Pavitra Lokesh : ರಮ್ಯಾ ಗೆ ಟಾಂಗ್ ಕೊಟ್ಟ ಪವಿತ್ರಾ ಲೋಕೇಶ್..!ನಾವು ಜೊತೆಗೆ ಇರ್ತೇವೆ, ಅಟ್ಯಾಚ್ ಆಗ್ತೀವಿ ಎನಿವಾಗ ಅದ್ರಲಿ ತಪ್ಪೇನಿದೆ ?

By Infoflick Correspondent

Updated:Sunday, July 17, 2022, 14:13[IST]

Pavitra Lokesh :  ರಮ್ಯಾ ಗೆ  ಟಾಂಗ್ ಕೊಟ್ಟ ಪವಿತ್ರಾ ಲೋಕೇಶ್..!ನಾವು ಜೊತೆಗೆ ಇರ್ತೇವೆ, ಅಟ್ಯಾಚ್ ಆಗ್ತೀವಿ ಎನಿವಾಗ ಅದ್ರಲಿ ತಪ್ಪೇನಿದೆ ?

ಕನ್ನಡದ ನಟ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ಕೃಷ್ಣ ಅವರ ಎರಡನೇ ಹೆಂಡತಿಯ ಮಗ ನರೇಶ್ ಅವರ ನಡುವಿನ ಹೆಚ್ಚು ಹೆಚ್ಚು ವಿಚಾರಗಳು ಕಳೆದ 15 ದಿನಗಳಿಂದ ಸುದ್ದಿಯಾಗುತ್ತಲೇ ಇದ್ದವು. ಹೌದು ಇದಕ್ಕೆ ಸಂಬಂಧಿತವಾಗಿ ನರೇಶ್ ಮೂರನೇ ಪತ್ನಿ, ರಮ್ಯಾ ರಘುಪತಿಯವರು ಕೂಡ ಇವರಿಬ್ಬರ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದು, ಅದರ ಬೆಳವಣಿಗೆ ಕೋರ್ಟಿನಲ್ಲಿ ನಾನು ಇದರ ವಿರುದ್ಧವಾಗಿ ಹೋರಾಡುತ್ತೇನೆ ಎಂದು ಮೈಸೂರಿನಲ್ಲಿ ಹೇಳಿದ್ದರು. ಹಾಗೆ ಮೈಸೂರಿನಲ್ಲಿ ನಟ ನರೇಶ ಮತ್ತು ಪವಿತ್ರ ಲೋಕೇಶ್ ಒಂದೇ ಹೋಟೆಲ್ನಲ್ಲಿ ತಂಗಿದ್ದಾಗ ಆದ ಅವಾಂತರವನ್ನು ಕೂಡ ನೋಡಿದ್ದೀರಿ. ಇದೆಲ್ಲ ಬೆಳವಣಿಗೆ ನಡುವೆ ಇದೀಗ ಇನ್ನೊಂದು ಸುದ್ದಿ ಹೊರಬಂದಿದೆ ಸ್ನೇಹಿತರೆ. 

ನಟಿ ಪವಿತ್ರ ಲೋಕೇಶ್ ರಮ್ಯಾ ಅವರು ಮಾಡುತ್ತಿರುವ ಕೆಲ ಆರೋಪದ ಹಿನ್ನೆಲೆಯಲ್ಲಿ ಇದೀಗ ಕೆಲವೊಂದಿಷ್ಟು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ನನ್ನ ಕಷ್ಟದ ಸಮಯದಲ್ಲಿ ನರೇಶ್ ನನ್ನ ಜೊತೆಗಿದ್ದ. ನನ್ನ ಕಷ್ಟ ಸುಖದ ಸಂದರ್ಭದಲ್ಲಿ ನನ್ನ ಜೊತೆ ಭಾಗಿಯಾಗಿದ್ದವರು ನರೇಶ್. ಇದೀಗ ಅವರು ಸಹ ಕಷ್ಟದ ಸಮಯದಲ್ಲಿ ಇದ್ದಾರೆ. ನಾನು ಅವರೊಟ್ಟಿಗೆ ನಿಲ್ಲಬೇಕು. ನೀವು ಮಾಧ್ಯಮದವರು ನಮ್ಮಿಬ್ಬರ ಫೋಟೋಗಳನ್ನ ಇಟ್ಟುಕೊಂಡು ಏನೇನೋ ಹೇಳುತ್ತಿದ್ದೀರಿ. ಅದೇನೆನೋ ವಿಚಾರಗಳನ್ನು ಬೇರೆ ಬೇರೆಯಾಗಿ ಕಲ್ಪಿಸಿ ಮಾತನಾಡಿದ್ದೀರಿ ಹೌದು, ಅಫ್ಕೋರ್ಸ್ ನಾವಿಬ್ಬರು ಜೊತೆಗಿದ್ದೇವೆ, ಅಟ್ಯಾಚ್ ಆಗಿದ್ದೇವೆ, ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಅಂತಾನೆ ಇಟ್ಕೊಳ್ಳಿ ಅದರಲ್ಲಿ ತಪ್ಪೇನಿದೆ ಎಂದು ನಟಿ ಪವಿತ್ರಾ ಲೋಕೇಶ್ ಮಾಧ್ಯಮಕ್ಕೆ ಪ್ರಶ್ನೆ ಮಾಡಿದ್ದಾರೆಂದು ಎಂದು ತಿಳಿದುಬಂದಿದೆ.       

ನರೇಶ್ ಮತ್ತು ನನ್ನ ಹೆಸರನ್ನು ಇಟ್ಟುಕೊಂಡು ರಮ್ಯಾ ರಘುಪತಿಯವರು ಪಾಪುಲಾರಿಟಿ ಆಗುತ್ತಿದ್ದಾರೆ. ತೆಲುಗು ಅಲ್ಲಿ ಸಮಸ್ಯೆಯಾದರೆ ಕನ್ನಡದ ಮಾಧ್ಯಮಗಳ ಮುಂದೆ ಯಾಕೆ ಹೋಗುತ್ತಿದ್ದಾರೆ. ಯಾರು ಅವರು ನರೇಶ್ ಅವರ ಹೆಂಡತಿಯ, ನನಗೆ ಗೊತ್ತೇ ಇಲ್ಲ. ನಿಜಕ್ಕೂ ನರೇಶ್ ಅವರ ಹೆಂಡತಿ ಅವರೇ ನಾ ಎಂದು ನನಗೆ ಅನುಮಾನವಿದೆ. ಹಾಗೆ ಹೀಗೆ ಎಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಪವಿತ್ರ ಲೋಕೇಶ್ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಟಿ ಪವಿತ್ರ ಲೋಕೇಶ್ ಅವರು ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ನೆಟ್ಟಿಗರು ಸಕಾರಾತ್ಮಕ ನಕಾರಾತ್ಮಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಕೆಲವರು ನಟಿ ಪವಿತ್ರ ಲೋಕೇಶ್ ಅವರ ಪರ ಬ್ಯಾಟ್ ಬೀಸಿದರೆ, ಇನ್ನು ಕೆಲವರು ನೀನು ಒಂದು ಹೆಣ್ಣಾಗಿ ಆ ಹೆಣ್ಣಿನ ದಾಂಪತ್ಯ ಜೀವನವನ್ನು ಹಾಳು ಮಾಡುತ್ತಿರುವುದು ಸರಿನಾ ಎಂದು ಇವರಿಗೆ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಅಭಿಪ್ರಾಯ ಈ ಮಾಹಿತಿ ಬಗ್ಗೆ ಹೇಳಿ. ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..