Pavitra Lokesh : ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ದಾಂಪತ್ಯ ಬಿರುಕಾಗಲು ಕಾರಣವೇನು..? ಇಲ್ನೋಡಿ

By Infoflick Correspondent

Updated:Wednesday, June 22, 2022, 11:18[IST]

Pavitra Lokesh :  ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ದಾಂಪತ್ಯ ಬಿರುಕಾಗಲು ಕಾರಣವೇನು..? ಇಲ್ನೋಡಿ

ಕಳೆದ ಮೂರು ದಿನಗಳಿಂದ ಕನ್ನಡದ ಖ್ಯಾತ ನಟ ಅಪ್ಪಟ ಕನ್ನಡಿಗ ನಟ ಸುಚೇಂದ್ರ ಪ್ರಸಾದ್ ಅವರು ಮತ್ತು ಅವರ ಪತ್ನಿ ನಟಿ ಪವಿತ್ರಾ ಲೋಕೇಶ್ ಅವರು ಇಬ್ಬರು ಬೇರೆ ಬೇರೆಯಾಗಿದ್ದಾರೆ. ಜೊತೆಗೆ ತೆಲುಗಿನ ಖ್ಯಾತ ನಟ ನರೇಶ್ ಅವರ ಜೊತೆ ಪವಿತ್ರ ಲೋಕೇಶ್ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ ಎನ್ನುವ ಕೆಲ ಗುಸು ಗುಸು ಸುದ್ದಿ ಮೊದಲು ಅತ್ತ ಟಾಲಿವುಡ್ ನಲ್ಲಿ ಕೇಳಿ ಬಂದಿತ್ತು. ಇದೀಗ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿದೆ. ಹೌದು ನಟಿ ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಅವರು 2007ರಲ್ಲಿ ದಾಂಪತ್ಯ ಜೀವನವನ್ನು ಆರಂಭಿಸಿದರು. ಇನ್ನೊಂದು ವಿಶೇಷ ಮಾಹಿತಿ ಏನೆಂದರೆ, 2007ರಲ್ಲಿ ಇವರಿಬ್ಬರದು ಕೂಡ ಎರಡನೇ ಮದುವೆಯಾಗಿತ್ತು. 

ನಟ ಸುಚೇಂದ್ರ ಪ್ರಸಾದ್ ಹಾಗೂ ನಟಿ ಪವಿತ್ರ ಲೋಕೇಶ್ ಅವರಿಗೆ ಇದೀಗ ಎರಡು ಮುದ್ದಾದ ಮಕ್ಕಳು ಇದ್ದಾವೆ. ಅದರೊಳಗೆ ಇಂತಹ ಸುದ್ದಿ ಹೆಚ್ಚು ವೈರಲ್ ಆಗುತ್ತಿರುವುದು ವಿಷಾದನೀಯ. ಆದರೆ ಇದು ಎಷ್ಟು ಸತ್ಯ, ಅದೆಷ್ಟು ಸುಳ್ಳು ಎಂಬುದಾಗಿ ಯಾವ ಮಾಹಿತಿ ಕೂಡ ಇನ್ನೂ ಬಹಿರಂಗವಾಗಿ ತಿಳಿದುಬಂದಿಲ್ಲ. ಆದರೆ ಕೇಳಿ ಬಂದ ಮಾಹಿತಿಯ ಪ್ರಕಾರ ತೆಲುಗು ನಟ ಮಹೇಶ್ ಬಾಬು ಅಣ್ಣ ನಟ ನರೇಶ್ ಜೊತೆಗೆ ನಟಿ ಪವಿತ್ರ ಲೋಕೇಶ್ ಅವರು ಈಗ ಮದುವೆಯಾಗಿದ್ದಾರೆ ಎಂದು ಕೇಳಿ ಬಂದಿದೆ. ಇದಕ್ಕೆ ಕಾರಣ ತಿಳಿದು ನೋಡಿದಾಗ ನಟ ಸುಚೇಂದ್ರ ಪ್ರಸಾದ್ ಹಾಗೂ ನಟಿ ಪವಿತ್ರ ಲೋಕೇಶ್ ಅವರ ದಾಂಪತ್ಯ ಜೀವನ ಅಷ್ಟಾಗಿ ಚೆನ್ನಾಗಿರಲಿಲ್ಲ. ಕೆಲವು ವರ್ಷಗಳಿಂದ ಇಬ್ಬರೂ ಕೂಡ ಬೇರೆಬೇರೆಯಾಗಿ ಬೇರೆಯ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಈ ದಾಂಪತ್ಯ ಜೀವನದ ಬಿರುಕಿಗೆ ಕಾರಣ ನಟ ಸುಚೇಂದ್ರ ಪ್ರಸಾದ್ ಅವರಲ್ಲಿ ಇದ್ದ ಅತಿಯಾದ ಕೋಪವೇ ಎಂದು ಕೇಳಿ ಬಂದಿದೆ. ಹೌದು ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಬಂದಿರುವುದು ಇದೊಂದೇ ಕಾರಣಕ್ಕೆ ಎನ್ನಲಾಗಿದೆ.  ಇದೊಂದೇ ಕಾರಣಕ್ಕೆ ನಟಿ ಪವಿತ್ರ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರನ್ನು ಮತ್ತು ಮಕ್ಕಳನ್ನು ಬಿಟ್ಟು ನರೇಶ್ ಅವರನ್ನು ಮದುವೆಯಾದರ..? ಇಂತಹ ಜೀವನ ಬೇಕಾ, ಎಂತಹ ಮನಸ್ಥಿತಿ ಇವರಲ್ಲಿ ಇರಬಹುದು, ಮಕ್ಕಳ ಬಗ್ಗೆ, ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಸ್ವಲ್ಪವೂ ಯೋಚನೆ ಮಾಡಲಿಲ್ಲವಲ್ಲ ಶಭಾಷ್ ಎಂದು ಇನ್ನೊಂದು ಕಡೆ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ನರೇಶ್ ಅವರಿಗೂ ಕೂಡ ಇದು ನಾಲ್ಕನೇ ಮದುವೆಯಾಗಿದ್ದು, ಒಟ್ಟು ಅವರದ್ದು ಆರು ಸಾವಿರ ಕೋಟಿ ಆಸ್ತಿ ಇದೆಯಂತೆ.

ಹಾಗೇನೆ ಇತ್ತೀಚಿಗೆ ಮಹಾಬಲೇಶ್ವರ ದೇವಸ್ಥಾನದಲ್ಲಿ ಪವಿತ್ರ ಲೋಕೇಶ್, ನರೇಶ್ ಒಟ್ಟಿಗೆ ಕಾಣಿಸಿಕೊಂಡಿರುವುದನ್ನು ನೋಡಿ ಕೆಲವರು ಈಗಾಗಲೇ ಮದುವೆಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅಸಲಿಗೆ ಇದು ಏನು ಎಂಬುದು ಇನ್ನೂ ಕೂಡ ಬಹಿರಂಗವಾಗಿ ಯಾವ ವಿಷಯ ಹೊರಗಡೆ ಬಂದಿಲ್ಲ. ಈ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ಆಗಲಿ, ನಟಿ ಪವಿತ್ರ ಲೋಕೇಶ್ ಆಗಲಿ, ಅಥವಾ ನರೇಶ್ ಆಗಲಿ ಯಾವ ಮಾಹಿತಿಯನ್ನು ಸಹ ಈ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಇಚ್ಛಿಸಿಲ್ಲ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ...