Pavithra Lokesh : ಅಂದು ಪವಿತ್ರಾ ಲೋಕೇಶ್ ತಮ್ಮ ಗಂಡನ ಬಗ್ಗೆ ಹೇಳಿದ್ದ ಕೇಳಿ.. ವಿಡಿಯೋ ಬಾರಿ ವೈರಲ್ ! ಈಗ ಅಂಥದ್ದೇನಾಯ್ತೋ ಶಿವ..!
Updated:Wednesday, July 6, 2022, 21:11[IST]

ಸ್ಯಾಂಡಲ್ವುಡ್ನ ಖ್ಯಾತ ಹಿರಿಯ ನಟ ಆಗಿ ಅವರದ್ದೇ ಆದ ಕನ್ನಡದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದು, ಮಾತನಾಡುವ ಶೈಲಿಗೆ ಫಿದಾ ಆಗುವಂತ ನಟ ಸುಚೇಂದ್ರ ಪ್ರಸಾದ್ ಅವರು ಇತ್ತೀಚಿಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಅವರ ಪತ್ನಿ ಹಾಗೂ ಮೈಸೂರು ಲೋಕೇಶ್ ಅವರ ಮಗಳು ಪವಿತ್ರ ಲೋಕೇಶ್ ಅವರ ಜೊತೆಗೆ ಅವರಿಗ ಇಲ್ಲ ಎಂದು ಕೇಳಿ ಬಂದಿದ್ದು, ಹಾಗೆ ಕೆಲವು ದಿನಗಳಿಂದ ಬೇರೆಬೇರೆಯಾಗಿದ್ದಾರೆ ಎಂದು ಕೆಲ ಮಾಧ್ಯಮದಲ್ಲಿ ಇವರಿಬ್ಬರ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ಇದರೊಟ್ಟಿಗೆ ತೆಲುಗು ಸಿನಿಮಾ ರಂಗದ ನಟ ಹಾಗೂ ಖ್ಯಾತ ಹಿರಿಯ ನಟ ಕೃಷ್ಣರ ಎರಡನೇ ಹೆಂಡತಿಯ ಮಗ ನರೇಶ್ ಪವಿತ್ರ ಲೋಕೇಶ್ ಜೊತೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನಲಾಗಿ ಸುದ್ದಿಯಾಗಿತ್ತು.
ಹೀಗೆ ಒಂದಲ್ಲ ಒಂದು ವಿಚಾರವಾಗಿ ಈ ಮೂವರ ನಡುವೆ ವಿವಾದಗಳು ಕೇಳಿ ಬರುತ್ತಲೇ ಇದ್ದವು. ಅಷ್ಟು ಚೆನ್ನಾಗಿದ್ದ ಇವರಿಬ್ಬರ ಸಂಸಾರ ಅದೇಗೆ ಹಾಳಾಯಿತು, ನಟ ನರೇಶ್ ಹೇಗೆ ಇವರೊಟ್ಟಿಗೆ ಗೆಳೆಯರಾದರು ಎಂಬಂತೆ ಈಗ ಎಲ್ಲಾ ಬೇರೆಯ ರೂಪದಲ್ಲಿ ವಿವಾದಗಳು ಕಲ್ಪಿಸಿಕೊಂಡಿವೆ. ಹಾಗೆ ನರೇಶ್ ಮೂರನೇ ಪತ್ನಿ ರಮ್ಯ ರಘುಪತಿ ಕೂಡ ನರೇಶ್ ವಿರುದ್ಧ ಧ್ವನಿಯೆತ್ತಿದ್ದು ನನಗೆ ಅನ್ಯಾಯವಾಗಿದೆ ನನಗೆ ಡೈವೋರ್ಸ್ ನಡೆದೇ ಇವರಿಬ್ಬರು ಮದುವೆಯಾಗಿದ್ದಾರೆ ಹಾಗೆ ಜೊತೆಗೆ ಓಡಾಡುತ್ತಿದ್ದಾರೆ ಎಂದು ರಮ್ಯಾ ನರೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನ ಹೋಟೆಲ್ನಲ್ಲಿ ಒಂದೇ ರೂಮಿನಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಜೊತೆಗೆ ಇದ್ದಿದ್ದು ಆದ ಅವಾಂತರ ನೀವು ನೋಡಿದ್ದೀರಿ.
ಹೀಗೆ ಬೇರೆ ಬೇರೆ ರೀತಿಯ ಅರ್ಥಗಳನ್ನು ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ವಿಚಾರ ಪಡೆದುಕೊಳ್ಳುತ್ತಿದೆ. ಹೀಗಿರುವಾಗ 9 ವರ್ಷಗಳ ಹಿಂದೆ ಪವಿತ್ರ ಲೋಕೇಶ್ ಹಾಗೂ ನಟ ಸುಚೇಂದ್ರ ಪ್ರಸಾದ್ ಅವರು ಎಷ್ಟು ಚಂದದ ದಾಂಪತ್ಯ ಜೀವನವನ್ನು ಮಾಡುತ್ತಿದ್ದರು ಗೊತ್ತಾ..? ಹಾಗೆ ಪವಿತ್ರ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಅವರ ನಡುವೆ ಯಾವ ರೀತಿ ಬಾಂಧವ್ಯ ಇತ್ತು ಎಂಬುದಾಗಿ ಇದೀಗ ಅವರದ್ದೇ ಆದ ಒಂದು ವಿಡಿಯೋ ಕಂಡು ಬಂದಿದೆ, ಬುಕ್ ಓದುವುದರ ಜೊತೆಗೆ ಮಗು ಆದ ಸಂದರ್ಭದಲ್ಲಿ ಅವರ ಪತಿ ಸುಚೇಂದ್ರ ಪ್ರಸಾದ್ ಅವರು ಹೇಗೆ ಯಾವ ರೀತಿ ಸಹಾಯ ಮಾಡಿದ್ದರು ಎಂದು ಪವಿತ್ರ ಅವರೇ ಹೇಳಿದ್ದರು. ಇಷ್ಟೆಲ್ಲಾ ಚೆನ್ನಾಗಿದ್ದ ಇವರಿಬ್ಬರ ಸಂಸಾರ, ಇದೀಗ ಏನಾಯ್ತು ಇಲ್ಲಿದೆ ನೋಡಿ ಹಳೆಯ ವಿಡಿಯೋ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.