Pavithra Lokesh : ತಮ್ಮ ಮದುವೆ ವಿಚಾರವಾಗಿ ಸುಳ್ಳು ಸುದ್ದಿ ಹರಡಿರುವ ಬಗ್ಗೆ ಬಾಯಿಬಿಟ್ಟ ಪವಿತ್ರಾ ಲೋಕೇಶ್..! ಸುಚೇಂದ್ರ ಅವರಿಗೆ ಮೋಸ ಆಗಿಲ್ವಂತೆ..!

By Infoflick Correspondent

Updated:Wednesday, June 29, 2022, 18:52[IST]

Pavithra Lokesh :  ತಮ್ಮ ಮದುವೆ ವಿಚಾರವಾಗಿ ಸುಳ್ಳು ಸುದ್ದಿ ಹರಡಿರುವ ಬಗ್ಗೆ  ಬಾಯಿಬಿಟ್ಟ ಪವಿತ್ರಾ ಲೋಕೇಶ್..! ಸುಚೇಂದ್ರ ಅವರಿಗೆ ಮೋಸ ಆಗಿಲ್ವಂತೆ..!

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಮೈಸೂರ್ ಲೋಕೇಶ್ ಅವರು ರಂಗಭೂಮಿ ಕಲಾವಿದರು ಆಗಿದ್ದರು. ಹಾಗೆ ಚಲನಚಿತ್ರನಟ ಕೂಡ ಹೌದು. ಮೈಸೂರು ಲೋಕೇಶ್ ಅವರು ರಾಜಣ್ಣ ಅವರ ಕಾಲದಿಂದಲೂ ಹಿಡಿದು, ನಟ ವಿಷ್ಣುವರ್ಧನ್ ಅವರ ಜೊತೆಗೂ ಅಭಿನಯ ಮಾಡಿ ಮತ್ತು ನಟ ರವಿಚಂದ್ರನ್ ಅವರ ಸಿನಿಮಾದಲ್ಲಿ ಕೂಡ ಅಭಿನಯ ಮಾಡಿ ಸೈ ಎಣಿಸಿಕೊಂಡವರು. ಅವರ ಮಕ್ಕಳೇ ನಟ ಆದಿ ಲೋಕೇಶ್, ಹಾಗೂ ನಟಿ ಪವಿತ್ರ ಲೋಕೇಶ್. ಪವಿತ್ರ ಲೋಕೇಶ್ ಅವರ 15 ವರ್ಷದ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದು ನಟ ಸುಚೇಂದ್ರ ಪ್ರಸಾದ್ ಅವರನ್ನು ಕೈ ಬಿಟ್ಟು ಜೊತೆಗೆ ಎರಡು ಮಕ್ಕಳನ್ನು ಬಿಟ್ಟು ತೆಲುಗಿನ ನಟ ನರೇಶ್ ಅವರೊಟ್ಟಿಗೆ ಮದುವೆಯಾಗಿದ್ದಾರೆ. ಅತ್ತ ಮಹಾಬಲೇಶ್ವರ ದೇವಸ್ಥಾನದಲ್ಲಿ ನರೇಶ್ ಅವರ ಕುಟುಂಬದಲ್ಲಿ ಪವಿತ್ರ ಲೋಕೇಶ್ ಅವರು ಕಾಣಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಮದುವೆ ಆಗಿದ್ದಾರೆ ಎನ್ನಲಾಗಿ ಸುದ್ದಿಯಾಗಿತ್ತು . 

ಹೌದು ಇಷ್ಟೆಲ್ಲ ಚರ್ಚೆ ಮಾಹಿತಿ ಸುತ್ತುತ್ತಿದ್ದರೂ ಕೂಡ ಇಲ್ಲಿಯವರೆಗೆ ಯಾರೊಬ್ಬರೂ ಕೂಡ ಬಾಯಿಬಿಟ್ಟಿರಲಿಲ್ಲ. ಆದರೆ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಟಿ ಪವಿತ್ರಾ ಲೋಕೇಶ್ ಅವರು ತಮ್ಮ ಹಾಗೂ ತೆಲುಗು ನಟ ನರೇಶ್ ಅವರ ಮದುವೆ ವಿಚಾರವಾಗಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಅವರ ಪತಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಟ ನರೇಶ್ ಅವರು ಕೆಟ್ಟ ಮನಸ್ಥಿತಿಯವರು ಅಲ್ಲ. ಅವ್ರು ತುಂಬಾ ಒಳ್ಳೆಯವರು. ನರೇಶ್ ಅವರ ಮೂರನೇ ಹೆಂಡತಿ ರಘುಪತಿ ಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಸುಚೇಂದ್ರ ಅವರಿಗೆ ಯಾವುದೇ ಮೋಸ ಮಾಡಿಲ್ಲ, ಎಂದಿಗೂ ಅನ್ಯಾಯ ಮಾಡಿಲ್ಲ ಎಂದಿದ್ದಾರೆ.

ನರೇಶ್ ಅವರೊಟ್ಟಿಗೆ ಓಡಾಡುವ ನಟಿ ಪವಿತ್ರ ಲೋಕೇಶ್ ಅವರ ಬಳಿ ಹಣ ಇದೆ ಎಂದ ತಕ್ಷಣ ಅವರ ಬಳಿ ಆತ್ಮೀಯ ಆಗಿಲ್ಲ, ಅವರ ಸ್ವಭಾವ ನೋಡಿ ಅವರ ಜೊತೆ ಆತ್ಮೀಯ ಆಗಿದ್ದೇನೆ ಅಷ್ಟೇ ಎಂದಿದ್ದಾರೆ ಪವಿತ್ರ ಲೋಕೇಶ್ ಎಂದು ಕೇಳಿ ಬಂದಿದೆ. ಹಾಗೆ ತಮ್ಮಿಬ್ಬರ ಮದುವೆ ವಿಚಾರದ ಬಗ್ಗೆ ಸುದ್ದಿ ಎದ್ದಿರುವ ವಿಷಯಕ್ಕೆ ಹೆಚ್ಚು ಮಾಹಿತಿಯನ್ನೇನು ನಟಿ  ನೀಡಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...