Pavithra Lokesh : ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರಾ ? ಇಲ್ಲಿದೆ ಅಸಲಿ ವಿಷಯ

By Infoflick Correspondent

Updated:Friday, July 1, 2022, 20:35[IST]

Pavithra Lokesh : ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರಾ ? ಇಲ್ಲಿದೆ ಅಸಲಿ ವಿಷಯ

ಪವಿತ್ರಾ ಲೋಕೇಶ್ ಮತ್ತು ನರೇಶ್ ನಡುವೆ ಮದುವೆ ಗಲಾಟೆ ಈಗ ಮತ್ತೊಂದು ಹಂತ ತಲುಪಿದೆ. ಇದೀಗ ನಟಿ ಪವಿತ್ರಾ ಲೋಕೇಶ್ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಮಾತ ಮಾಡಿದ್ದಾರೆ. ನಟ ಸುಚೇಂದ್ರ ಪ್ರಸಾದ್ ಜೊತೆಗಿನ ಮದುವೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

ಪವಿತ್ರಾ ಲೋಕೇಶ್​ ಅವರು ದುಡ್ಡಿಗಾಗಿ ನರೇಶ್​ ಜೊತೆ ಇದ್ದಾರೆ ಎಂದು ಸುಚೇಂದ್ರ ಪ್ರಸಾದ್​ ಹೇಳಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಅದಕ್ಕೆ ಪವಿತ್ರಾ ಲೋಕೇಶ್​ ತಿರುಗೇಟು ನೀಡಿದ್ದಾರೆ. ಕೆಲವು ಶಾಕಿಂಗ್​ ವಿಷಯಗಳನ್ನು ಅವರು ಬಹಿರಂಗಪಡಿಸಿದ್ದಾರೆ.

ನಾನು ಸುಚೇಂದ್ರ ಪ್ರಸಾದ್​ ಜೊತೆ 11 ವರ್ಷ ಒಟ್ಟಿಗೆ ಇದ್ದೆ. ಈಗ 5 ವರ್ಷದಿಂದ ಅವರ ಜೊತೆ ಇಲ್ಲ. ಸುಚೇಂದ್ರ ಪ್ರಸಾದ್​ ಅವರು ನನ್ನನ್ನು ಮದುವೆ ಕೂಡ ಆಗಿಲ್ಲ. 11 ವರ್ಷ ನಾನು-ಅವರು ಜೊತೆಗಿದ್ದಾಗ ಅವರ ಬಳಿ ಏನೂ ಇರಲಿಲ್ಲ. ದುಡ್ಡು, ಕಾರು, ಮನೆ ಕೂಡ ಇರಲಿಲ್ಲ. ದುಡ್ಡಿಗಾಗಿ ಇರೋದಾಗಿದ್ದರೆ ಕೇವಲ ಒಂದು ವರ್ಷ ಆ ಸಂಬಂಧ ಉಳಿಯುತ್ತಿತ್ತು 11 ವರ್ಷ ಇರುತ್ತಿರಲಿಲ್ಲ' ಎಂದು ಪವಿತ್ರಾ ಲೋಕೇಶ್​ ಹೇಳಿದ್ದಾರೆ.

ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ. ಆದರೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜೊತೆಗೆ ಇದ್ದೆವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಆದರೂ, ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ ಎಂದಿದ್ದಾರೆ.

ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು' ಎಂದು ಹೇಳಿದ್ದಾರೆ. ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಸುಚೇಂದ್ರ ಪ್ರಸಾದ್ ಒಳ್ಳೆಯ ಮನುಷ್ಯ, ನಮ್ಮಿಬ್ಬರ ನಡುವೆ ಒಳ್ಳೆಯ ಫ್ರೆಂಡ್ ಶಿಪ್ ಯಾವಾಗ್ಲೂ ಇರುತ್ತೆ ಎಂದು ಹೇಳಿದ್ದಾರೆ.