ರಮ್ಯಾ ಮತ್ತು ನರೇಶ್ ಬಗ್ಗೆ ನಟಿ ಪವಿತ್ರಾ ಲೋಕೇಶ್ ಹೇಳಿದ್ದು ಕೇಳಿ ಬೆಚ್ಚಿಬಿದ್ದ ಜನ

By Infoflick Correspondent

Updated:Friday, July 1, 2022, 18:48[IST]

ರಮ್ಯಾ ಮತ್ತು ನರೇಶ್ ಬಗ್ಗೆ ನಟಿ ಪವಿತ್ರಾ ಲೋಕೇಶ್ ಹೇಳಿದ್ದು ಕೇಳಿ ಬೆಚ್ಚಿಬಿದ್ದ ಜನ

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು  ಮದುವೆ ವಿಚಾರ ಮತ್ತೊಂದು ರೂಪ ಪಡೆದುಕೊಂಡಿದೆ. ನರೇಶ್ ಬಾಬು ಪತ್ನಿ ರಮ್ಯಾ, ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಪವಿತ್ರಾ ಲೋಕೇಶ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

 ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿಯವರು ಅವರ ವೈಯಕ್ತಿಕ ಕುಟುಂಬ ಕಲಹದಲ್ಲಿ ನನ್ನನ್ನು ಸುಮ್ಮನೆ ಎಳೆದುತರುತ್ತಿದ್ದಾರೆ. ಅವರ ನಡುವಿನ ಕಲಹಕ್ಕೂ ನನಗೂ ಸಂಬಂಧವೇ ಇಲ್ಲ ಎಂದಿದ್ದಾರೆ.

ನಟ ನರೇಶ್ ಮತ್ತು ಅವರ ಪತ್ನಿ ರಮ್ಯಾ ನಡುವಿನ ವೈಮನಸ್ಸು, ಕಲಹದಲ್ಲಿ ನನ್ನನ್ನು ಯಾಕೆ ಗುರಿಯಾಗಿಸುತ್ತಿದ್ದಾರೆ ಎಂದು ಮಾಧ್ಯಮಗಳು ಕಂಡುಹಿಡಿಯಬೇಕು. ನರೇಶ್ ಅವರ ಜೊತೆ ಉತ್ತಮ ಸಂಬಂಧ ಅಥವಾ ಗೆಳತಿಯಾಗಿದ್ದೇನೆಂಬ ಮಾತ್ರಕ್ಕೆ ನನ್ನನ್ನು ಖಳನಾಯಕಿಯಂತೆ ಬಿಂಬಿಸಲು ರಮ್ಯಾ ಹೊರಟಿದ್ದಾರೆಯೇ ಅವರ ಉದ್ದೇಶವೇನಿದೆ ಎಂದು ಪವಿತ್ರಾ ಲೋಕೇಶ್ ಪ್ರಶ್ನಿಸಿದ್ದಾರೆ.

ನರೇಶ್ ಪತ್ನಿ ರಮ್ಯಾ ಅಂತ ಹೇಳುತ್ತಿರುವವರನ್ನು ನನ್ಯಾಕೆ ಮಾತನಾಡಬೇಕು. ಅವರೇನು ದೀಪಿಕಾನಾ, ಹೇಮಮಾಲಿನಾ ಎಂದು ಪ್ರಶ್ನೆ ಮಾಡಿದ್ದಾರೆ. ನರೇಶ್ ಮತ್ತು ರಮ್ಯಾ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನರೇಶ್ ಬಗ್ಗೆ ಕೇಳಿ ಹೇಳುತ್ತೀನಿ ಎಂದು ಹೇಳಿದರು. ನರೇಶ್ ಮನೆಗೆ ನಾನು ಭೇಟಿ ಕೊಟ್ಟಿದ್ದೀನಿ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದೀನಿ ಅಂದ್ರೆ ಏನು ತಪ್ಪಿದೆ? ನರೇಶ್ ತಂದೆ ತಾಯಿ ಅವರನ್ನು ಭೇಟಿ ಮಾಡಿದ್ದೀನಿ ಅದರಲ್ಲಿ ತಪ್ಪೇನು? ನರೇಶ್ ಮನೆಯಲ್ಲಿ ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಾರೆ. ಅವರ ಮನೆಯಲ್ಲಿ ತುಂಬಾ ಜನ ಇದ್ದಾರೆ. ಅವರ ಮನೆಯಲ್ಲಿ ಮೂರು ಜನ ಅಣ್ಣತ್ತಮ್ಮಂದಿರು ಇದ್ದಾರೆ ಅವರ ಹೆಂಡತಿಯರು ನನಗೆ ಊಟ ಬಡಿಸಿದ್ದು ರಮ್ಯಾ ನನ್ನ ಕಣ್ಣಿಗೆ ಕಾಣಿಸಿಕೊಂಡಿಲ್ಲ. ನರೇಶ್ ಬಗ್ಗೆ ಕೇಳಿದ್ದರೆ ಮಾತ್ರ ನಾನು ಉತ್ತರ ಕೊಡ್ತೀನಿ ಅವರಿಗೆ ನನಗೆ ಕ್ಲೂಸ್ ಸ್ನೇಹಿತ ಎಂದು ಹೇಳಿದರು.


ಹೆಣ್ಣು ಮತ್ತು ಗಂಡು ಇಬ್ಬರು ಕ್ಲೋಸ್ ಇದಾರೆ ಅಂತ ಮಾತ್ರಕ್ಕೆ ಎಲ್ಲನೂ ಹೇಳಬಹುದಾ. ನನ್ನ ಮನೆಯೊಳಗೆ ಬಂದು ಏನು ಬೇಕಾದರೂ ಮಾಡಬಹುದಾ. ನನಗೆ ರಕ್ಷಣೆ ಬೇಕು, ನಾನು ಈಗ ಹೇಗೆ ಹೊರಗೆ ಹೋಗಲಿ, ಹೇಗೆ ಓಡಾಡಲಿ ಎಂದರು. ನನ್ನ ಜೀವಕ್ಕೆ, ನನ್ನ ವೃತ್ತಿ ಬದುಕಿಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲವಾ.ನನಗೆ ಯಾಕೆ ಯಾರು ಬೆಂಬಲ ನೀಡುತ್ತಿಲ್ಲಾ. ನನ್ನ ಮಾನ ಮರ್ಯಾದೆ ಹಾಳಾಗುತ್ತಿದೆ, ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಯಾಕೆ, ಯಾವ ಕಲಾವಿದರು ಮಾತನಾಡುತ್ತಿಲ್ಲ ಯಾಕೆ, ನನ್ನ ತಂದೆ ಇಲ್ಲಿಯವರು, ಕನ್ನಡಕ್ಕೆ ನಾನು ಹೊಸಬಳಲ್ಲ, ನನ್ನನ್ನು ಯಾಕೆ ಇದರಲ್ಲಿ ಎಳೆಯುತ್ತಿದ್ದಾರೆ ಎಂದು ಪವಿತ್ರಾ ಲೋಕೇಶ್ ಪ್ರಶ್ನೆ ಮಾಡಿದ್ದಾರೆ.

ನನಗೇನು ಮಾಧ್ಯಮ ಸಹಾಯ ಮಾಡುತ್ತಾ, ನ್ಯಾಯ ಕೊಡಿಸುತ್ತಾ, ಜನ ಸಹಾಯ ಮಾಡುತ್ತಾರಾ, ಜನ ನನಗೆ ಸ್ಪಂದನೆ ನೀಡಬಹುದು, ಆದರೆ ಸಹಾಯ ಮಾಡೋಕೆ ಆಗಲ್ಲ. ನನ್ನ ಸಮಸ್ಯೆಯನ್ನು ನಾನೆ ಬಗೆಹರಿಸಿಕೊಳ್ಳುತ್ತೇನೆ. ನಾನು ಓದಿದ್ದೀನಿ, ಕೆಲಸ ಮಾಡುತ್ತಿದ್ದೀನಿ, ನನಗೆ ಬೆಂಬಲವಿದೆ. ನನ್ನ ತಾಯಿ ಇದ್ದಾರೆ, ನಾನು ನೋಡಿಕೊಳ್ಳುತ್ತೇನೆ' ಎಂದು ಹೇಳಿದರು.