Pavithra Lokesh : ನನ್ನ ಜೊತೆ ರಿಹರ್ಸಲ್ ಮಾಡಿ ಎಂದ ಪವಿತ್ರಾ ಲೋಕೇಶ್..! ರೋಮ್ಯಾಂಟಿಕ್ ವಿಡೀಯೋ ವೈರಲ್

By Infoflick Correspondent

Updated:Tuesday, August 2, 2022, 08:29[IST]

Pavithra Lokesh :  ನನ್ನ ಜೊತೆ ರಿಹರ್ಸಲ್ ಮಾಡಿ ಎಂದ ಪವಿತ್ರಾ ಲೋಕೇಶ್..! ರೋಮ್ಯಾಂಟಿಕ್ ವಿಡೀಯೋ ವೈರಲ್

ಕನ್ನಡ ಚಿತ್ರರಂಗದ ಖ್ಯಾತ ನಟ ಮೈಸೂರ್ ಲೋಕೇಶ್ ಅವರು ಅವರದೇ ಆದ ಹೆಚ್ಚು ಕಾಮಿಡಿ ನಟನೆಯಿಂದಲೇ ಫೇಮಸ್ ಆದವರು. ಅವರ ಮಕ್ಕಳಾದ ಆದಿ ಲೋಕೇಶ್ ಈಗ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟ. ವಿಲನ್ ಪಾತ್ರಗಳಿಗೆ ಜೀವ ತುಂಬಿದ ನಟ. ಬಿಡ್ಡ ಎಂಬ ಪಾತ್ರದ ಮೂಲಕ ಜೋಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ ಆದಿ ಲೋಕೇಶ್ ಅವರು ಅಂದು ಈ ಸಿನಿಮಾದ ಪಾತ್ರದಿಂದಲೇ ಹೆಚ್ಚು ಗುರುತಿಸಿಕೊಂಡವರು. ಇಂದಿಗೂ ಈ ಬಿಡ್ಡ ಪಾತ್ರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ ಎಂದು ಹೇಳಬಹುದು. ಆದಿ ಲೋಕೇಶ್ ಅವರ ಅಕ್ಕ ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಚ್ಚು ಹೆಸರು ಮಾಡಿದ ನಟಿ. 

ನಟಿ ಪವಿತ್ರ ಲೋಕೇಶ್ ಅವರು ಕನ್ನಡಿಗರ ಮನವನ್ನು ಈಗಾಗಲೇ ಸಿನಿಮಾಗಳ ಮೂಲಕ ಗೆದ್ದಿದ್ದಾರೆ. ಇತ್ತೀಚಿಗೆ ಕೊರೋನಾ ಸಂದರ್ಭದಲ್ಲಿ ದಿಯಾ ಚಿತ್ರದಲ್ಲಿ ತಾಯಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ಅದೇ ರೀತಿ ಕನ್ನಡಿಗರ ಮನಸ್ಸನ್ನು ಸಾಕಷ್ಟು ಪಾತ್ರಗಳ ಮೂಲಕ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಭಿಮಾನಿ ಬಳಗವನ್ನು ಸಹ ಹೊಂದಿದ್ದರು, ಅದೂ ನಿಮಗೂ ಗೊತ್ತು. ಅತ್ತ ತೆಲುಗು ಚಿತ್ರರಂಗದಲ್ಲೂ ಕೂಡ ಇದೀಗ ಹೆಚ್ಚು ಬೇಡಿಕೆಯ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಇತ್ತೀಚಿಗೆ ನಡೆದ ಒಂದು ಘಟನೆ ಕುರಿತು ನಟಿ ಪವಿತ್ರ ಲೋಕೇಶ್ ಸಾಕಷ್ಟು ಜನರ ಕೆಂಗೇಣ್ಣಿಗೆ ಗುರಿಯಾದರು ಎನ್ನಬಹುದು. ಹೌದು ಈಗಾಗಲೇ ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿದ್ದು ಕೆಲವು ಸಿನಿಮಾಗಳ ಮೂಲಕ ಹೆಚ್ಚು ಹೆಸರು ಮಾಡಿದ್ದಾರೆ.

ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ನಡುವಿನ ಕೆಲ ಸಂಬಂಧದ ಕುರಿತು ಇತ್ತೀಚಿಗೆ ಕೇಳಿ ಬಂದ ಕೆಲವು ಮಾತುಗಳ ಬಗ್ಗೆ ನಿಮಗೂ ಗೊತ್ತಿದೆ. ನಡೆದ ಗಲಾಟೆ ಬಗ್ಗೆ ನಿಮಗೂ ಸಹ ಮಾಹಿತಿ ಇದೆ. ನರೇಶ್ ಮೂರನೇ ಹೆಂಡತಿ ರಮ್ಯಾ ರಘುಪತಿ ಅವರು, ನರೇಶ್ ಹಾಗೂ ಪವಿತ್ರಾರ ನಡುವೆ ಸಂಬಂಧ ಇದೆ ಎನ್ನಲಾಗಿ ಆರೋಪ ಮಾಡಿದ್ದರು. ಹಾಗೆ ಮೈಸೂರಿನಲ್ಲಿ ಇವರಿಬ್ಬರನ್ನು ಒಟ್ಟಿಗೆ ರೂಮಿನಲ್ಲಿ ನೋಡಿದ ರಮ್ಯಾ ಅವರು ನಂತರ ಮಾಡಿದ್ದ ಗಲಾಟೆ ಬಗ್ಗೆ ನೀವು ನೋಡಿದ್ದೀರಿ. ಇದೀಗ ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಕಾಣಿಸಿಕೊಂಡಿರುವ ಒಂದು ಚಿತ್ರದ ದೃಶ್ಯ ವೈರಲಾಗುತ್ತಿದೆ ಗೆಳೆಯರೇ. ಇದೊಂದು ತೆಲುಗು ಚಿತ್ರದ ದೃಶ್ಯ ಆಗಿದ್ದು, ಈ ದೃಶ್ಯದಲ್ಲಿ ನರೇಶ್ ಅವರು ನಾವು ಎಲ್ಲರೂ ಚಂದಿರನ ಅಂಗಳದಲ್ಲಿ ಮೇಲೆ ಹೋಗಿ ರಿಹರ್ಸಲ್ ಮಾಡೋಣ ಬನ್ನಿ ಎಂಬುದಾಗಿ ಕರೆಯುತ್ತಾರೆ.

ಆಗ ಪವಿತ್ರಾ ಲೋಕೇಶ್ ಅವರ ಪಾತ್ರ, ಅವರು ಹೋಗಲಿ ನೀವು ನನ್ನ ಜೊತೆಯಲ್ಲಿ ರಿಹರ್ಸೆಲ್ ಮಾಡಿ ಎಂದು ನರೇಶ್ ಅವರಿಗೆ ಕೇವಲ ಪಾತ್ರಕ್ಕೆ ಜೀವ ತುಂಬಿ ನರೇಶ್ ಅವರಿಗೆ ಕರೆಯುತ್ತಾರೆ. ಆದ್ರೆ ಇತ್ತೀಚಿನ ಘಟನೆ ಎಲ್ಲಾ ನೋಡಿದ್ದ ನೆಟ್ಟಿಗರು, ಅದರ ವಿಡಿಯೋ ತುಣುಕು ನೋಡಿ ಅದೆಷ್ಟು ರೋಮ್ಯಾಂಟಿಕ್ ಆಗಿ ಇವರು ಪಾತ್ರದಲ್ಲಿ ಮುಳುಗಿದ್ದಾರೆ ನೋಡಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಒಂದು ಬಾರಿ ಈ ವಿಡಿಯೋ ನೀವೂ ನೋಡಿ. ಹಾಗೇನೇ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...