Pavithra Lokesh : ನಮ್ಮ ಜೀವನವನ್ನು ನಾವೇ ನೋಡ್ಕೋಬೇಕು ಎಂದು ಹೇಳಿದ್ಯೇಕೆ ಪವಿತ್ರಾ ಲೋಕೇಶ್..! ವಿಡಿಯೋ..! ಹೇಳಿದ್ದ್ಯೇನು ನೋಡಿ

By Infoflick Correspondent

Updated:Friday, July 1, 2022, 08:29[IST]

Pavithra Lokesh : ನಮ್ಮ ಜೀವನವನ್ನು ನಾವೇ ನೋಡ್ಕೋಬೇಕು ಎಂದು ಹೇಳಿದ್ಯೇಕೆ  ಪವಿತ್ರಾ ಲೋಕೇಶ್..! ವಿಡಿಯೋ..! ಹೇಳಿದ್ದ್ಯೇನು ನೋಡಿ

ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಖ್ಯಾತ ನಟ ಹಿರಿಯ ರಂಗ ಕಲಾವಿದ ಮೈಸೂರು ಲೋಕೇಶ್ ಅವರ ಪುತ್ರಿ ನಟಿ ಪವಿತ್ರ ಲೋಕೇಶ್ ಅವರು ಸುದ್ದಿಯಲ್ಲಿದ್ದಾರೆ. ಹೌದು, ತೆಲುಗು ಚಿತ್ರರಂಗದ ನಟ ಕೃಷ್ಣ ಅವರ ಎರಡನೇ ಹೆಂಡತಿ ಮಗ ನರೇಶ್ ಅವರು ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಿ ನಾಲ್ಕನೇ ಹೆಂಡತಿಯನ್ನಾಗಿ ಸ್ವೀಕಾರ ಮಾಡಿದ್ದಾರೆ ಎನ್ನಲಾಗಿ ಕೇಳಿಬಂದಿತ್ತು. ಸುಮಾರು 15 ವರ್ಷಗಳಿಂದ ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ದಾಂಪತ್ಯ ಜೀವನವನ್ನು ಮಾಡಿದ್ದ ಪವಿತ್ರ ಲೋಕೇಶ್ ಅವರು ಇತ್ತೀಚಿಗೆ ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ಇಲ್ಲ. ಅವರಿಂದ ದೂರ ಆಗಿದ್ದಾರೆ, ಹಾಗಾಗಿ ನರೇಶ್ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿ ಕೆಲ ಪೋಸ್ಟ್ಗಳ ಮೂಲಕ ಈ ಮದುವೆ ವಿಚಾರದ ಸುದ್ದಿ ಭಾರಿ ವೈರಲ್ ಆಗಿತ್ತು.   

ಹಾಗೆ ಇದಕ್ಕೆ ಸಂಬಂಧಿತ ಕೆಲ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಇಲ್ಲಿಯವರೆಗೆ ನಟಿ ಪವಿತ್ರ ಲೋಕೇಶ್ ಅವರಾಗಲಿ, ಅಥವಾ ನಟ ನರೇಶ್ ಆಗಲಿ, ಅಥವಾ ಈ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಯಾರು ಸಹ ಸ್ವಲ್ಪ ಮಾಹಿತಿಯನ್ನು ಬಹಿರಂಗವಾಗಿ ತಿಳಿಸಿಲ್ಲ. ಹಾಗೆ ಈ ಬಗ್ಗೆ ಹೆಚ್ಚು ಮಾತನಾಡಿಲ್ಲ ಎನ್ನಬಹುದು. ನಟಿ ಪವಿತ್ರ ಲೋಕೇಶ್ ಅವರು ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರು ಕೂಡ ಒಬ್ಬರು ಎಂಬುದು ನಿಮಗೂ ಗೊತ್ತು. ಖ್ಯಾತ ನಟಿ ಜಯಂತಿ ಅವರ ಅಗಲಿಕೆ ಬಗ್ಗೆ ಅಂದು ಮಾತನಾಡಿದ್ದ ಪವಿತ್ರ ಲೋಕೇಶ್ ಅವರು ನಮ್ಮ ಜೀವನವನ್ನು ನಾವೇ ನೋಡಿಕೊಳ್ಳಬೇಕು ಎಂದಿದ್ದರು. ಹಾಗೆ ಕನ್ನಡ ಇಂಡಸ್ಟ್ರಿ ಮುಖ್ಯನಾ ಅಥವಾ ತೆಲುಗು ಇಂಡಸ್ಟ್ರಿ ಮುಖ್ಯನಾ ಎಂಬ ಪ್ರಶ್ನೆಗೆ ನಟಿ ಪವಿತ್ರಾ ಅವರು ಕೊಟ್ಟ ಉತ್ತರ ಎಷ್ಟು ಸೊಗಸಾಗಿ ಇತ್ತು ಗೊತ್ತಾ..?

ಕನ್ನಡ ಚಿತ್ರರಂಗದಲ್ಲಿ ಹುಟ್ಟಿ ಬೆಳೆದ ನಾನು ಕನ್ನಡವನ್ನು ಗೌರವಿಸುತ್ತೇನೆ. ಹಾಗೆ ಕನ್ನಡ ಜನತೆಯ ಅಭಿಮಾನಿಗಳನ್ನು ಕೂಡ ಆರಾಧಿಸುತ್ತೇನೆ. ಮೊದಲು ನನ್ನ ತಂದೆಯ ಮೂಲಕ ನಾನು ಇಲ್ಲಿ ಜನರಿಗೆ ಚಿರಪರಿಚಿತ ಆದೆ. ನನ್ನ ಅಭಿನಯವ ಕನ್ನಡಿಗರು ಇಷ್ಟಪಟ್ಟರು. ತೆಲುಗು ಚಿತ್ರರಂಗದಲ್ಲೂ ಸಹ ನಟನೆ ಮಾಡುತ್ತೇನೆ. ನನ್ನ ಇಲ್ಲಿಯ ನಟನೆ ನೋಡಿಯೇ ಅವರು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಕೂಡ ನಟನೆ ಮಾಡುತ್ತಿದ್ದೇನೆ. ಆದರೆ ನಮ್ಮ ಕನ್ನಡ ಹಾಗೂ ಆ ತೆಲುಗು ಇಂಡಸ್ಟ್ರಿ ಒಳಗೆ ಯಾವುದು ಮುಖ್ಯ ಎಂದರೆ ನಾನೇನು ಹೇಳಲಿ ಎಂದಿದ್ದಾರೆ. ಅಸಲಿಗೆ ಈ ಪ್ರಶ್ನೆಗೆ ನಟಿ ಪವಿತ್ರ ಲೋಕೇಶ್ ಅವರು ಇನ್ನೂ ಏನೇನೆಲ್ಲಾ ಹೇಳಿದರು ಗೊತ್ತಾ.? ಇಲ್ಲಿದೆ ನೋಡಿ ಆ ವಿಡಿಯೋ. ಪೂರ್ತಿಯಾಗಿ ನೋಡಿ ಮತ್ತು ಈಗ ಎದ್ದಿರುವ ಇವರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಿಮಗೆ ಏನಾದರೂ ಮಾಹಿತಿ ಇದ್ದಲ್ಲಿ ತಪ್ಪದೆ ಕಮೆಂಟ್ ಮೂಲಕ ತಿಳಿಸಿ. ಹಾಗೆ ವಿಡಿಯೋನ ಶೇರ್ ಕೂಡ ಮಾಡಿ ಧನ್ಯವಾದಗಳು.. ( video credit : news first live ).