ಫೋಟೋ ಶೂಟ್ ಹುಚ್ಚಿನಿಂದ ಜೀವವನ್ನೇ ಕಳೆದುಕೊಂಡ ಜೋಡಿಗಳು..

By Infoflick Correspondent

Updated:Saturday, April 16, 2022, 16:27[IST]

ಫೋಟೋ ಶೂಟ್ ಹುಚ್ಚಿನಿಂದ   ಜೀವವನ್ನೇ ಕಳೆದುಕೊಂಡ ಜೋಡಿಗಳು..

ಸೆಲ್ಫೀ ಹುಚ್ಚಿನಿಂದ ಅದೆಷ್ಟೋ ಯುವಕ ಯುವತಿಯರು ಪ್ರಾಣ ಕಳೆದುಕೊಂಡಿರುವ ಸುದ್ದಿಯನ್ನು ಓದಿದ್ದೇವೆ. ಈಗಲೂ ಅಂತಹ ಸುದ್ದಿಗಳನ್ನು ಓದುತ್ತಿರುತ್ತೇವೆ. ಈಗ ಸೆಲ್ಫೀ ಜೊತೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ದುರಂತಗಳು ಆರಂಭವಾಗಿವೆ. ಮದುವೆಯಾಗುವ ಪ್ರತಿಯೊಂದು ಜೋಡಿಗೂ ಪ್ರೀ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಗಳ ಹಾವಳಿ ಶುರುವಾಗಿದೆ. ಇದರಿಂದಲೂ ಈಗಾಗಲೇ ಸಾಕಷ್ಟು ಮಂದಿ ಜೀವ ಕಳೆದುಕೊಂಡಿರುವುದನ್ನೂ ಕೂಡ ಎಲ್ಲರಿಗೂ ಗೊತ್ತೇ ಇದೆ.

ಇತ್ತೀಚೆಗೆ ತಲಕಾಡಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಎಂದು ಬಂದಿದ್ದ ಜೋಡಿ ಅದು. ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳಲು ನವೆಂಬರ್ ನಲ್ಲಿ ವಧು ಶಶಿಕಲಾ, ವರ ಚಂದ್ರು ತಲಕಾಡಿನ ಕಾವೇರಿ ನದಿಗೆ ಹೋಗಿದ್ರು. ಇನ್ನೇನು ಫೋಟೋಶೂಟ್ ಮುಗಿಯಿತು, ಮನೆಗೆ ಹೋಗೋಣ  ಎಂದುಕೊಂಡಾಗ, ತಲಕಾಡಿನ ಮುಡುಕುತೊರೆಯ ಬಳಿಯ ಕಾವೇರಿ ನದಿ ತೀರದಲ್ಲಿ ಟೈಟಾನಿಕ್ ಶಾಟ್ಸ್ ರೀತಿಯಲ್ಲಿ ತೆಗೆಸಿಕೊಳ್ಳಬೇಕು ಎಂದುಕೊಂಡರು. ಬೋಟ್ ಸಿಗದಿದ್ದಾಗ ತೆಪ್ಪದಲ್ಲಿ ಶೂಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ವಧು ತೆಪ್ಪ ಏರುವಾಗ ಆಯತಪ್ಪಿ ಬಿದ್ದಿದ್ದಾಳೆ. ಇವಳನ್ನು ರಕ್ಷಿಸಲು ವರ ಮುಂದಾಗಿದ್ದು ಆತನೂ ನೀರುಪಾಲಾಗಿದ್ದಾನೆ. 

ಈಗ ಹೇಳೋದು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ದುರಂತದ ಕಥೆ. ಕೇರಳ ಕಡಿಯಂಗಡ ಮೂಲದ ರೆಜಿಲ್ ಹಾಗೂ ಪತ್ನಿ ಕಾರ್ತಿಕಾ ಇಬ್ಬರೂ ಫೋಟೋಶೂಟ್ ಸಲುವಾಗಿ ಕುಟ್ಟಿಯಾಡಿ ಸಮೀಪದ ನದಿಯ ದಂಡೆಯನ್ನು ಆರಿಸಿಕೊಂಡಿದ್ದರು. ಫೋಟೋಗಾಗಿ ಇಬ್ಬರೂ ನದಿಗೆ ಬಿದ್ದಿದ್ದರು. ಸಪೋರ್ಟ್ ಸಿಗದೆ ಕೂಗಾಡಿದ್ದಾರೆ. ಆಗ ಸ್ಥಳೀಯರು ಬಂದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರೆಜಿಲ್ ಪ್ರಾಣಬಿಟ್ಟಿದ್ದು, ಈಗ ಕಾರ್ತಿಕಾ ಒಂಟಿ ಜೀವನ ನಡೆಸುತ್ತಿದ್ದಾರೆ. ಫೋಟೋ ಶೂಟ್ ಆಸೆಗೆ ಜೀವವನ್ನೇ ಕಳೆದುಕೊಂಡಿದ್ದಾರೆ.  

ರಾಜಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲೆಂದು ಜೋಡಿಗಳು ಸಾವಿನ ದವಡೆಗೆ ಸಿಲುಕಿ ಬದುಕುಳಿದಿದ್ದಾರೆ. ಚುಲಿಯಾ ಫಾಲ್ಸ್ ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳು ಬಂಡೆ ಮೇಲೆ ನಿಂತಿದ್ದರು. ಡ್ಯಾಂನಲ್ಲಿ ಗೇಟ್ ಓಪನ್ ಆಗಿತ್ತು. ಇದನ್ನು ಗಮನಿಸಿದ ಕ್ಯಾಮರಾಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಸತತ 3 ಗಂಟೆಗಳ ಕಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಜೋಡಿಗಳನ್ನು ರಕ್ಷಿಸಿದ್ದಾರೆ. ನೋಡಿ.. ಕ್ಷಣದ ಸುಖಕ್ಕಾಗಿ ಹೀಗೆಲ್ಲಾ ತೊಂದರೆ ತೆಗೆದುಕೊಳ್ಳುವುದರ ಜೊತೆಗೆ ಜೀವವನ್ನೂ ಕಳೆದುಕೊಳ್ಳಬೇಕಾ..? ಯೋಚಿಸಿ, ನಿರ್ಧರಿಸಿ ಫ್ರೆಂಡ್ಸ್..