Pavithra Lokesh : ಅಪ್ಸರೆಯಂತಿದ್ದ ಪವಿತ್ರಾ ಲೋಕೇಶ್ ಸ್ಟಾರ್ ನಟಿಯಾಗಿ ಮಿಂಚಲಿಲ್ಲವೇಕೆ..? ಅಸಲಿ ಕಾರಣ ಬಯಲು

By Infoflick Correspondent

Updated:Monday, July 4, 2022, 13:06[IST]

Pavithra Lokesh : ಅಪ್ಸರೆಯಂತಿದ್ದ ಪವಿತ್ರಾ ಲೋಕೇಶ್ ಸ್ಟಾರ್ ನಟಿಯಾಗಿ ಮಿಂಚಲಿಲ್ಲವೇಕೆ..? ಅಸಲಿ ಕಾರಣ ಬಯಲು

ಸ್ಯಾಂಡಲ್ ವುಡ್ನ 80ರ ದಶಕದ ಖ್ಯಾತ ನಟ ಮೈಸೂರ್ ಲೋಕೇಶ್ ಅವರು ಎಲ್ಲರಿಗೂ ಚಿರಪರಿಚಿತ ಇದ್ದಾರೆ ಎಂದು ಹೇಳಬಹುದು. ಇವರ ಮಗಳೇ ಪವಿತ್ರ ಲೋಕೇಶ್. ಹೌದು ಪವಿತ್ರ ಲೋಕೇಶ್ ಸ್ಫೂರದ್ರೂಪಿ ಸುಂದರಿಯಾಗಿದ್ದರು. ನೋಡಲು ಅಪ್ಸರೆಯಂತೆ ಇದ್ದರು. ಆದರೂ ಕೂಡ ಸ್ಟಾರ್ ನಟಿಯಾಗಿ ಪವಿತ್ರ ಲೋಕೇಶ್ ಮಿಂಚಲಿಲ್ಲ. ಅದಕ್ಕೆ ಕಾರಣ ಕೂಡ ಈಗ ಬಯಲಾಗಿದೆ. ನಟಿ ಪವಿತ್ರ ಲೋಕೇಶ್ ಅವರು ಸಿನಿಮಾರಂಗಕ್ಕೆ ಬರುವ ಮುನ್ನವೆ ಅವರ ತಂದೆಯವರು ಸಾವನ್ನಪ್ಪಿದ್ದಾರೆ. ಅಂದಿನ ಕಷ್ಟದ ದಿನಗಳಲ್ಲಿಯೇ ತಮ್ಮ ಮತ್ತು ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಪವಿತ್ರ ಲೋಕೇಶ್ ಅವರ ಮೇಲೆ ಆಗ ಬಿದ್ದಿತ್ತು ಎನ್ನಲಾಗಿದೆ. ಖ್ಯಾತ ನಟನ ಮಗಳಾದರೂ ಕನ್ನಡ ಚಿತ್ರರಂಗಕ್ಕೆ ಬರುವುದಕ್ಕೆ ಪವಿತ್ರ ಲೋಕೇಶ್ ಅವರು ತುಂಬಾನೇ ಹರಸಾಹಸ ಪಡಬೇಕಾಯಿತು.   

ಆರಂಭದಲ್ಲಿ ಎಲ್ಲರೂ ನಿಮ್ಮ ಮಗಳನ್ನು ಸಿನಿಮಾರಂಗಕ್ಕೆ ಕರೆತನ್ನಿ ಅಂದವರೇ ಹೆಚ್ಚು, ಆದರೆ ಯಾರು ಕೂಡ ಅಷ್ಟಾಗಿ ಸಿನಿಮಾ ಆಫರ್ ಗಳನ್ನು ನೀಡಲಿಲ್ಲವಂತೆ. ಅವಕಾಶ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಅವರು 1995ರಲ್ಲಿ ಅವರದ್ದೆ ಸಿನಿಮಾವಾದ ಮಿಸ್ಟರ್ ಅಭಿಷೇಕ್ ಚಿತ್ರದಲ್ಲಿ ಅಭಿನಯ ಮಾಡಿಸಿದ್ದಾರೆ.. ಆದರೆ ಇದು ಅಷ್ಟು ಯಶಸ್ಸು ಪವಿತ್ರ ಲೋಕೇಶ್ ಅವರಿಗೆ ತಂದು ಕೊಡಲಿಲ್ಲ. ತದನಂತರ ಏಳು ಸಿನಿಮಾಗಳನ್ನು ಮಾಡಿದರೂ ಅಲ್ಲಿಯೂ ಯಶಸ್ಸು ಸಿಗಲಿಲ್ಲವಂತೆ. ಹೌದು ಈ ಚಿತ್ರರಂಗ ನನಗೆ ಸರಿ ಹೋಗುವುದಿಲ್ಲ ಎಂದು ಪವಿತ್ರಾ ಬೆಂಗಳೂರಿನಲ್ಲಿ ಒಂದು ವರ್ಷ ಹೆಚ್ ಆರ್ ಆಗಿ ಕೆಲಸ ಕೂಡ ಮಾಡಿದ್ದಾರೆ. ಮತ್ತೆ ಜನುಮದ ಜೋಡಿ ಟಿ ಎಸ್ ನಾಗಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪವಿತ್ರ ಲೋಕೇಶ್ ಅವರು ನಟಿಯ ಗೆಳತಿಯರ ಪಾತ್ರದಲ್ಲಿ, ಹಾಗೇನೇ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕುಟುಂಬ ನಡೆಸುವ ಉದ್ದೇಶದಿಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡು ಪವಿತ್ರ ಲೋಕೇಶ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಒಬ್ಬ ಸ್ಟಾರ್ ನಟಿಯಾಗಿ ಮೆರೆಯುವುದಕ್ಕೆ ಎಲ್ಲಾ ಅರ್ಹತೆ ಇದ್ದರೂ ನೆರವೇರಿಲ್ಲ. ಪವಿತ್ರ ಲೋಕೇಶ್ ಅಪ್ಸರೆಯಂತಿದ್ದರೂ, ಕಲೆಯು ಇದ್ರೂ ಎಲ್ಲಾ ರೀತಿಯ ನಟನೆ ಇದ್ದರೂ ಹೆಚ್ಚು ಅವಕಾಶ ಸಿಗದ ಕಾರಣಕ್ಕಾಗಿ ಹಿಂದುಳಿದ ಬಿಟ್ಟರು ಎಂದು ಹೇಳಲಾಗುತ್ತಿದೆ. ಆದರೆ ಇಂದು ತೆಲುಗು ಚಿತ್ರರಂಗದ ಸ್ಟಾರ್ ನಟರ ಅಮ್ಮನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪವಿತ್ರ ಲೋಕೇಶ್. ಹಾಗೆ ಪೋಷಕ ಪಾತ್ರದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಕನ್ನಡ ಸೇರಿದಂತೆ 150ಕ್ಕೂ ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ನಟಿ ಪವಿತ್ರಾ.

ಪವಿತ್ರಾ ಲೋಕೇಶ್ ಅಂದ ಚೆಂದ ಇದ್ದರೂ ಒಬ್ಬ ಸ್ಟಾರ್ ನಟಿಯಾಗಿ ಹೆಚ್ಚು ಮೆರೆಯುವುದಕ್ಕೆ ಆಗಲಿಲ್ಲ ಅದಕ್ಕೆಲ್ಲಾ ಇದೇ ಕಾರಣ ಎಂದು ತಿಳಿದು ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...