Pavitra Lokesh : ಎರಡನೇ ಮದುವೆ ಆದ್ರಾ ಪವಿತ್ರ ಲೋಕೇಶ್..! ಆತನಿಗೆ ನಾಲ್ಕನೇ ಮದುವೆಯಂತೆ..! ಅಬ್ಬಾ ಆಸ್ತಿ ನೋಡಿ

By Infoflick Correspondent

Updated:Tuesday, June 21, 2022, 10:54[IST]

Pavitra Lokesh :  ಎರಡನೇ ಮದುವೆ ಆದ್ರಾ ಪವಿತ್ರ ಲೋಕೇಶ್..! ಆತನಿಗೆ ನಾಲ್ಕನೇ ಮದುವೆಯಂತೆ..! ಅಬ್ಬಾ ಆಸ್ತಿ ನೋಡಿ

ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಅವರು ತಮ್ಮ 16 ನೆ ವಯಸ್ಸಿನಲ್ಲೇ ಅಭಿನಯ ಆರಂಭಿಸಿ ಅವರದೇ ಆದ ಛಾಯೆ ಹೊಂದಿದ್ದಾರೆ. ಅಭಿನಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೇವಲ ಕನ್ನಡಕ್ಕೆ ಮಾತ್ರ ಸೀಮಿತ ಆಗಿರದ ನಟಿ ಪವಿತ್ರಾ ಲೋಕೇಶ್ ಅವರು, ಅತ್ತ ತೆಲುಗು, ಮತ್ತು ತಮಿಳಿನಲ್ಲೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಇದೀಗ ಪವಿತ್ರ ಲೋಕೇಶ್ ಅವರ ವಿಚಾರವಾಗಿ ಇನ್ನೊಂದು ಸುದ್ದಿ ಹೊರಬಂದಿದ್ದು ನಟಿ ಪವಿತ್ರ ಲೋಕೇಶ್ ಮತ್ತೊಂದು ಮದುವೆಯಾಗಿದ್ದಾರೆ ಎಂದು ಕೇಳಿಬಂದಿದೆ. ಈ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಸುಗುಸು ಎದ್ದಿದ್ದು, ಇದಕ್ಕೆ ಇನ್ನೂ ಯಾರು ಕೂಡ ಪ್ರತಿಕ್ರಿಯೆ ನೀಡಿಲ್ಲ. ನಟಿ ಪವಿತ್ರಾ ಲೋಕೇಶ್ ಅವರು ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರನಟ ಮೈಸೂರು ಲೋಕೇಶ್ ಅವರ ಪುತ್ರಿ.  

ಪವಿತ್ರಾ ಲೋಕೇಶ್ ಅವರು ಸುಚಿತ್ರ ಪ್ರಸಾದ್ ಅವರ ಜೊತೆ ಈ ಮುಂಚೆಯೇ ಮದುವೆಯಾಗಿದ್ದು ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ ಎನ್ನಲಾಗಿದೆ. ಹೀಗಿರುವಾಗ ಇದೀಗ ಅತ್ತ ಟಾಲಿವುಡ್ ಅಂಗಳದ ಖ್ಯಾತ ಹಿರಿಯ ನಟನ ಮಗನ ಜೊತೆ ಮದುವೆಯಾಗುತ್ತಿದ್ದಾರೆ ಎನ್ನಲಾಗಿ ಕೇಳಿಬಂದಿದೆ. ಹೌದು ಟಾಲಿವುಡ್ ನಟ ಮಹೇಶ್ ಬಾಬು ಅವರ ತಂದೆ ಕೃಷ್ಣ ಕೂಡ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಹಾಗೆ ಕೃಷ್ಣ ಅವರ ಮೊದಲ ಹೆಂಡತಿಯ ಮಗ ಮಹೇಶ್ ಬಾಬು, ಎರಡನೇ ಹೆಂಡತಿಯ ಮಗ ನರೇಶ್ ಎನ್ನಲಾಗಿದೆ. ನರೇಶ್ ಅವರನ್ನು ನೀವು ತೆಲುಗು ಚಿತ್ರಗಳಲ್ಲಿ ನೋಡಿರುತ್ತೀರಿ, ಈತನಿಗೂ ಕೂಡ ಇದು ಪವಿತ್ರ ಲೋಕೇಶ್ ಜೊತೆ ನಾಲ್ಕನೇ ಮದುವೆಯಂತೆ. ನರೇಶ್ ಅವರ ತಾಯಿ ನಿರ್ಮಲ ವಿಜಯ. ಹೌದು ನಿರ್ಮಲ ವಿಜಯ ಅವರು ಸಹ ತಮ್ಮ ಮೊದಲ ಗಂಡನಿಗೆ ವಿಚ್ಛೇದನ ನೀಡಿ ಕೃಷ್ಣ ಅವರನ್ನು ವರಿಸಿದ್ದರಂತೆ.

ಇದೀಗ ಇವರ ಮಗ ನರೇಶ್ ಅವರು ಕೂಡ ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನರೇಶ್ ಅವರು ಹುಟ್ಟುತ್ತಲೆ ಚಿನ್ನದ ಸ್ಪೂನ್ ಇಟ್ಟುಕೊಂಡು ಹುಟ್ಟಿದವರು. ಇದೀಗ ಈತನ ತಂದೆ ತಾಯಿ ಎರಡನೇ ತಂದೆಯ ಆಸ್ತಿ ಎಲ್ಲವೂ ಇದ್ದು ಒಟ್ಟು 6 ಸಾವಿರ ಕೋಟಿ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರಿಗೆ 43 ವರ್ಷ ವಯಸ್ಸಾಗಿದ್ದು, ಅತ್ತ ನರೇಶ್ ಅವರಿಗೆ 62 ವರ್ಷ ವಯಸ್ಸು. ಇವರಿಬ್ಬರು ಮದುವೆಯಾಗುತ್ತಿರುವ ಸುದ್ದಿಯ ಬಗ್ಗೆ ಎಲ್ಲಿಯೂ ಕೂಡ ಏನನ್ನ ಹೇಳಿಕೊಂಡಿಲ್ಲ. ಆದ್ರೆ ನಟಿ ಪವಿತ್ರ ಲೋಕೇಶ್ ಮತ್ತು ನರೇಶ್ ಮದುವೆಯಾಗುವುದರ ಸುದ್ದಿ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಸಹ ಬರುತ್ತಿವೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...( video credit : daily culture )