Pavithra Lokesh : ನರೇಶ್ ಹಾಗು ಪವಿತ್ರಾ ಲೋಕೇಶ್ ಸಂಬಂಧದ ಕುರಿತು ಇಲ್ಲಿದೆ ರಿಯಲ್ ಕಹಾನಿ

By Infoflick Correspondent

Updated:Thursday, July 7, 2022, 12:54[IST]

Pavithra Lokesh :  ನರೇಶ್ ಹಾಗು ಪವಿತ್ರಾ ಲೋಕೇಶ್ ಸಂಬಂಧದ ಕುರಿತು ಇಲ್ಲಿದೆ ರಿಯಲ್ ಕಹಾನಿ

ಕಳೆದ  ವಾರಗಳಿಂದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅಫೇರ್ ಹಾಟ್ ಟಾಪಿಕ್ ಆಗಿದೆ. ಆರಂಭದಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಬಳಿಕ ಮದುವೆ ಆಗೇ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈಗ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.ತಮ್ಮಿಬ್ಬರ ಸಂಬಂಧ ಹೇಗೆ? ಇಬ್ಬರ ಪರಿಚಯ ಹೇಗೆ ಆತ್ಮಿಯತೆಗೆ ತಿರುಗಿತು ?  ಸಂಬಂಧಕ್ಕೆ ಕಾರಣವೇನು ? ಇದೆಲ್ಲದಕ್ಕೂ ಪವಿತ್ರಾ ಹಾಗು ನರೇಶ್ ಅವರೇ ಉತ್ತರಿಸಿದ್ದಾರೆ . ಇಲ್ಲಿದೆ ಹಲವು ಕುತೂಹಲಕಾರಿ ಆಶ್ಚರ್ಯಕರ ಮಾಹಿತಿ   

ನಾನು, ಮೊದಲಿಗೆ ಪವಿತ್ರಾ ಲೋಕೇಶ್ ಅನ್ನು 'ಹ್ಯಾಪಿ ವೆಡ್ಡಿಂಗ್' (2016) ಸಿನಿಮಾ ಸಂದರ್ಭದಲ್ಲಿ ಭೇಟಿಯಾದೆ. ಆಗ ನಾವು ಕೇವಲ ಗೆಳೆಯರಾಗಿದ್ದೆವು, ನಾವು ಕೇವಲ ಎರಡು ಮೂರು ಬಾರಿಯಷ್ಟೆ ಮಾತನಾಡಿದೆವು. ನಂತರ 'ಸಮ್ಮೋಹನಂ' (2018) ಸಿನಿಮಾದ ವೇಳೆ ನಾವು ಹತ್ತಿರವಾದೆವು, ನಾನು, ನನ್ನ ಸಮಸ್ಯೆ ಹೇಳಿಕೊಂಡೆ ಆಕೆ ಆಕೆಯ ಕಷ್ಟಗಳನ್ನು ಹೇಳಿಕೊಂಡರು. ನಾವು ಪರಸ್ಪರ ಕನೆಕ್ಟ್ ಆದೆವು, ನಾವು ಒಳ್ಳೆಯ ಸ್ನೇಹಿತರಾದೆವು''  ಪವಿತ್ರಾ ಲೋಕೇಶ್ ನನ್ನ ಆಪ್ತ ಸ್ನೇಹಿತೆ, ಫ್ರೆಂಡ್, ಫಿಲಾಸಫರ್, ಗೈಡ್, ಆಕೆ ನನ್ನ ಸಂಗಾತಿ ಎಂದಿದ್ದಾರೆ ನರೇಶ್.

‘’ಇದು ತುಂಬಾ ಪರ್ಸನಲ್ ವಿಷಯ. ನನ್ನೆಲ್ಲಾ ನೋವು-ಸುಖದಲ್ಲಿ ನರೇಶ್ ಭಾಗಿಯಾಗಿದ್ದಾರೆ. ಹೀಗಾಗಿ, ಈಗ ಅವರ ಸಂಕಷ್ಟದ ಸಮಯದಲ್ಲಿ ನಾನು ಅವರ ಜೊತೆಗೆ ಇರುತ್ತೇನೆ. ನಾಳೆ ಏನಾಗುತ್ತೆ ಅಂತ ಈಗಲೇ ನಾನು ಹೇಳೋಕೆ ಆಗಲ್ಲ. ಅಫ್ ಕೋರ್ಸ್ ನಾವು ಜೊತೆಗಿರ್ತೀವಿ. ನಾವು ಅಟ್ಯಾಚ್ ಆಗಿದ್ದೀವಿ. ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆನೇ ಇದೆ ಅಂದುಕೊಳ್ಳಿ. ಅದರಲ್ಲಿ ತಪ್ಪೇನು?’’ ಎಂದಿದ್ದಾರೆ ನಟಿ ಪವಿತ್ರಾ ಲೋಕೇಶ್.