Pavithra Lokesh : ಕಾಸ್ಟಿಂಗ್‌ ಕೌಚ್ ಬಗ್ಗೆ ಮಾತನಾಡಿರುವ ಪವಿತ್ರಾ ಲೋಕೇಶ್‌ ಏನ್‌ ಹೇಳಿದ್ದಾರೆ ಗೊತ್ತಾ..?

By Infoflick Correspondent

Updated:Monday, July 4, 2022, 20:22[IST]

Pavithra Lokesh :  ಕಾಸ್ಟಿಂಗ್‌ ಕೌಚ್ ಬಗ್ಗೆ ಮಾತನಾಡಿರುವ ಪವಿತ್ರಾ ಲೋಕೇಶ್‌ ಏನ್‌ ಹೇಳಿದ್ದಾರೆ ಗೊತ್ತಾ..?

ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಇದ್ದೇ ಇರುತ್ತದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳದ ಬಗ್ಗೆಯ ಸುದ್ದಿಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಕೆಲವರು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಅಂದ್ರೆ ಮತ್ತಷ್ಟು ಮಂದಿ ಇಲ್ಲ ಅನ್ನುತ್ತಾರೆ. ಈ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟಿ ಪವಿತ್ರಾ ಲೋಕೇಶ್‌ ಅವರು, ಕಾಸ್ಟಿಂಗ್ ಕೌಚ್ ದೌರ್ಜನ್ಯವಲ್ಲ. ಅದು ಇಬ್ಬರ ನಡುವಿನ ಒಪ್ಪಂದ ಎಂದು ಹೇಳಿದ್ದಾರೆ. 

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಒಪ್ಪಿಕೊಂಡಿದ್ದು, ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ ಎಂದಿದ್ದಾರೆ. ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯವನ್ನು ಹಲವು ನಟಿಯರು ಅನುಭವಿಸಿದ್ದಾರೆ. ಕಾಸ್ಟಿಂಗ್ ಕೌಚ್ ಚಿತ್ರರಂಗಲ್ಲಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಅಲ್ಲದೇ, ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರೆ ಕ್ಷೇತ್ರಗಳಲ್ಲೂ ಇದೆ.   

ಸಾಫ್ಟ್ ವೇರ್​ ಕಂಪನಿಗಳು ಸೇರಿದಂತೆ ಎಲ್ಲೆಡೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ. 

ಎಲ್ಲಾ ಕ್ಷೇತ್ರಗಳಲ್ಲೂ ಪುರುಷರು ಹಾಗೂ ಮಹಿಳೆಯರು ಇರುವ ಕಡೆ ಕಾಸ್ಟಿಂಗ್‌ ಕೌಚ್ ಇದ್ದೇ ಇರುತ್ತದೆ. ಇದನ್ನು ಮಹಿಳೆಯರು ಹಾಗೂ ಪುರುಷರು ಇಬ್ಬರೂ ದುರುಪಯೋಗ ಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬಟ್‌ ಮಹಿಳೆಯರು ಇಂತಹದ್ದನ್ನು ವಿರೋಧಿಸಬೇಕು. ಅವರ ಆದ್ಯತೆ ಏನು ಎಂಬುದು ಆ ವ್ಯಕ್ತಿಗೆ ಅರ್ಥವಾಗುವುದು ಸುಲಭವಾಗುತ್ತದೆ. ಇಲ್ಲವೇ ಆಕೆ ಒಪ್ಪಿಕೊಂಡರೆ ನೀವು ಸಹ ಅದರ ಲಾಭವನ್ನು ಪಡೆಯುತ್ತಿದ್ದೀರಿ ಎಂದಾಗುತ್ತದೆ. ಎಲ್ಲೇ ಆದರೂ ಪರಸ್ಪರ ಒಪ್ಪಿಗೆ ಮೇಲೆ ಕಾಸ್ಟಿಂಗ್ ಕೌಚ್ ನಡೆಯುತ್ತದೆ. ಇದನ್ನು ದೌರ್ಜನ್ಯ ಎನ್ನುವುದು ತಪ್ಪು. ಬದಲಿಗೆ ಇದೊಂದು ಒಪ್ಪಂದ ಎಂದು ಹೇಳಿದ್ದಾರೆ.