಮಗೂ ಗೊತ್ತಿಲ್ಲ. ಆದರೆ ಆರಂಭದಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಮದುವೆ ಆಗುತ್ತಿದ್ದಾರೆ ಎನ್ನಲಾಗಿ ಕೇಳಿ ಬಂದಿತ್ತು. ನರೇಶ ಅವರಿಗೆ ಇದು ನಾಲ್ಕನೇ ಮದುವೆ, ಪವಿತ್ರ ಲೋಕೇಶ್ ಅವರಿಗೆ ಎರಡನೇ ಮದುವೆಯೆಂದು ತಿಳಿದು ಬಂದಿತ್ತು. ಆನಂತರ ಪವಿತ್ರ ಲೋಕೇಶ್ ಹಾಗೂ ನರೇಶ್ ವಿರುದ್ಧ ನರೇಶ್ ಅವರ 3ನೇ ಪತ್ನಿ ರಮ್ಯಾ ರಘುಪತಿ ಅವರು ಆರೋಪ ಮಾಡಿದ್ದು ಮೈಸೂರಿನ ಹೋಟೆಲ್ ಒಂದರಲ್ಲಿ ಇವರಿಬ್ಬರನ್ನು ಹಿಡಿದು ರಂಪಾಟ ಮಾಡಿದ್ದು ನೀವೂ ನೋಡಿದ್ದೀರಿ. ಹಾಗೆ ಕೋರ್ಟ್ ಮೆಟ್ಟಿಲು ಏರಿ ನಾನು ಇದಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದರು.   

ಇದೆಲ್ಲದರ ನಡುವೆ ಪವಿತ್ರ ಲೋಕೇಶ್ ನರೇಶ್ ಇಬ್ಬರು ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿ ಮಾಧ್ಯಮದವರು ತುಂಬಾ ಸಲೀಸಾಗಿ ಹೇಳಲು ಮುಂದಾದರು. ಹೌದು ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ನಟ ನರೇಶ್ ಜೊತೆ ಸಂಬಂಧ ಹೊಂದಿದ್ದು, ಆತನ ಜೊತೆ ಹೆಚ್ಚು ನಂಟನ್ನು ಇಟ್ಟುಕೊಂಡಿದ್ದೆ ತಪ್ಪಾಯ್ತು ಪವಿತ್ರ ಲೋಕೇಶ್ ಅವರಿಗೆ ಎನ್ನಲಾಗಿದೆ. ಮುಂಚೆಯೇ ಇದು ಮುಳುವಾಗಬಹುದು ಎಂಬುದಾಗಿ ಆರಂಭದಲ್ಲೆ ಮಾತುಗಳು ಕೇಳಿಬಂದಿದ್ದವು. ಅದರಂತೆ ಇದೀಗ ತೆಲುಗು ಚಿತ್ರರಂಗದಲ್ಲಿ ಟಾಪ್ ನಟರ ತಾಯಿ ಪಾತ್ರದಲ್ಲಿ ಗಮನ ಸೆಳೆದು ಗುರುತಿಸಿಕೊಂಡಿದ್ದ ಪವಿತ್ರ ಲೋಕೇಶ್ ಅವರು ಮುಂಬರುವ ಒಬ್ಬ ಸ್ಟಾರ್ ನಟನ ಸಿನಿಮಾದಿಂದ ಹೊರ ಬಿದ್ದಿದ್ದಾರಂತೆ. ಖುದ್ದಾಗಿ ಆ ನಟನೆ ನಿರ್ದೇಶಕ ಮತ್ತು ನಿರ್ಮಾಪಕರ ಬಳಿ ಇವರನ್ನು ತೆಗೆದುಹಾಕಿ, ಈ ರೀತಿಯ ಆರ್ಟಿಸ್ಟ್ ನಮಗೆ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದೆಲ್ಲದಕ್ಕೂ ಕಾರಣ ಪವಿತ್ರಾ} ಲೋಕೇಶ್ ನರೇಶರೊಟ್ಟಿಗೆ ಕೇಳಿ ಬಂದ ಕೆಲ ವಿಚಾರಗಳು ಎಂದು ಹೇಳಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹೌದು ಪವಿತ್ರಾ ಲೋಕೇಶ್ ಅವರ ಮುಂದಿನ ಸಿನಿಮಾ ಭವಿಷ್ಯ ತುಂಬಾನೆ ಕಷ್ಟಕರವಾಗಿರಲಿದೆ ಎಂದು ತಿಳಿದುಬಂದಿದೆ. ಇದೆಲ್ಲಾ ಆ ನರೇಶ್ ಜೊತೆಗಿನ ಪವಿತ್ರಾ ಲೋಕೇಶ್ ಸಂಬಂದದಿಂದಲೇ ಎಂದು ನಿಮಗೂ ಎನ್ನಿಸಿದರೆ ನಿಮ್ಮ ಅಭಿಪ್ರಾಯ ಏನು ಎಂದು ಕಾಮೆಂಟ್ ಮಾಡಿ ಧನ್ಯವಾದಗಳು...