Ravichandran : ಮಗಳ ಮದುವೆಗೆ ಕಷ್ಟ ಪಡುತ್ತಿದ್ದ ರವಿಚಂದ್ರನ್ ಅವರಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ..? ಇವರೇ ನೋಡಿ

By Infoflick Correspondent

Updated:Friday, August 12, 2022, 22:34[IST]

Ravichandran : ಮಗಳ ಮದುವೆಗೆ ಕಷ್ಟ ಪಡುತ್ತಿದ್ದ ರವಿಚಂದ್ರನ್ ಅವರಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ..? ಇವರೇ ನೋಡಿ

ರಣಧೀರ ಖ್ಯಾತಿಯ ನಟ ರವಿಚಂದ್ರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸ್ಯಾಂಡಲ್ವುಡ್ನ ಪ್ರೇಮಲೋಕದ ಸರದಾರ ಆಗಿ ಮೆರೆದವರು ರವಿಚಂದ್ರನ್. ಹೌದು ನಟ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಹಿಟ್ ಸಿನಿಮಾಗಳನ್ನು ಇಂಡಸ್ಟ್ರಿಗೆ ನೀಡಿದ್ದಾರೆ. 90ರ ದಶಕದಲ್ಲಿ ರವಿಚಂದ್ರನ್ ಅವರ ನಟನೆಗೆ ಭಾರಿ ಬೇಡಿಕೆ ಇತ್ತು..ಹಾಗೆ ಅವರೊಟ್ಟಿಗೆ ತೆರೆಯನ್ನು ಹಂಚಿಕೊಳ್ಳಬೇಕೆಂದು ಅದೆಷ್ಟೋ ನಟಿಯರು ತುದಿಗಾಲಲ್ಲಿ ನಿಂತಿದ್ದು ಉಂಟು.. ಇಂತಹ ನಟ ಇದೀಗ ಮತ್ತೆ ಸಿನಿಮಾ ವಿಚಾರವಾಗಿ ಕಾಣಿಸಿದ್ದಾರೆ. ನಟ ರವಿಚಂದ್ರನ್ ಅವರು ಕೆಲವು ತಿಂಗಳ ಹಿಂದೆ ಅವರ ಮಗನ ಸಿನಿಮಾ ಪ್ರಮೋಷನ್ ನಲ್ಲಿ ಬಿಜಿ ಇದ್ದರು. ಇದೀಗ ಅವರೇ ಸ್ವತಹ ನಿರ್ಮಾಣ ಮಾಡಿ, ಕಥೆ ಬರೆದು, ನಿರ್ದೇಶನವನ್ನ ಮಾಡಿದ ಮತ್ತು ನಟನೆ ಮಾಡಿದ ರವಿ ಬೋಪಣ್ಣ ಸಿನಿಮಾ ವಿಚಾರಕ್ಕೆ ಬಂದಿದ್ದಾರೆ..

ಹೌದು ಮೊನ್ನೆ ಅಷ್ಟೇ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು..ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ನಟ ಶರಣ್, ಜಗ್ಗೇಶ್, ಡಾಲಿ ಧನಂಜಯ್ ಹಾಗೆ ಮೋಹನ್ ಅವರು ಕೂಡ ಆಗಮಿಸಿದ್ದರು. ಇಡೀ ರವಿ ಬೋಪಣ್ಣ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಹೌದು ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದ ಸಾಕಷ್ಟು ಕಲಾವಿದರು ಅವರ ಒಳ್ಳೆಯತನದ ಬಗ್ಗೆ ಹೆಚ್ಚು ಮಾತನಾಡಿದರು. ಜೊತೆಗೆ ರವಿಚಂದ್ರನ್ ಸಹ ಕೆಲವೊಂದಿಷ್ಟು ಮಾತುಗಳನ್ನು ಹೇಳಿ ನಾನು ಜೀವನದಲ್ಲಿ ಸಿನಿಮಾ ಬಿಟ್ಟು ಒಳ್ಳೆಯ ಸ್ನೇಹಿತರನ್ನು ಹೊಂದಿದ್ದೇನೆ, ನನ್ನ ಮಗಳ ಮದುವೆ ಮಾಡುವ ಸಂದರ್ಭದಲ್ಲಿ ಫೈನಾನ್ಸಿಯಲ್ ಆಗಿ ನಾನು ತುಂಬಾ ಟೈಟ್ ಆಗಿದ್ದೆ, ಆ ವೇಳೆ ನನಗೆ ನನ್ನ ಮಗಳ ಮದುವೆಗೆ ಮುಂಚೆಯೇ ಒಂದು ಗಿಫ್ಟ್ ಅನ್ನು ಮನೆಗೆ ತಂದು ಕೊಟ್ಟರು.   

ನಾನು, ನನ್ನ ಮಗಳ ಮದುವೆ ಇನ್ನೂ ತುಂಬಾ ದೂರ ಇದೆ, ಇದೇನು ಈಗಲೇ ಗಿಫ್ಟ್ ತಂದಿದ್ದೀರಾ ಎಂದರೆ, ಇರಲಿ ಬಿಡಿ ತೆಗೆದುಕೊಳ್ಳಿ ಎಂದು ಹೋದರು. ಆಮೇಲೆ ನೋಡಿದರೆ ಅದರ ತುಂಬಾ ಹಣ ತಂದುಕೊಟ್ಟಿದ್ದರು. ಜೊತೆಗೆ ಜುವೆಲರಿ ಅಂಗಡಿಯಲ್ಲಿ ಅರ್ಧ ಹಣ ಕೊಟ್ಟು, ಅರ್ಧ ಹಣವನ್ನು ಆರು ತಿಂಗಳಾದ ಮೇಲೆ ಕೊಡುತ್ತೇನೆ, ನನ್ನ ಮಗಳಿಗೆ ನೀವು ಬಂಗಾರ ಕೊಡಿ ಎಂದಾಗ, ಅವರು ನಾ ಕೊಟ್ಟ ಹಣವನ್ನು ತಿರುಗಿಸಿ, ಮಗಳಿಗೆ ಜುವೆಲರೆಯನ್ನು ಕೊಟ್ಟು ಯಾವಾಗ ನಿಮಗೆ ದುಡ್ಡು ಕೊಡಲು ಆಗುತ್ತದೆಯೋ ಆಗಲೇ ದುಡ್ಡನ್ನ ಕೊಡಿ ಎಂದು ವಾಪಸ್ಸು ಕೊಟ್ಟಿದ್ದರು ಎಂದು ಹೇಳಿದ್ದಾರೆ. ಅದರ ಬಗ್ಗೆ ಈಗ ರವಿಚಂದ್ರನ್ ಅವರು ಆ ಸ್ನೇಹಿತರನ್ನು ವೇದಿಕೆ ಮೇಲೆ ಭೇಟಿ ಮಾಡಿಸಿದ್ದಾರೆ. ದುಡ್ಡು ಕೊಟ್ಟರು ಎಂದಲ್ಲ ಬದಲಿಗೆ ಅವರ ಪ್ರೀತಿಗೆ ನಾನು ಚಿರಋಣಿ ಎಂದರು ನಟ ರವಿಚಂದ್ರನ್. ಇಲ್ಲಿದೆ ನೋಡಿ ವಿಡಿಯೋ ಒಮ್ಮೆ ನೋಡಿ, ರವಿ ಬೋಪಣ್ಣ ಚಿತ್ರತಂಡಕ್ಕೆ ಶುಭವಾಗಲಿ ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು... ( video credit : kaveri tv)